ರಾಜ್ಯದಲ್ಲಿ ಕೊರೋನಾ ಹರಡುವ ವೇಗ ಮುಂದುವರೆದಿದ್ದು, ಶನಿವಾರ 5,172 ಮಂದಿಗೆ ಹೊಸತಾಗಿ ಸೋಂಕು ದೃಢಪಟ್ಟಿದೆ. 98 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 1,29,287ಕ್ಕೆ ಏರಿಕೆಯಾಗಿದ್ದು, ಒಟ್ಟು 2,412 ಮಂದಿ ಸೋಂಕಿಗೆ ಬಲಿಯಾದಂತಾಗಿದೆ.

ಬೆಂಗಳೂರು(ಆ.02): ರಾಜ್ಯದಲ್ಲಿ ಕೊರೋನಾ ಹರಡುವ ವೇಗ ಮುಂದುವರೆದಿದ್ದು, ಶನಿವಾರ 5,172 ಮಂದಿಗೆ ಹೊಸತಾಗಿ ಸೋಂಕು ದೃಢಪಟ್ಟಿದೆ. 98 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 1,29,287ಕ್ಕೆ ಏರಿಕೆಯಾಗಿದ್ದು, ಒಟ್ಟು 2,412 ಮಂದಿ ಸೋಂಕಿಗೆ ಬಲಿಯಾದಂತಾಗಿದೆ.

ಇನ್ನು ಶನಿವಾರ 3,860 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಒಟ್ಟು ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 50 ಸಾವಿರದ ಗಡಿ ದಾಟಿ 53,648ಕ್ಕೆ ಏರಿಕೆಯಾಗಿದೆ. 73219 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 602 ಮಂದಿ ಐಸಿಯುನಲ್ಲಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಶನಿವಾರ ಬೆಂಗಳೂರು ನಗರದಲ್ಲಿ 1,852 ಮಂದಿಗೆ ಸೋಂಕು ದೃಢಪಟ್ಟಿದ್ದು, 37,760 ಮಂದಿಗೆ ಸೋಂಕು ತಗಲಿದಂತಾಗಿದೆ. ಬೆಂಗಳೂರಿನಲ್ಲಿ 27 ಮಂದಿ ಮೃತಪಟ್ಟಿದ್ದು, ಒಟ್ಟು ಸಾವು 1,056ಕ್ಕೆ ತಲುಪಿದೆ.

ಇಂದಿನಿಂದ ಸಂಡೇ ಲಾಕ್‌ಡೌನ್‌ ಇಲ್ಲ, ರಾತ್ರಿ ಕರ್ಫ್ಯೂ ಕೂಡ ತೆರವು

ಶನಿವಾರ 34,760 ಮಂದಿಗೆ ಸೋಂಕು ಪರೀಕ್ಷೆ ನಡೆಸಿದ್ದು, ಈ ಪೈಕಿ 5172 ಮಂದಿಗೆ ಸೋಂಕು ತಗಲಿದೆ. ಇದರಲ್ಲಿ ಬೆಂಗಳೂರು ನಗರದಲ್ಲಿ 1852 ಮಂದಿಗೆ ಸೋಂಕು ವರದಿಯಾಗಿದ್ದು, ಉಳಿದ ಶೇ.65ರಷ್ಟುಪ್ರಕರಣಗಳು ಬೆಂಗಳೂರೇತರ ಜಿಲ್ಲೆಗಳಲ್ಲಿ ವರದಿಯಾಗಿವೆ. ಕಳೆದ ಕೆಲವು ವಾರಗಳಿಂದ ಶೇ.45ರಿಂದ ಶೇ.50ರಷ್ಟುಪ್ರಕರಣಗಳು ಬೆಂಗಳೂರು ನಗರದಲ್ಲೇ ವರದಿಯಾಗುತ್ತಿದ್ದವು. ಕ್ರಮವಾಗಿ ಬೆಂಗಳೂರಿನ ಪ್ರಕರಣಗಳಿಂತ ಇತರೆ ಜಿಲ್ಲೆಗಳಲ್ಲಿ ಸೋಂಕಿನ ವೇಗ ಹೆಚ್ಚುತ್ತಿದೆ. ಇದಕ್ಕೆ ಪೂರಕವಾಗಿ ಶನಿವಾರ ಚಾಮರಾಜನಗರದಲ್ಲಿ 43, ರಾಮನಗರದಲ್ಲಿ 51 ಪ್ರಕರಣ ವರದಿಯಾಗಿದೆ.

40 ವರ್ಷದೊಳಗಿನ 7 ಮಂದಿ ಸಾವು:

ಶನಿವಾರ ಬೆಂಗಳೂರಿನಲ್ಲಿ 27 ಮಂದಿ, ಮೈಸೂರು 9, ಧಾರವಾಡ 8, ದಕ್ಷಿಣ ಕನ್ನಡ 8, ಉಡುಪಿ 6, ಕಲಬುರಗಿ 5, ಬೆಳಗಾವಿ 4, ಶಿವಮೊಗ್ಗ 4, ಬೀದರ್‌ 4, ಚಿತ್ರದುರ್ಗ 3, ಯಾದಗಿರಿ 3, ಕೊಪ್ಪಳ 2, ತುಮಕೂರು 2, ಗದಗ 2, ಬಳ್ಳಾರಿ 1, ಹಾಸನ 2, ವಿಜಯಪುರ 1, ಮಂಡ್ಯ 1, ಚಿಕ್ಕಬಳ್ಳಾಪುರ 1, ಉತ್ತರ ಕನ್ನಡ 1 ಸೇರಿ ಒಟ್ಟು 98 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಕಲಬುರಗಿಯಲ್ಲಿ 40 ವರ್ಷದ ಮಹಿಳೆ, 36 ವರ್ಷದ ವ್ಯಕ್ತಿ, ಶಿವಮೊಗ್ಗದಲ್ಲಿ 39 ವರ್ಷದ ವ್ಯಕ್ತಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 36 ವರ್ಷದ ಮಹಿಳೆ, ಬೆಂಗಳೂರು ನಗರದಲ್ಲಿ 31 ವರ್ಷದ ವ್ಯಕ್ತಿ, ಯಾದಗಿರಿಯಲ್ಲಿ 32 ರ್ಷದ ವ್ಯಕ್ತಿ, ಬೆಂಗಳೂರು ನಗರದಲ್ಲಿ 35 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದು, 40 ವರ್ಷದೊಳಗಿನ 7 ಮಂದಿ ಮೃತಪಟ್ಟಿರುವುದು ಆತಂಕ ಮೂಡಿಸಿದೆ.

ಮೈಸೂರಿನಲ್ಲಿ ಸೋಂಕು ಹೆಚ್ಚಳ:

ಬೆಂಗಳೂರು ಬಳಿಕ ಮೈಸೂರಿನಲ್ಲಿ ಸೋಂಕು ಅಧಿಕವಾಗಿದ್ದು ಮೈಸೂರು 365, ಬಳ್ಳಾರಿ 269 ಕಲಬುರಗಿ 219, ಬೆಳಗಾವಿ 219, ಧಾರವಾಡ 184, ಹಾಸನ 146, ದಕ್ಷಿಣ ಕನ್ನಡ 139, ಉಡುಪಿ 136, ಬಾಗಲಕೋಟೆ 134, ವಿಜಯಪುರ 129, ಶಿವಮೊಗ್ಗ 119, ರಾಯಚೂರು 109, ದಾವಣಗೆರೆ 108, ಕೊಪ್ಪಳ 107, ತುಮಕೂರು, ಗದಗ ತಲಾ 99, ಮಂಡ್ಯ 95, ಬೆಂಗಳೂರು ಗ್ರಾಮಾಂತರ 93, ಚಿಕ್ಕಬಳ್ಳಾಪುರ 72, ಚಿತ್ರದುರ್ಗ 60, ಚಿಕ್ಕಮಗಳೂರು 57, ಬೀದರ್‌, ಹಾವೇರಿ ತಲಾ 52, ಉತ್ತರ ಕನ್ನಡ, ರಾಮನಗರ ತಲಾ 51, ಚಾಮರಾಜನಗರ 43, ಯಾದಗಿರಿ 39, ಕೋಲಾರ 39, ಕೊಡಗು 35 ಪ್ರಕರಣ ವರದಿಯಾಗಿದೆ.

* ಶನಿವಾರದ ಸೋಂಕು - 5,172

* ಒಟ್ಟು ಸೋಂಕು - 1,29,287

* ಒಟ್ಟು ಸಾವು - 2,412

* ಕ್ವಾರಂಟೈನ್‌ನಲ್ಲಿರುವವರ ಸಂಖ್ಯೆ: 2.05 ಲಕ್ಷ