50 ವರ್ಷದ ಸಂಭ್ರಮಾಚರಣೆ: ಶಾಲೆಯಲ್ಲಿ ಕನ್ನಡ ಕಾರ್ಯಕ್ರಮ

ಕನ್ನಡ ರಾಜ್ಯೋತ್ಸವದ 50 ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮತ್ತು ಶಿಕ್ಷಣ ಇಲಾಖೆ ವತಿಯಿಂದ ಐವತ್ತು ಶಾಲೆಯಲ್ಲಿ ಏಕಕಾಲಕ್ಕೆ ಕನ್ನಡದ ಕಾರ್ಯಕ್ರಮವನ್ನು ನಡೆಸಲಾಯಿತು.

50 years celebration: Kannada program in school snr

ಕುಣಿಗಲ್: ಕನ್ನಡ ರಾಜ್ಯೋತ್ಸವದ 50 ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮತ್ತು ಶಿಕ್ಷಣ ಇಲಾಖೆ ವತಿಯಿಂದ ಐವತ್ತು ಶಾಲೆಯಲ್ಲಿ ಏಕಕಾಲಕ್ಕೆ ಕನ್ನಡದ ಕಾರ್ಯಕ್ರಮವನ್ನು ನಡೆಸಲಾಯಿತು.

ಕುಣಿಗಲ್ ಪಟ್ಟಣದ ಬಿಜಿಎಸ್ ಶಾಲೆಯಲ್ಲಿ ಕನ್ನಡ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಹಾಗೂ ಕನ್ನಡ ಹೋರಾಟಗಾರರು ಕವಿಗಳು ಸೇರಿದಂತೆ ಕನ್ನಡ ನಾಡು-ನುಡಿಗಳ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡುವ ಕೆಲಸ ನಡೆಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಲ್‌ ಬೋರೇಗೌಡ ಹಾಗೂ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕಪನಿ ಪಾಳ್ಯ ರಮೇಶ್ ಅವರ ನೇತೃತ್ವದಲ್ಲಿ ಮಕ್ಕಳಿಗೆ ಕನ್ನಡದ ಬಗ್ಗೆ ಪ್ರವಚನ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಲ್‌ ಬೋರೇಗೌಡ ಪಾಠದ ಜೊತೆಗೆ ಕನ್ನಡವನ್ನು ಜೋಡಿಸುವುದು ಇಂಗ್ಲಿಷ್ ಭಾಷೆಯನ್ನು ಕಡೆಗಣಿಸುವುದರ ಜೊತೆಗೆ ಕನ್ನಡವನ್ನು ಉನ್ನತೀಕರಣ ಮಾಡುವ ಕೆಲಸವನ್ನು ಸಾಹಿತ್ಯ ಪರಿಷತ್ ಮಾಡುತ್ತಿದೆ ಎಂದರು. ಈ ಸಂದರ್ಭದಲ್ಲಿ ಕೋಶಾಧಿಕಾರಿ ರಾಮಣ್ಣ ಶಾಲಾ ಪ್ರಾಂಶುಪಾಲ ಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಲ್ ಬೋರೇಗೌಡ, ಶಿಕ್ಷಣ ಸಂಯೋಜಕ ಧನಂಜಯ್, ಮುಖ್ಯ ಶಿಕ್ಷಕ ಕುಮಾರ್, ಕಸಪ ಕೋಶಾಧ್ಯಕ್ಷ ರಾಮಣ್ಣ, ನಿರ್ದೇಶಕ ನಾರಾಯಣಸ್ವಾಮಿ ಸೇರಿದಂತೆ ಇತರರು ಇದ್ದರು .

25 ಸಾವಿರ ಅರ್ಜಿ

ಕೊಪ್ಪಳ (ಅ.23): ಇದೇ ಮೊದಲ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿಗೆ 25 ಸಾವಿರ ಅರ್ಜಿಗಳು ಬಂದಿವೆ. ಅದನ್ನು ಈಗ 68ಕ್ಕೆ ಇಳಿಸಲು ಕಳೆದೊಂದು ವಾರದಿಂದ ಕನ್ನಡ-ಸಂಸ್ಕೃತಿ ಇಲಾಖೆ ಅಧಿಕಾರಿಗಳು ಮತ್ತು ಆಯ್ಕೆ ಸಮಿತಿ ಸದಸ್ಯರು ಸತತ ಪ್ರಯತ್ನದಲ್ಲಿದ್ದಾರೆ.

ಅರ್ಜಿಗಳ ಸಂಖ್ಯೆಯನ್ನು ಅಳೆದು ತೂಗಿ ಕೇವಲ 258ಕ್ಕೆ ಇಳಿಸಲಾಗಿದೆ. ಇದನ್ನು ಈಗ 68ಕ್ಕೆ ಇಳಿಸಿ, ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಮಾಡುವುದು ಗಜಪ್ರಸವದಂತೆ ಆಗುತ್ತದೆ. ಪ್ರಾದೇಶಿಕವಾರು, ಸಾಹಿತ್ಯ, ಸಾಮಾಜಿಕ ಸೇವೆ, ಕಲೆ ಸೇರಿದಂತೆ ಕ್ಷೇತ್ರವಾರು ವಿಂಗಡಿಸಿ ಆಯ್ಕೆ ಮಾಡಬೇಕಾಗಿರುವುದು ಸವಾಲಾಗಿದೆ.

ಬೆಳಗಾವಿ: ಆರೋಗ್ಯದ ಹೆಸರಲ್ಲಿ ಮಹಾಕುತಂತ್ರ; ಎಚ್ಚೆತ್ತುಕೊಳ್ಳಬೇಕಿದೆ ಸಿದ್ದು ಸರ್ಕಾರ!

ಇದೇ ಮೊದಲ ಬಾರಿಗೆ ಉಪಸಮಿತಿ ರಚಿಸಲಾಗಿದೆ. ಮೊದಲ ಸುತ್ತಿನಲ್ಲಿ ಉಪಸಮಿತಿಗಳ ಮೂಲಕ ಅರ್ಜಿಯ ಸಂಖ್ಯೆ ಇಳಿಸಲಾಗಿದೆ. ಮೇಲ್ನೋಟಕ್ಕೆ ಅರ್ಜಿಯನ್ನು ಆಹ್ವಾನಿಸಿದ್ದರೂ ಸರ್ಕಾರ ಅರ್ಜಿ ಸಲ್ಲಿಸದ ಅರ್ಹತೆ ಇರುವವರನ್ನು ಆಯ್ಕೆ ಮಾಡಲು ಚಿಂತನೆ ನಡೆಸಿದೆ. ಇದಕ್ಕಾಗಿ ಸರ್ಕಾರವೇ ಒಂದಿಷ್ಟು ಹೆಸರುಗಳನ್ನು ತರಿಸಿಕೊಂಡಿದೆ. ಸುಮಾರು 20-30 ಹೆಸರುಗಳನ್ನು ಸರ್ಕಾರವೇ ಗುರುತಿಸಿದ್ದು, ಆಯ್ಕೆಯಲ್ಲೂ ಇವರಿಗೆ ಆದ್ಯತೆ ನೀಡುವ ಸಾಧ್ಯತೆ ಇದೆ. ಅಪ್ರತಿಮ ಸೇವೆಗೈದು, ಎಲೆಮರೆಯ ಕಾಯಿಯಂತೆ ಇರುವವರನ್ನು ಗುರುತಿಸಿ ಆಯ್ಕೆ ಮಾಡಲು ಮುಂದಾಗಿದೆ ಎನ್ನಲಾಗಿದೆ. ಅ. 26ರಂದು ನಿಗದಿಪಡಿಸಿದ ಸಭೆಯಲ್ಲಿ ಅಂತಿಮ ಗೊಳಿಸುವ ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ. ಆದರೆ, ರಾಜ್ಯೋತ್ಸವ ಪ್ರಶಸ್ತಿಗೆ ಬರುತ್ತಿರುವ ಶಿಫಾರಸು, ಜಿಲ್ಲಾವಾರು ಬೇಡಿಕೆ ನೀಗಿಸುವುದೇ ಈ ಬಾರಿ ದೊಡ್ಡ ಸವಾಲಾಗಿದೆ.\

Bengaluru Police: ಪರೇಡ್‌ ಸೌಧನ್‌- ವಿಶ್ರಮ್‌ಗೆ ತಿಲಾಂಜಲಿ, ಕನ್ನಡದಲ್ಲಿ ಕಮಾಂಡಿಂಗ್‌ ಕೊಟ್ಟ ಪೊಲೀಸರು

ಸಂಸ್ಥೆಗಳ ಆಯ್ಕೆಗೆ ಚಿಂತನೆ: ವ್ಯಕ್ತಿಗಳ ಆಯ್ಕೆ ಜತೆಗೆ ಇದೇ ಮೊದಲ ಸಲ ರಾಜ್ಯೋತ್ಸವ ಪ್ರಶಸ್ತಿಗೆ ಸಂಸ್ಥೆಗಳನ್ನು ಆಯ್ಕೆ ಮಾಡಲು ತೀರ್ಮಾನಿಸಲಾಗಿದೆ. 68 ಸಾಧಕರ ಜತೆಗೆ 10 ಸಂಸ್ಥೆಗಳನ್ನು ಆಯ್ಕೆ ಮಾಡುವ ಕುರಿತು ಚರ್ಚೆ ನಡೆಯುತ್ತಿ ರುವುದು ಈ ಬಾರಿಯ ವಿಶೇಷ ಎನ್ನಲಾಗುತ್ತದೆ

ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಅ. 26ರಂದು ಸಿಎಂ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಅಂತಿಮ ಯಾದಿ ಸಿದ್ಧಪಡಿಸಿಕೊಳ್ಳಲಾಗುತ್ತಿದೆ.

• ಶಿವರಾಜ ತಂಗಡಗಿ ಕನ್ನಡ-ಸಂಸ್ಕೃತಿ

Latest Videos
Follow Us:
Download App:
  • android
  • ios