ಬೀದರ್, (ಜೂ. 26): ಮನೆಯ ಮೇಲ್ಛಾವಣಿ ಕುಸಿದು ಆರು ಮಂದಿ ಮೃತಪಟ್ಟಿರುವ ಘಟನೆ ಬುಧವಾರ ಬೆಳಗ್ಗೆ ಬೀದರ್ ನಲ್ಲಿ ನಡೆದಿದೆ.

ಬೀದರ್‌ನ ಬಸವಕಲ್ಯಾಣ ಪಟ್ಟಣದ ಚಿಲ್ಲಾಗಲ್ಲಿಯ ಬಡಾವಣೆಯ ನದೀಂ ಶೇಖ್(45),ಫರೀದಾ ಬೇಗಂ(34), ಆಯಿಷಾ ಬಾನು(15), ಮಹೆತಾಬಿ(15), ಫರ್ಹಾನ್ ಅಲಿ(4) ಮತ್ತು ಫಯಾಜ್‍ಖಾನ್(6) ಮೃತಪಟ್ಟ ದುರ್ದೈವಿಗಳು.

ಹಲವು ವರ್ಷಗಳಿಂದ ಮಣ್ಣಿನ ಮನೆಯಲ್ಲಿ ವಾಸಿಸುತ್ತಿದ್ದು, ಮಳೆಯಾಗಿದ್ದರಿಂದ ಮಣ್ಣು ನೆನೆದು ಮನೆಯ ಮೇಲ್ಛಾವಣಿ ಕುಸಿದೆ. ಪರಿಣಾಮ ಒಂದೇ ಕುಟುಂಬದ ಆರು ಸದಸ್ಯರು ಸಾವನ್ನಪ್ಪಿದ್ದಾರೆ.

ಸುದ್ದಿ ತಿಳಿದ ಪೊಲೀಸರು ಗ್ರಾಮಸ್ಥರ ನೆರವಿನೊಂದಿಗೆ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಬಸವಕಲ್ಯಾಣ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.