Asianet Suvarna News Asianet Suvarna News

ಶುಕ್ರವಾರ ರಾತ್ರಿ 10ರಿಂದ 55ತಾಸು Weekend Curfew: ಯಾರಿಗೆಲ್ಲ ವಿನಾಯ್ತಿ? ಇಲ್ಲಿದೆ ಮಾಹಿತಿ!

*ಒಮಿಕ್ರೋನ್‌ ಪತ್ತೆ ಬಳಿಕ ಮೊದಲ ವೀಕೆಂಡ್‌ ಕರ್ಫ್ಯೂ
*ಐದೂವರೆ ತಿಂಗಳ ನಂತರ ರಾಜ್ಯದಲ್ಲಿ ಮತ್ತೆ ನಿರ್ಬಂಧ
*ವಿನಾಯ್ತಿ ಯಾರಿಗೆ? ಯಾವುದಕ್ಕೆ ನಿರ್ಬಂಧ? ಇಲ್ಲಿದೆ ಮಾಹಿತಿ!
 

55 Hours of weekend curfew to start in Karnataka from 10PM on Friday mnj
Author
Bengaluru, First Published Jan 7, 2022, 5:25 AM IST

ಬೆಂಗಳೂರು (ಜ. 7): ರಾಜ್ಯದಲ್ಲಿ ಐದೂವರೆ ತಿಂಗಳ ಬಳಿಕ ಮತ್ತೆ ವಾರಾಂತ್ಯದ ಕರ್ಫ್ಯೂ (Weekend Curfew) ಜಾರಿಯಾಗುತ್ತಿದೆ. ಜ.7ರ ಶುಕ್ರವಾರ ರಾತ್ರಿ 10ರಿಂದ ಜ. 10ರ ಸೋಮವಾರ ಬೆಳಿಗ್ಗೆ 5ರವರೆಗೂ ರಾಜ್ಯಾದ್ಯಂತ ಕರ್ಫ್ಯೂ ಇರಲಿದ್ದು, ತುರ್ತು ಸೇವೆಗಳಿಗೆ (Emergency Service) ಮಾತ್ರ ಅನುಮತಿ ನೀಡಲಾಗಿದೆ.ಕೊರೋನಾ ಸೋಂಕು (Covid 19) ಹತೋಟಿಗೆ ಸರ್ಕಾರ ಡಿ.28ರಿಂದ 19ರವರೆಗೆ ರಾತ್ರಿ ಕರ್ಫ್ಯೂ ಜಾರಿಗೊಳಿಸಿದೆ. ಆದರೆ ಸೋಂಕಿನ ಪ್ರಕರಣ ಹೆಚ್ಚಾಗುತ್ತಿದ್ದಂತೆ ಇನ್ನಷ್ಟುಕಠಿಣ ಕ್ರಮ ಕೈಗೊಂಡಿದೆ. ಜ.19ವರೆಗೂ ನಿತ್ಯ ರಾತ್ರಿ ಕರ್ಫ್ಯೂ ಮತ್ತು ಮುಂದಿನ ಎರಡು ವಾರಾಂತ್ಯಗಳಲ್ಲಿ ಸಂಪೂರ್ಣ ಕರ್ಫ್ಯೂ ಜಾರಿಯಲ್ಲಿರಲಿದೆ.

ಮೂರನೇ ಅಲೆಯಲ್ಲಿ ಮೊದಲ ವಾರಾಂತ್ಯದ ಕಫä್ರ್ಯ ಇದಾಗಿದೆ. ಎರಡನೇ ಅಲೆಯಲ್ಲಿ ಏಪ್ರಿಲ್‌ನಿಂದ ಜೂನ್‌ವರೆಗೂ ಕರ್ಫ್ಯೂ ಜಾರಿಯಲ್ಲಿತ್ತು. ಸದ್ಯ 162 ದಿನಗಳ ಬಳಿಕ 55 ಗಂಟೆಗಳ ಬಿಗಿ ನಿರ್ಬಂಧ ಜಾರಿಯಾಗುತ್ತಿದೆ. ರಾತ್ರಿ ಕರ್ಫ್ಯೂಗಿಂತಲೂ ಬಿಗಿಯಾಗಿ ವಾರಾಂತ್ಯದ ಕರ್ಫ್ಯೂ ಜಾರಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದ್ದು, ಪೊಲೀಸ್‌ ಇಲಾಖೆ ಅಗತ್ಯ ಬಂದೋಬಸ್‌್ತಗೆ ವ್ಯವಸ್ಥೆ ಮಾಡಿಕೊಳ್ಳುತ್ತಿದೆ.

ಇದನ್ನೂ ಓದಿ: Weekend Curfew Bengaluru: ಬಿಎಂಟಿಸಿ ಬಸ್‌ ಬರಲ್ಲ, ಮೆಟ್ರೋ ರೈಲು ಸೀಮಿತ ಸಂಚಾರ!

ಗುರುವಾರದಿಂದಲೇ ಹೊಸ ಮಾರ್ಗಸೂಚಿ ಅನ್ವಯ ಶೇ.50ರಷ್ಟುಆಸನ ನಿರ್ಬಂಧ ನಿಯಮ ಜಾರಿಯಾಗಿದೆ. ರಾಜ್ಯಾದ್ಯಂತ ಹೋಟೆಲ್‌, ರೆಸ್ಟೋರೆಂಟ್‌, ಬಾರ್‌, ಸರ್ಕಾರಿ ಕಚೇರಿ, ಈಜುಕೊಳ, ಕ್ರೀಡಾಂಗಣ, ಸಿನಿಮಾ ಮಂದಿರ ಸೇರಿದಂತೆ ಜನದಟ್ಟಣೆ ಹೆಚ್ಚಿರುವ ಪ್ರದೇಶಗಳಲ್ಲಿ ಒಟ್ಟಾರೆ ಆಸನ ಪೈಕಿ ಶೇ.50 ರಷ್ಟುಭರ್ತಿಯೊಂದಿಗೆ ಕಾರ್ಯಾಚರಣೆ ನಡೆಸಿದವು. ಜತೆಗೆ ಬೆಂಗಳೂರಿನಲ್ಲಿ 10, 11 ಹಾಗೂ 12ನೇ ತರಗತಿ ಹೊರತು ಪಡಿಸಿ ಶಾಲಾ/ಕಾಲೇಜುಗಳ ತರಗತಿಗಳನ್ನು ಬಂದ್‌ ಮಾಡಲಾಗಿತ್ತು.

ವಿನಾಯ್ತಿ ಯಾರಿಗೆ?

- ರೋಗಿಗಳು ಮತ್ತು ಅವರ ಸಹಾಯಕರು.

- ಕೈಗಾರಿಕೆ, ಖಾಸಗಿ ಕಂಪನಿಗಳ ಉದ್ಯೋಗಿಗಳು, ಇ- ಕಾಮರ್ಸ್‌, ಫುಡ್‌ ಹೋಂ ಡೆಲಿವರಿ ಉದ್ಯೋಗಿಗಳು, ಟೆಲಿಕಾಂ ಸೇವಾ ಕಂಪನಿ, ಸಾರಿಗೆ ಇಲಾಖೆ ಉದ್ಯೋಗಿಗಳು ಕಂಪನಿ ಐಡಿಯೊಂದಿಗೆ ಓಡಾಟ ನಡೆಸಬಹುದು.

- ಸರಕು ಸಾಗಣೆ ವಾಹನಗಳು(ಖಾಲಿ ವಾಹನವೂ ಸೇರಿದಂತೆ)

- ದಿನಸಿ, ಆಹಾರ ವ್ಯಾಪಾರ, ಬೀದಿ ವ್ಯಾಪಾರ ಚಟುವಟಿಕೆಗೆ ಅನುಮತಿ

- ಹೋಟೆಲ್‌, ರೆಸ್ಟೋರೆಂಟ್‌ಗಳ ಪಾರ್ಸೆಲ್‌ ಸೇವೆ ಮಾತ್ರ

- ವೈದ್ಯಕೀಯ, ತುರ್ತು ಹಾಗೂ ಅಗತ್ಯ ಸೇವೆಗಳು, ಔಷಧ ಮಳಿಗೆಗಳ ಸಿಬ್ಬಂದಿ

- ಮದುವೆಗಳಿಗೆ ತೆರೆದ ಪ್ರದೇಶದಲ್ಲಿ 200, ಸಭಾಂಗಣದಲ್ಲಿ 100 ಮಂದಿಗೆ ಮಾತ್ರ ಅವಕಾಶ

ಇದನ್ನೂ ಓದಿ: Covid 19 Guidelines: ಬೆಂಗಳೂರು ಹೊರಗೆ ಕೋವಿಡ್ ನಿರ್ಬಂಧ ಸಡಿಲ?

ಯಾವುದಕ್ಕೆ ನಿರ್ಬಂಧ?

ತುರ್ತು ಸೇವಾ ವಲಯ ಹೊರತುಪಡಿಸಿ ಎಲ್ಲ ವಾಣಿಜ್ಯ ಚಟುವಟಿಕೆ, ಸರ್ಕಾರಿ ಮತ್ತು ಖಾಸಗಿ ಶಾಲೆಗಳು, ಉದ್ಯಾನ, ಎಲ್ಲ ಮಾದರಿ ಕಚೇರಿಗಳು ಬಂದ್‌, ಮದುವೆ ಹೊರತುಪಡಿಸಿ ಎಲ್ಲಾ ವಿಧದ ಕಾರ್ಯಕ್ರಮ.

*ಸಾರಿಗೆ ವ್ಯವಸ್ಥೆ

ರೈಲು, ವಿಮಾನ, ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ ಸಂಚಾರ ಇದೆ.

ಬಿಎಂಟಿಸಿ ಸಾರ್ವಜನಿಕ ಸೇವೆ ಇಲ್ಲ (ತುರ್ತು ಅಗತ್ಯ ಸೇವಾ ವಲಯಕ್ಕೆ ಮಾತ್ರ)

 ಬಿಎಂಟಿಸಿ ಬಸ್‌ ಬರಲ್ಲ, ಮೆಟ್ರೋ ರೈಲು ಸೀಮಿತ ಸಂಚಾರ!

ಕೊರೋನಾ ಸೋಂಕು (Covid 19) ಹರಡುವುದನ್ನು ನಿಯಂತ್ರಿಸಲು ಸರ್ಕಾರ ಜಾರಿ ಮಾಡಿರುವ ವಾರಾಂತ್ಯ ಕಫä್ರ್ಯ ಹಿನ್ನೆಲೆಯಲ್ಲಿ ಶನಿವಾರ ಮತ್ತು ಭಾನುವಾರ ನಗರದಲ್ಲಿ ಬಸ್‌ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲು ಬಿಎಂಟಿಸಿ ನಿರ್ಧರಿಸಿದೆ. ತುರ್ತು ಸೇವೆ ವಲಯದಲ್ಲಿ ಸೇವೆ ಸಲ್ಲಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಹೊರತು ಪಡಿಸಿ ಇತರೆ ಸಾಮಾನ್ಯ ಪ್ರಯಾಣಿಕರ ಸಂಚಾರಕ್ಕೆ ಅವಕಾಶ ಇಲ್ಲದಂತೆ ಕ್ರಮ ವಹಿಸಲು ನಿರ್ಧರಿಸಿರುವುದಾಗಿ ಬಿಎಂಟಿಸಿ (BMTC) ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್‌ ತಿಳಿಸಿದ್ದಾರೆ. ಇನ್ನು ಕೊರೋನಾ ಸೋಂಕು ಹರಡುವಿಕೆ ತಡೆಯಲು ರಾಜ್ಯ ಸರ್ಕಾರ ವಾರಾಂತ್ಯದ ಕರ್ಫ್ಯೂ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ವಾರಾಂತ್ಯದ ದಿನದಲ್ಲಿ ಮೆಟ್ರೋ ರೈಲು ಸೇವೆ ಬೆಳಗ್ಗೆ 8ರಿಂದ ರಾತ್ರಿ 9ರ ತನಕ ಮಾತ್ರ ಇರಲಿದೆ ಎಂದು ಬೆಂಗಳೂರು ಮೆಟ್ರೋ ನಿಗಮ ತಿಳಿಸಿದೆ.

Follow Us:
Download App:
  • android
  • ios