ಆನೇಕಲ್ :ವಿಶ್ವ ಪರಿಸರ ದಿನಾಚರಣೆಯಂದು ಮರಗಳಿಗೆ ಕೊಡಲಿ ಏಟು

* ವಿಶ್ವ ಪರಿಸರ ದಿನಾಚರಣೆಯಂದು ಮರಗಳಿಗೆ ಕೊಡಲಿ ಏಟು
* ರಸ್ತೆ ಬದಿಯಲ್ಲಿ ಇದ್ದ ಬೃಹತ್ ಗಾತ್ರದ ಮರವನ್ನು ಕಡಿದ್ರು
* ಖಾಸಗಿ ಆಸ್ಪತ್ರೆಗೆ ಅನುಕೂಲ ಮಾಡಿಕೊಡಲು ಮರ ಕಡಿಯಲಾಯಿತೇ.

50 year old- tree cuts In Anekal on world environment-day rbj

 ಆನೇಕಲ್, (ಜೂನ್.05):  ವಿಶ್ವ ಪರಿಸರ ದಿನಾಚರಣೆಯಂದು ಆನೇಕಲ್ ಪಟ್ಟಣದ ಚಂದಾಪುರ ಮುಖ್ಯರಸ್ತೆಯಲ್ಲಿರುವ ಕಾವಲ ಹೊಸಹಳ್ಳಿಯಲ್ಲಿ ಬಹತ್ ಗಾತ್ರದ ಎರಡು ಮರಗಳನ್ನು ಕಡಿಯುವ ಮೂಲಕ ವಿಕೃತಿ ಮೆರೆದಿರುವ ಘಟನೆ ನಡೆದಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಬೆಸ್ಕಾಂನವರು ಶಾಮೀಲಾಗಿ ಮರಗಳನ್ನ ಕಡಿದಿದ್ದಾರೆ. ಮರ ಕಡಿದಿರುವುದನ್ನ ಪ್ರಶ್ನಿಸಲು ಹೋದ ಮಾಧ್ಯಮದವರ ವಿರುದ್ದ ಲಾಭ ಮಾಡಿಕೊಂಡ ಸ್ಥಳೀಯರು ಹರಿಹಾಯ್ದಿದ್ದಾರೆ.

ಹೌದು.. ಇಂದು(ಜೂನ್ 05) ವಿಶ್ವ ಪರಿಸರ ದಿನಾಚರಣೆಯೆಂಬುದನ್ನ ಮರೆತು ಮಾಡಿದ್ರ ಇಲ್ಲವೇ ಸಮಯ ಸಾಧಕತನ ಬಳಸಿಕೊಂಡು ಬೃಹತ್ ಮರಗಳನ್ನ ಕೆಡವಿದ್ದಾರೆ. ಬೇಜವಾಬ್ದಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಚಂದಾಪುರ ಆನೇಕಲ್  ರಸ್ತೆಯ ಕಾವಲ ಹೊಸಹಳ್ಳಿ ಬಳಿ ನೂರಾರು ವರ್ಷಗಳಿಂದ ಬೆಳೆದು ನಿಂತಿದ್ದ ಬೃಹತ್ ಮರವೊಂದು ಇತ್ತೀಚಿಗೆ ನಿರ್ಮಾಣ ಮಾಡಲಾಗುತ್ತಿರುವ ಖಾಸಗಿ ಆಸ್ಪತ್ರೆಯ ಎದುರಿಗೆ ಇತ್ತು, ಆಸ್ಪತ್ರೆಯವರು ಮರವನ್ನು ತೆರವು ಮಾಡಿಕೊಡುವಂತೆ ಆನೇಕಲ್ ಪಟ್ಟಣದ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು.

 ಮರ ಹಾದುಹೋಗಿದ್ದ ಮೇಲ್ಭಾಗದಲ್ಲಿ ವಿದ್ಯುತ್ ತಂತಿ ಇದ್ದುದರಿಂದ ಆನೇಕಲ್ ಬೆಸ್ಕಾಂ ಇಲಾಖೆಯ ಸಿಬ್ಬಂದಿ ಖಾಸಗಿ ವ್ಯಕ್ತಿಗಳ ಜೊತೆಗೂಡಿ ಭಾನುವಾರ ಸಂಜೆ ಏಕಾಏಕಿ ಆಗಮಿಸಿ ಕ್ರೈನ್ ಮೂಲಕ ಬೃಹತ್ ಗಾತ್ರದ ಮರವನ್ನು ಕಡಿದು ಹಾಕಿದ್ದಾರೆ.  ರಸ್ತೆಯ ಪಕ್ಕದಲ್ಲಿ ಸಂಚಾರ ಮಾಡುತ್ತಿರುವ ಸಾರ್ವಜನಿಕರು ವಿಶ್ವ ಪರಿಸರ ದಿನಾಚರಣೆಯ ದಿನದಂದು ನೂರಾರು ವರ್ಷಗಳಿಂದ ಬೆಳೆದು ನಿಂತು ನೆರಳು ಗೆ ಆಶ್ರಯ ನೀಡಿದ್ದ ಮರವನ್ನು ತೆರವು ಮಾಡಿರುವ ವ್ಯಕ್ತಿಗಳ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ.

ವಿಶ್ವ ಪರಿಸರ ದಿನದಂದೇ ಬೃಹತ್ ಗಾತ್ರದ ಮರಗಳ ಮಾರಣಹೋಮ
 

ಬೆಳಗ್ಗೆಯಿಂದಲೂ ಕೂಡ ಮರವನ್ನು ತೆರವು ಮಾಡುತ್ತಿದ್ದರು ಕೂಡ ಆನೇಕಲ್ ಪಟ್ಟಣದ ಅರಣ್ಯ ಇಲಾಖೆ ಅಧಿಕಾರಿಗಳು ಹಲವಾರು ಬಾರಿ ರಸ್ತೆಯಲ್ಲಿ ಹೋಗುತ್ತಿರುವ ಖಾಸಗಿ ವ್ಯಕ್ತಿಗಳು ಕರೆ ಮಾಡಿದರು ಸಹ ಸ್ಥಳಕ್ಕೆ ಆಗಮಿಸಿದ ಬೇಜವಾಬ್ದಾರಿ ತೋರಿದ್ದು, ವಿಶ್ವ ಪರಿಸರ ದಿನಾಚರಣೆಯ ದಿನದಂದು ಮರವನ್ನು ಕೆಲವು ಮಾಡಿರುವುದು ಖಂಡನೀಯ, ಗಿಡ ನೆಟ್ಟು ಪೋಷಣೆ ಮಾಡಿ ಎಂದು ಬೊಬ್ಬೆ ಇಡುವ ಅರಣ್ಯ ಇಲಾಖೆ ಕಣ್ಣೆದುರಿಗೆ ನೂರಾರು ವರ್ಷಗಳ ಇತಿಹಾಸ ಇರುವ ಮರವನ್ನು ಕಡಿದು ಹಾಳು ಮಾಡಿದರು ಸಹ ಸ್ಥಳಕ್ಕೆ ಆಗಮಿಸಿ ಬೇಜವಾಬ್ದಾರಿ ತೋರಿದ್ದಾರೆ, ಬೆಸ್ಕಾಂ ಇಲಾಖೆಯ ಸಿಬ್ಬಂದಿಗಳಿಗೆ ಪರಿಸರ ದಿನಾಚರಣೆಯ ದಿನದಂದು ತೆರವು ಮಾಡುವ ಅವಶ್ಯಕತೆ ಏನಿತ್ತು ಒಂದು ವೇಳೆ ವಿದ್ಯುತ್ ತಂತಿಗೆ ತೊಂದರೆಯಾಗುತ್ತಿದ್ದರೆ ಒಂದೆರಡು ದಿನ ಬಿಟ್ಟು ರಂಬೆಗಳನ್ನು ಮಾತನಾಡಬಹುದಿತ್ತು ಆದರೆ ಸಂಪೂರ್ಣವಾಗಿ ಮರವನ್ನು ಮಾಡಿರುವುದು ಖಂಡನೀಯ ಎಂದು ಸ್ಥಳೀಯರಾದ ವಕೀಲ ಪುರುಷೋತ್ತಮ ಕಿಡಿಕಾರಿದ್ದಾರೆ.

 ಒಂದು ಮರ ನೆಟ್ಟು ಪೋಷಣೆ ಮಾಡಲು ಸಾಕಷ್ಟು ಹರಸಾಹಸ ಪಡಬೇಕಾದ ದಿನಗಳಲ್ಲಿ ರಸ್ತೆ ಬದಿಯಲ್ಲಿರುವ ಮರ ಯಾವುದೇ ತೊಂದರೆ ನೀಡದೆ ಇದ್ದರೂ ತನ್ನ ಪಾಡಿಗೆ ತಾನು ಬೆಳೆದು ನಿಂತಿದ್ದ ಮರವನ್ನು ಖಾಸಗಿ ವ್ಯಕ್ತಿಗಳ ಸಹಕಾರಕ್ಕಾಗಿ ಈ ರೀತಿ ಕಡಿದು ಹಾಕಿರುವುದು ಸರಿಯಲ್ಲ ತಪ್ಪು ಮಾಡಿದವರ ಮೇಲೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಜೊತೆಗೆ ಬೆಸ್ಕಾಂ ಇಲಾಖೆಯ ನಿರ್ಲಕ್ಷ್ಯ ಹಾಗೂ ಖಾಸಗಿ ಆಸ್ಪ ತ್ರೆಗಳು ಮಾಡಿರುವುದು ಬೇಜವಾಬ್ದಾರಿ ಕೆಲಸ ಎಂದು ಅಗ್ನಿ ವೆಂಕಟೇಶ್ ಎನ್ನುವರು- ಹೇಳಿದರು.

ಮಾಧ್ಯಮದವರ ವಿರುದ್ಧ ಬೇಜವಾಬ್ದಾರಿ ಉತ್ತರ-
 ಬೃಹತ್ ಗಾತ್ರದ ಮರವನ್ನು ಕಡಿಯುತ್ತಿರುವ ಬಗ್ಗೆ ಸ್ಥಳೀಯರು ಆಕ್ರೋಶ ಹೊರ ಹಾಕುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಮಾಧ್ಯಮ ಪ್ರತಿನಿಧಿಗಳು ಪರಿಸರ ದಿನಾಚರಣೆ ಇಂತಹ ಮರವನ್ನು ನಡೆಯುತ್ತಿರುವುದು ಸರಿಯಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಆಗ ಮಾಧ್ಯಮದವರ ವಿರುದ್ಧವೇ ಸ್ಥಳದಲ್ಲಿದ್ದ ಖಾಸಗಿ ವ್ಯಕ್ತಿಗಳು ಮಾತುಗಳನ್ನ ಆಡುವ ಮೂಲಕ ಪರಿಸರ ವಿರೋಧಿಗಳು ಎಂದು ತೋರಿಸಿಕೊಂಡರು.

ನೂತನ ಆಸ್ಪತ್ರೆಗಾಗಿ ಮರ ಕಡಿಯಲಾಯಿತೇ? 
ಬೃಹತ್ ಗಾತ್ರದ ಮರ ಇರುವ ಎಡಭಾಗದಲ್ಲಿ ಹೊಸದಾಗಿ ಆಸ್ಪತ್ರೆಯ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತಿದ್ದು ಕಾಂಪೌಂಡ್ ಪಕ್ಕದಲ್ಲಿ ಮರ ಬೆಳೆದು ನಿಂತಿರುವುದು ಮುಂದಿನ ದಿನಗಳಲ್ಲಿ ತೊಂದರೆ ಆಗಬಹುದು ಎನ್ನುವ ನಿಟ್ಟಿನಲ್ಲಿ ಅರಣ್ಯ ಇಲಾಖೆಗೆ ತೆರವು ಮಾಡಲು ಹೇಳಿದ್ದರು ಆದರೆ ಬೆಸ್ಕಾಂ ಇಲಾಖೆಯವರು ಬೇಜವಾಬ್ದಾರಿ ತೋರಿ ಸಂಪೂರ್ಣ ಮರವನ್ನೇ ತೆರವು ಮಾಡಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ ಆಸ್ಪತ್ರೆಯ ವಿರುದ್ಧವೂ ಹಿಡಿಶಾಪ ಹಾಕಿದ್ದಾರೆ.

Latest Videos
Follow Us:
Download App:
  • android
  • ios