ಹೂವಿನಹಡಗಲಿ: 6 ಮಂದಿಗೆ ಚಿಕೂನ್‌ ಗುನ್ಯಾ, 2 ಡೆಂಘೀ ಪತ್ತೆ

*   ತುಂಬಿನಕೆರೆ ದೊಡ್ಡ ತಾಂಡಾದಲ್ಲಿ 6 ಚಿಕೂನ್‌ ಗುನ್ಯಾ, 2 ಡೆಂಘೀ ಪ್ರಕರಣಗಳು ಪತ್ತೆ
*   ಬಿತ್ಯಾನತಾಂಡಾದಲ್ಲಿ ಮತ್ತೆ 8 ಜನರಲ್ಲಿ ವಾಂತಿಭೇದಿ 
*   ಯಾವುದೇ ಅಪಾಯ ಇಲ್ಲ ಎಲ್ಲರ ಆರೋಗ್ಯದಲ್ಲಿ ಚೇತರಿಕೆ
 

6 Chikungunya and 2 Dengue Fever Cases at Huvina Hadagali in  Vijayanagara grg

ಹೂವಿನಹಡಗಲಿ(ಅ.13): ತಾಲೂಕಿನ(Huvina Hadagali) ತುಂಬಿನಕೆರೆ ದೊಡ್ಡ ತಾಂಡಾದಲ್ಲಿ 6 ಚಿಕೂನ್‌ ಗುನ್ಯಾ(Chikungunya), 2 ಡೆಂಘೀ(Dengue) ಪ್ರಕರಣಗಳು ಪತ್ತೆಯಾಗಿದ್ದು, ಈ 8 ಜನ ತಾಂಡಾದಲ್ಲಿನ ತಾತ್ಕಾಲಿಕ ಆಸ್ಪತ್ರೆಯಲ್ಲಿ(Hospital) ಚಿಕಿತ್ಸೆ(Treatment) ಪಡೆಯುತ್ತಿದ್ದಾರೆ.

ತುಂಬಿನಕೆರೆ ದೊಡ್ಡ ತಾಂಡಾದ ವೆಂಕಟೇಶ ನಾಯ್ಕ(35), ಸೀತಾಬಾಯಿ(30), ಕುಮಾರನಾಯ್ಕ(31), ಜಯನಾಯ್ಕ(50), ಶಾರದಾ(35), ರಂಜಿತಾ(18) ಅವರಿಗೆ ಚಿಕೂನ್‌ ಗುನ್ಯಾ ತಗುಲಿದೆ. ಜತೆಗೆ ಮೀರಾಬಾಯಿ(24), ಸೀತಾಬಾಯಿ(30) ಇವರಲ್ಲಿ ಡೆಂಘೀ ಜ್ವರ(Fever) ಪತ್ತೆಯಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ವಿನೋದ್‌ ತಿಳಿಸಿದ್ದಾರೆ.

ದಾವಣಗೆರೆಯಲ್ಲಿ ಡೆಂಘೀಗೆ 8ನೇ ತರಗತಿ ಬಾಲಕಿ ಬಲಿ

ವಾಂತಿಭೇದಿ:

ತಾಲೂಕಿನ ಬಿತ್ಯಾನತಾಂಡಾದಲ್ಲಿ ಮತ್ತೆ 8 ಜನರಲ್ಲಿ ವಾಂತಿಭೇದಿ ಕಾಣಿಸಿಕೊಂಡಿದ್ದು, ಅವರಿಗೆ ಹೂವಿನಹಡಗಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಯಾವುದೇ ಅಪಾಯ ಇಲ್ಲ ಎಲ್ಲರ ಆರೋಗ್ಯದಲ್ಲಿ(Health) ಚೇತರಿಕೆ ಕಂಡಿದೆ. ಅ. 2ರಿಂದ ಈವರೆಗೂ ಬಿತ್ಯಾನ ತಾಂಡಾದಲ್ಲಿ ಒಟ್ಟು 22 ಜನರಿಗೆ ವಾಂತಿಭೇದಿಯಾಗಿತ್ತು. ಇದರಲ್ಲಿ ಹೂವಿನಹಡಗಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ 4 ಜನ, ದಾವಣಗೆರೆ(Davanagere) ಆಸ್ಪತ್ರೆಯಲ್ಲಿ 1 ಮಗು ಚಿಕಿತ್ಸೆ ಪಡೆಯತ್ತಿದ್ದಾರೆ.
 

Latest Videos
Follow Us:
Download App:
  • android
  • ios