Chikkaballapur ಜಿಲ್ಲಾದ್ಯಂತ 500 ಹೆಕ್ಟೇರ್‌ ಹಸಿರು ಪ್ರದೇಶ ಹೆಚ್ಚಳ

*  ಭಾರತೀಯ ಅರಣ್ಯ ಸರ್ವೇ ನಡೆಸಿದ ಉಪಗ್ರಹ ಸಮೀಕ್ಷೆಯಲ್ಲಿ ವರದಿ ದಾಖಲು
*  ನಂದಿಗಿರಿ, ಸ್ಕಂದಗಿರಿ ಸುತ್ತಲೂ ಹಸಿರು ಹೊದಿಕೆ
*  ಅರಣ್ಯೀಕರಣ ಹೆಚ್ಚಳದಿಂದ ಹಸಿರು ಪರಿಸರ ಹೆಚ್ಚಳ
 

500 Hectares of Green Area Increase in Chikkaballapur grg

ಕಾಗತಿ ನಾಗರಾಜಪ್ಪ

ಚಿಕ್ಕಬಳ್ಳಾಪುರ(ಫೆ.15): ಒಂದು ಕಾಲಕ್ಕೆ ಬರದನಾಡಾಗಿ ಬೇಸಿಗೆ(Summer)  ಬಂದರೆ ಹಸಿರು ಇಲ್ಲದೇ ಬಟಾ ಬಯಲು ಪ್ರದೇಶದಂತೆ ಭಾಸವಾಗುತ್ತಿದ್ದ ಜಿಲ್ಲೆಯಲ್ಲಿ ಇತ್ತೀಚೆಗೆ ಅರಣೀಕರಣ ಸಂರಕ್ಷಣೆಗೆ ಕೈಗೊಂಡ ಹಲವು ಕ್ರಮಗಳಿಂದಾಗಿ ಜಿಲ್ಲಾದ್ಯಂತ ಗಣನೀಯ ಪ್ರಮಾಣದಲ್ಲಿ ಹಸಿರು ಪ್ರದೇಶ ಹೆಚ್ಚಳವಾಗಿರುವುದು ಕಂಡು ಬಂದಿದೆ.

ಹೌದು, ಫಾರೆಸ್ಟ್‌ ಸರ್ವೆ ಆಫ್‌ ಇಂಡಿಯಾ(Forest Survey of India) ಇತ್ತೀಚೆಗೆ ನಡೆಸಿದ ಸ್ಯಾಟ್‌ಲೈಟ್‌ ಸಮೀಕ್ಷೆಯಲ್ಲಿ(Satellite Survey) ಜಿಲ್ಲೆಯಲ್ಲಿ ಹಸಿರು ಪ್ರದೇಶದಲ್ಲಿ(Green Area) ಬರೋಬ್ಬರಿ 500 ಹೆಕ್ಟೇರ್‌ ಪ್ರದೇಶದಷ್ಟು ಹೆಚ್ಚಳ ಕಂಡಿರುವುದು ಕಂಡು ಬಂದಿದ್ದು ಜಿಲ್ಲೆಯ ಪಾಲಿಗೆ ಇದು ತುಸು ಸಮಾಧಾನ ತಂದಿರುವುದು ಜೊತೆಗೆ ಹಸಿರು ಪ್ರದೇಶ ಹೆಚ್ಚಳದಿಂದ ಜಿಲ್ಲೆಯ ಜೀವ ವೈವಿದ್ಯತೆಗೆ ಹೆಚ್ಚು ಬಲ ತುಂಬಿದಂತೆ ಆಗಿದೆ.

ಪ್ರಪಂಚದ 90 ದೇಶಗಳಲ್ಲಿ ಒಟ್ಟು 44 ಮಿಲಿಯನ್ ಮರಗಳು: 73,300 ಪ್ರಭೇದಗಳನ್ನು ಗುರುತಿಸಿದ ವಿಜ್ಞಾನಿಗಳು!

ಹಸಿರು ಪರಿಸರ ಹೆಚ್ಚಳ:

ಹಲವು ದಶಕಗಳಿಂದ ಯಾವುದೇ ಶಾಶ್ವತ ನೀರಾವರಿ ಸೌಲಭ್ಯವೂ ಇಲ್ಲದೇ ಇತ್ತ ಸಕಾಲಕ್ಕೆ ಮಳೆ ಆಗದೇ ಬರದಿಂದ ಕಂಗೆಟ್ಟಿದ್ದ ಜನತೆಗೆ ಬೇಸಿಗೆ ಬಂದರೆ ಉರಿಬಿಸಿಲಿನ ಅರ್ಭಟ ಹೆಚ್ಚಾಗುತ್ತಿತ್ತು. ಆದರೆ ಇತ್ತೀಚೆಗೆ ಜಿಲ್ಲಾದ್ಯಂತ ಹಸಿರು ಪ್ರದೇಶದಲ್ಲಿ ಹೆಚ್ಚಳ ಕಂಡಿರುವುದು ಕಂಡು ಬಂದಿದ್ದು ಜಿಲ್ಲೆಯಲ್ಲಿ 1,250 ಎಕರೆಯಷ್ಟು ಹಸಿರು ಪ್ರದೇಶ ಹೆಚ್ಚಳ ಕಂಡಿರುವುದು ಫಾರೆಸ್ಟ್‌ ಸರ್ವೆ ಆಫ್‌ ಇಂಡಿಯಾ ನಡೆಸಿರುವ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ. ಜಿಲ್ಲೆಯಲ್ಲಿ ಒಟ್ಟು 77,050 ಹೆಕ್ಟೇರ್‌ ಪ್ರದೇಶದಲ್ಲಿ ಅರಣ್ಯ ಪ್ರದೇಶ ಇದೆ. ಆದರೆ ಅರಣ್ಯ ಪ್ರದೇಶದಲ್ಲಿ ಹೆಚ್ಚಳ ಕಾಣದೇ ಇದ್ದರೂ ಹಸಿರು ಪರಿಸರದಲ್ಲಿ ಹೆಚ್ಚಳವಾಗಿರುವುದು ಸರ್ವೆ ವೇಳೆ ಸ್ಪಷ್ಟವಾಗಿದೆ.

ಹಸಿರು ಪ್ರದೇಶ ಹೆಚ್ಚಳಕ್ಕೆ ಇವು ಕಾರಣ

ಜಿಲ್ಲೆಯಲ್ಲಿ(Chikkaballapur) ಅರಣ್ಯ ಸಂರಕ್ಷಣಾ ಕಾರ್ಯಕ್ರಮಗಳಲ್ಲಿ ವಿಶೇಷವಾಗಿ ಮರ(Tree), ಗಿಡಗಳನ್ನು ಬೆಳೆಸಲು ಹೆಚ್ಚು ಆದ್ಯತೆ ಸಿಗುತ್ತಿರುವುದರ ಜೊತೆಗೆ ಅರಣ್ಯ ನಾಶ ಕಡಿಮೆ ಆಗಿರುವುದು, ಬೇಸಿಗೆ ಅವಧಿಯಲ್ಲಿ ಅರಣ್ಯ(Forest) ಪ್ರದೇಶ ಬೆಂಕಿ ಬೀಳದಂತೆ ಕಟ್ಟೆಚ್ಚರ ವಹಿಸಿರುವುದು, ಮರ, ಗಿಡ ಕಡಿಯದಂತೆ ಎಚ್ಚರಿಕೆ ವಹಿಸಿರುವುದು, ಬಯಲು ಪ್ರದೇಶದ ಜೊತೆಗೆ ಬೆಟ್ಟಗುಡ್ಡಗಳಲ್ಲಿ ಅರಣ್ಯೀಕರಣಕ್ಕೆ ಹೆಚ್ಚು ಒತ್ತು ಕೊಟ್ಟು ಪರಿಸರ ಸಂರಕ್ಷಣೆಗೆ ವಿಶೇಷ ಆದ್ಯತೆ ನೀಡಿರುವ ಕಾರಣಕ್ಕೆ ಹಸಿರು ಪರಿಸರದಲ್ಲಿ ಜಿಲ್ಲಾದ್ಯಂತ 500 ಹೆಕ್ಟೇರ್‌ ಪ್ರದೇಶದಷ್ಟು ಹೆಚ್ಚಳ ಕಂಡಿದೆ. ಜೊತೆಗೆ ಇದಕ್ಕೆ ಪೂರಕವಾಗಿ ಇತ್ತೀಚೆಗೆ ಕಳೆದ ವರ್ಷ ಬಿದ್ದ ಭಾರೀ ಮಳೆಯು ಕೂಡ ಇದಕ್ಕೆ ಕಾರಣವಾಗಿದೆ.

ಫಾರೆಸ್ಟ್‌ ಸರ್ವೆ ಆಫ್‌ ಇಂಡಿಯಾ ನಡೆಸಿದ ಸ್ಯಾಟ್‌ಲೈಟ್‌ ಸಮೀಕ್ಷೆಯಲ್ಲಿ ಜಿಲ್ಲೆಯಲ್ಲಿ 1,250 ಎಕರೆಯಷ್ಟು ಹಸಿರು ಪರಿಸರ ಹೆಚ್ಚಳ ಕಂಡಿದೆ. ಇದಕ್ಕೆ ಮುಖ್ಯ ಕಾರಣ ಜಿಲ್ಲೆಯಲ್ಲಿ ಪರಿಸರ ನಾಶ ಕಡಿಮೆ ಆಗಿರುವುದರ ಜೊತೆಗೆ ಅರಣ್ಯೀಕರಣ ಹಾಗೂ ಅರಣ್ಯ ಸಂರಕ್ಷಣೆಗೆ ಒತ್ತು ಕೊಟ್ಟಿರುವುದು ಅಂತ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಅರರ್ಸಲನ್‌ ತಿಳಿಸಿದ್ದಾರೆ.  

ಪಾರ್ಕ್‌ಗಾಗಿ ಜಾರಕಬಂಡೆ ಮೀಸಲು ಅರಣ್ಯ ಬಲಿ? : ಪರಿಸರ ಪ್ರೇಮಿಗಳ ವಿರೋಧ!

ಅರಣ್ಯ ಪ್ರದೇಶ

* ಜಿಲ್ಲಾದ್ಯಂತ 77050 ಹೆಕ್ಟೇರ್‌ ಪ್ರದೇಶದಲ್ಲಿ ಅರಣ್ಯ
* ನಂದಿಗಿರಿ, ಸ್ಕಂದಗಿರಿ ಸುತ್ತಲೂ ಹಸಿರು ಹೊದಿಕೆ
* ಹಸಿರು ಪ್ರದೇಶದಲ್ಲಿ 500 ಹೆಕ್ಟೇರ್‌ ಹೆಚ್ಚಳ
* ಅರಣ್ಯೀಕರಣ ಹೆಚ್ಚಳದಿಂದ ಹಸಿರು ಪರಿಸರ ಹೆಚ್ಚಳ
* ಅರಣ್ಯ ಸಂರಕ್ಷಣೆಯಿಂದ ಜಿಲ್ಲೆಯಲ್ಲಿ ಈ ಸಾಧನೆ

ರಾಜ್ಯದಲ್ಲಿ ರೈತರು ಶ್ರೀಗಂಧ ಬೆಳೆಯಲು ಹೊಸ ನೀತಿ

ಬೆಂಗಳೂರು: ರಾಜ್ಯದಲ್ಲಿ ರೈತರು ತಮ್ಮ ಹೊಲ ಗದ್ದೆಗಳಲ್ಲಿ ಶ್ರೀಗಂಧ ಬೆಳೆಯುವುದನ್ನು ಉತ್ತೇಜಿಸುವ ಜೊತೆಗೆ ಮಾರಾಟಕ್ಕೆ ಸರಳ ವ್ಯವಸ್ಥೆ ಕಲ್ಪಿಸಲು ರಾಜ್ಯ ಅರಣ್ಯ ಇಲಾಖೆ ನೂತನವಾಗಿ ‘ಶ್ರೀಗಂಧ ನೀತಿ’ ಜಾರಿಮಾಡಲು ಮುಂದಾಗಿದೆ.

2001ರಿಂದ ರಾಜ್ಯದಲ್ಲಿ ರೈತರು ಶ್ರೀಗಂಧ ಬೆಳೆಯಲು ಅನುಮತಿ ನೀಡಲಾಗಿದ್ದರೂ ಅವುಗಳ ಪೋಷಣೆ, ಸಂರಕ್ಷಣೆ, ಕಟಾವಣೆ ಮಾಡುವುದು ಮತ್ತು ಸೂಕ್ತ ಮಾರುಕಟ್ಟೆಸೌಲಭ್ಯಗಳನ್ನು ಅರಣ್ಯ ಇಲಾಖೆ ಈವರೆಗೂ ಕಲ್ಪಿಸಿರಲಿಲ್ಲ. ಇದರಿಂದ ಶ್ರೀಗಂಧ ಬೆಳೆಯುವ ರೈತರ ಆಕ್ರೋಶಕ್ಕೆ ಕಾರಣವಾಗಿತ್ತು. ಜೊತೆಗೆ, 10 ವರ್ಷ ಬೆಳೆದ ಶ್ರೀಗಂಧಕ್ಕೆ ಸೂಕ್ತ ಬೆಲೆ ಲಭ್ಯವಾಗದೆ ಪರದಾಡುವಂತಾಗಿತ್ತು. ಇದಕ್ಕಾಗಿ ಸೂಕ್ತ ಪರಿಹಾರ ಕಂಡುಕೊಳ್ಳಲು ಶ್ರೀಗಂಧ ನೀತಿ ಜಾರಿ ತರಲು ಅರಣ್ಯ ಇಲಾಖೆ ಕರಡು ನೀತಿ ಸಿದ್ಧಪಡಿಸಿ ಅನುಮತಿ ಪಡೆಯಲು ಸರ್ಕಾರಕ್ಕೆ ಸಲ್ಲಿಸಿದೆ.
 

Latest Videos
Follow Us:
Download App:
  • android
  • ios