ಉಡುಪಿ ಪರ್ಯಾಯೋತ್ಸವಕ್ಕೆ 500 ವರ್ಷ

ಕೃಷ್ಣಮಠದಲ್ಲಿ ದ್ವೈವಾರ್ಷಿಕ ಪರ್ಯಾಯೋತ್ಸವ ಪದ್ಧತಿ ಆರಂಭವಾಗಿ 500 ವರ್ಷಗಳಾಗಿವೆ. ಈ ನಿಟ್ಟಿನಲ್ಲಿ ಇಲ್ಲಿ ಪರ್ಯಾಯ ಪಂಚ ಶತಮಾನೋತ್ಸವವನ್ನು ಉದ್ಘಾಟಿಸಲಾಗಿದೆ. 

500 Years Completed for udupi paryayotsav snr

ಉಡು​ಪಿ (ಜ.18):  ಕೃಷ್ಣಮಠದಲ್ಲಿ ದ್ವೈವಾರ್ಷಿಕ ಪರ್ಯಾಯೋತ್ಸವ ಪದ್ಧತಿ ಆರಂಭವಾಗಿ 500 ವರ್ಷಗಳಾದ ಪ್ರಯುಕ್ತ ಪರ್ಯಾಯ ಪಂಚ ಶತಮಾನೋತ್ಸವವನ್ನು ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ ಪರ್ಯಾಯ ಅದಮಾರು ಮಠಾಧೀಶ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಭಾನು​ವಾ​ರ ಉದ್ಘಾಟಿಸಿದರು.

ಈ ಸಂದರ್ಭ ಕರ್ಣಾಟಕ ಬ್ಯಾಂಕ್‌ನ ಅಧ್ಯಕ್ಷ ಎಂ.ಎಸ್‌.ಮಹಾಬಲೇಶ್ವರ ರಾವ್‌, ಕಟೀಲು ಕ್ಷೇತ್ರದ ಅನುವಂಶಿಕ ಮೊಕ್ತೇಸರ- ಅರ್ಚಕರಾದ ವಾಸುದೇವ ಆಸ್ರಣ್ಣ, ದಕ್ಷಿಣ ಕನ್ನಡ- ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಮಹಾಮಂಡಳಿಯ ಅಧ್ಯಕ್ಷ ಯಶಪಾಲ್‌ ಸುವರ್ಣ ಇದ್ದರು. ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕರಾದ ವಿ.ಹರಿನಾರಾಯಣ ಆಸ್ರಣ್ಣರು ಪ್ರಸ್ತಾವನೆಗೈದರು.

ಉಡುಪಿಯಲ್ಲಿ ಮಕರ ಸಂಕ್ರಾತಿ ಹಗಲು ತೇರು ಉತ್ಸವ ವೈಭವ; ಪೋಟೋಗಳು

23ರವರೆಗೆ ರಾಷ್ಟ್ರೀಯ ಮೇಳ :  ಪರ್ಯಾಯ ಪಂಚಶತಮಾನೋತ್ಸವದ ಅಂಗವಾಗಿ ರಾಷ್ಟ್ರಮಟ್ಟದ ಗ್ರಾಮೀಣ ಉತ್ಪನ್ನಗಳ ಮೇಳ ಆಯೋಜಿಸಲಾಗಿದೆ. ಜ.23ರವರೆಗೆ ಈ ಮೇಳ ಸಾರ್ವಜನಿಕರಿಗೆ ಮುಕ್ತವಾಗಿದೆ. ಈ ಮೇಳದಲ್ಲಿ ದೇಶದ ವಿವಿಧ ರಾಜ್ಯಗಳ ಚಿತ್ರಕಲೆ, ಲೋಹಶಿಲ್ಪ, ಎರಕಶಿಲ್ಪ, ಗೋಂದು ಕಲಾಕೃತಿ, ಮಣ್ಣು, ಹುಲ್ಲಿನ ಕಲಾಕೃತಿಗಳ ಪ್ರದರ್ಶನ ಇದೆ. ಜೊತೆಗೆ ಬೆಳಗಾವಿ, ಹುಬ್ಬಳ್ಳಿ, ಬಿಜಾಪುರ, ಕುಂದಾಪುರ ಭಾಗದ ಚರ್ಮದ ಉತ್ಪನ್ನಗಳು, ಬುಟ್ಟಿಗಳು, ಆಟಿಕೆಗಳು, ಗುಳೆದಗುಡ್ಡೆ, ಇಳಕಲ್‌, ಉಡುಪಿ ಸೀರೆಗಳೂ ಮನ ಸೆಳೆಯುತ್ತಿವೆ.

Latest Videos
Follow Us:
Download App:
  • android
  • ios