ಸಕಲೇಶಪುರ (ಆ.19):  ಗೋವುಗಳಿಗೆ ಆಹಾರದ ಮೂಲಕ ವಿಷಪ್ರಾಶನ ಮಾಡಿ ಕೊಂದಿರುವ ಅಮಾನವೀಯ ಘಟನೆ ತಾಲೂಕಿನ ಕುನಿಗನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಹೆಗ್ಗಾವೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಎಂದಿನಂತೆ ಗ್ರಾಮಸ್ಥರು ರಾಸುಗಳನ್ನು ಮೇಯಲು ಸೋಮವಾರ ಬೆಳಗ್ಗೆ ಹೊರಕ್ಕೆ ಬಿಟ್ಟಿದ್ದರು. ಆದರೆ ಸಂಜೆ ಕತ್ತಲಾಗುವುದರೊಳಗೆ ಮರಳಿ ಬರುತ್ತಿದ್ದ ದನಗಳಲ್ಲಿ ಕೆಲವರ ಮನೆಯ ದನಗಳು ಬರದೆ ಹೋಗಿದ್ದವು. ಚಿರತೆ ಕಾಟವೂ ಇದ್ದರಿಂದ ಏನೋ ಅನಾಹುತವಾಗಿರಬಹುದು ಎಂದು ಹುಡುಕಲು ಹೋದವರಿಗೆ ಉಬ್ಬರಿಸಿಕೊಂಡು ಸತ್ತು ಬಿದ್ದಿದ್ದ ಎರಡು ಗೋವುಗಳು ಕಾಣಿಸಿವೆ. ಅಲ್ಲದೇ ಕಾಫಿ ತೋಟದಲ್ಲಿ ಗೋವುಗಳು ತಿಂದಿದ್ದ ಹಲಸಿನ ಹಣ್ಣುಗಳು ಕಾಣಿಸಿವೆ.

ಜುಲೈ.4 ಹಲಸು ದಿನ: ಹಲಸೆಂಬ ಹಣ್ಣಿನ ಲೋಕದ ಸಾಮ್ರಾಟ..

ಇದಾದ ನಂತರ ಮರಳಿ ಬಂದಿದ್ದ ಹಸುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿದ್ದವರಿಗು ಶಾಕ್‌ ಕಾದಿತ್ತು. ಕಟ್ಟಿದ ಜಾಗದಲ್ಲೇ ಅವು ರಕ್ತ ಕಾರಿಕೊಂಡು ಪ್ರಾಣ ಬಿಟ್ಟಿದ್ದವು. ನಂಜಪ್ಪ, ಸುರೇಶ್‌, ಸುದೀಶ್‌ ಎಂಬುವರಿಗೆ ಸೇರಿದ 6 ಹಸುಗಳು ಸಾವನ್ನಪ್ಪಿವೆ.

ಹೆದ್ದಾರಿ ಬದಿ ಪ್ರಯಾಣಿಕರಿಗೆ ಉಚಿತ ಹಲಸಿನ ಹಣ್ಣು...

ಈ ಬಗ್ಗೆ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರತಾಪ್‌ ಎಂಬುವರು ಹಸುಗಳಿಗೆ ವಿಷ ಕೊಟ್ಟಿರುವ ಸಾಧ್ಯತೆಯಿದೆ ಎಂದು ದೂರು ದಾಖಲಿಸಿದ್ದಾರೆ.