ತುಮಕೂರು (ಆ.19): ತುಮಕೂರು ಜಿಲ್ಲೆಯಲ್ಲಿ ಮಂಗಳವಾರ ಹೊಸದಾಗಿ 108 ಜನರಿಗೆ ಕೋವಿಡ್‌ ಸೋಂಕು ತಗುಲಿದ್ದು ಒಟ್ಟು ಸೋಂಕಿತರ ಸಂಖ್ಯೆ 3578 ಕ್ಕೆ ಏರಿದೆ. 

ತುಮಕೂರು ನಗರದಲ್ಲಿ 57, ಗುಬ್ಬಿಯಲ್ಲಿ 4, ಕುಣಿಗಲ್‌ನಲ್ಲಿ 10, ಮಧುಗಿರಿಯಲ್ಲಿ 3, ಪಾವಗಡ 5, ಶಿರಾ 3, ತಿಪಟೂರು 9, ಚಿಕ್ಕನಾಯಕನಹಳ್ಳಿ 2, ಕೊರಟಗೆರೆ 6, ತುರುವೇಕೆರೆಯಲ್ಲಿ 9 ಮಂದಿಗೆ ಕೊರೋನಾ ಸೋಂಕು ತಗುಲಿದೆ. ಮಂಗಳವಾರ ಒಂದೇ ದಿನ 100 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ 2562 ಮಂದಿ ಗುಣಮುಖರಾಗಿದ್ದಾರೆ. 902 ಮಂದಿ ಸಕ್ರಿಯ ಸೋಂಕಿತರಿದ್ದಾರೆ.

ರಾಜ್ಯದಲ್ಲಿ ಒಂದೇದಿನ ಕೊರೋನಾಕ್ಕೆ 139 ಬಲಿ: 7665 ಕೇಸ್!...

ಜಿಲ್ಲೆಯಲ್ಲಿ ಕೊರೋನಾಗೆ ಮಂಗಳವಾರ 6 ಮಂದಿ ಮೃತಪಟ್ಟಿದ್ದಾರೆ. ತುಮಕೂರು ಸಪ್ತಗಿರಿ ಬಡಾವಣೆ 59 ವರ್ಷದ ಗಂಡು, ಶಿರಾ ಗೇಟ್‌ನ ಹೊಂಬೈನಾಪಾಳ್ಯದ 72 ವರ್ಷದ ಗಂಡು, ಮಹಾಲಕ್ಷ್ಮೇ ನಗರದ 55 ವರ್ಷದ ಗಂಡು, ಪಿ.ಎಚ್‌. ಕಾಲೋನಿಯ 70 ವರ್ಷದ ಗಂಡು, ಗುಬ್ಬಿ ತಾಲೂಕು ಚೇಳೂರು ಗ್ರಾಮದ 68 ವರ್ಷದ ಗಂಡು, ತಿಪಟೂರು ತಾಲೂಕು ವಿನಾಯಕ ನಗರದ 50 ವರ್ಷದ ಮಹಿಳೆ ಸೇರಿ 6 ಮಂದಿ ಸಾವನ್ನಪ್ಪಿದ್ದಾರೆ.