Asianet Suvarna News

ಶಾಸಕ ಪಿಟಿ ಪರಮೇಶ್ವರ್ ನಾಯ್ಕ್ ತಮ್ಮನ ಮೇಲೆ ಹಲ್ಲೆ ಪ್ರಕರಣ: 6 ಮಂದಿ ಅರೆಸ್ಟ್‌

* ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಕಾಂಗ್ರೆಸ್‌ ಪಿಟಿ ಪರಮೇಶ್ವರ್ ನಾಯ್ಕ್
* ಶಿವಾಜಿ ನಾಯ್ಕ್ ಹಲ್ಲೆ ಪ್ರಕರಣ
* ಬಂಧಿತರು ಹೂವಿನ ಹಡಗಲಿ ಜೈಲಿಗೆ ಸ್ಥಳಾಂತರ

6 Arrested of Assault on MLA PT Parameshwar Naiks Brother grg
Author
Bengaluru, First Published Jul 4, 2021, 1:07 PM IST
  • Facebook
  • Twitter
  • Whatsapp

ದಾವಣಗೆರೆ(ಜು.04): ವಿಜಯನಗರ ಜಿಲ್ಲೆಯ ಹೂವಿನಹಡಗಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಪಿಟಿ ಪರಮೇಶ್ವರ್ ನಾಯ್ಕ್ ಅವರ ಸಹೋದರ ಶಿವಾಜಿ ನಾಯ್ಕ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಕಡೆಯಿಂದ 6 ಜನರನ್ನ ಬಂಧಿಸಿದ ಅರಿಸೀಕೆರೆ ಪೊಲೀಸರು ಇಂದು(ಭಾನುವಾರ) ಬಂಧಿಸಿದ್ದಾರೆ. 

ದೂರು ಪ್ರತಿ ದೂರು ದಾಖಲಾದ ಹಿನ್ನಲೆಯಲ್ಲಿ ಎರಡು ಕಡೆಗೂ 6 ಜನರನ್ನ ಬಂಧಿಸಲಾಗಿದೆ. ಪಿಟಿ ಪರಮೇಶ್ವರ್ ನಾಯ್ಕ್ ತಮ್ಮ ಶಿವಾಜಿ ನಾಯ್ಕ್ ಆತನ ಪತ್ನಿ ಕುಮಾರಿ ಭಾಯಿ, ಪುತ್ರ ರಾಹುಲ್‌ ಅವರನ್ನ ಪೊಲೀಸರು ಬಂಧಿಸಿದ್ದಾರೆ. ಇತ್ತ ಹಲ್ಲೆಗೊಳಗಾದ ಜಗದೀಶ್, ಆತನ ಪತ್ನಿ ಶ್ರೀದೇವಿ, ಜಗದೀಶ್ ಅಣ್ಣ ಶಿವಕುಮಾರ್‌ನನ್ನೂ ಬಂಧನವಾಗಿದೆ. 

ಡಿಕೆಶಿ, ಶ್ರೀರಾಮುಲು, ಪರಮೇಶ್ವರ್ ನಾಯ್ಕ್, ರಾಘವೇಂದ್ರ ರಾಜಕುಮಾರ್ ವಿರುದ್ಧ ದೂರು

ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ನಿನ್ನೆ ನಿನ್ನೆ ದೂರು ಪ್ರತಿ ದೂರು ದಾಖಲಾಗುತ್ತಿದ್ದಂತೆ 6 ಜನರ ಬಂಧನವಾಗಿದೆ. ಬಂಧಿತರನ್ನ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ಜೈಲಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.  
 

Follow Us:
Download App:
  • android
  • ios