ತಿಪಟೂರು (ನ.06):  ಕೋವಿಡ್‌-19 ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗರದ ಎಸ್‌ಬಿಐಟಿ ಇಂಜಿನಿಯರಿಂಗ್‌ ಕಾಲೇಜು ಅತಿ ಕಡಿಮೆ ಪ್ರಮಾಣದ ಶುಲ್ಕದಲ್ಲಿ ಇಂಜಿನಿಯರಿಂಗ್‌ ಶಿಕ್ಷಣ ನೀಡಲು ಮುಂದಾಗಿದೆ.

ಕಾಲೇಜಿನಲ್ಲಿ ಬೋಧಿಸಲಾಗುವ 5 ಬ್ರಾಂಚ್‌ಗಳಿಗೂ 2020-21ನೇ ಸಾಲಿಗೆ ಇಂಜಿನಿಯರಿಂಗ್‌ ಪದವಿಗೆ ಪ್ರವೇಶಾತಿ ಪಡೆಯಲು ಬಯಸುವ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ವಾರ್ಷಿಕ 50 ಸಾವಿರ ರುಪಾಯಿಗಳನ್ನು ನಿಗದಿ ಮಾಡಿದೆ. ಇದನ್ನು 2 ಕಂತುಗಳಲ್ಲಿ ಪಾವತಿಸಲು ಅವಕಾಶ ನೀಡಿದೆ. ಅಲ್ಲದೆ ಎಸ್‌ಸಿ, ಎಸ್‌ಟಿ ವರ್ಗದವರಿಗೆ ಉಚಿತವಾಗಿ ಪ್ರವೇಶಾತಿ ನೀಡಲಾಗುತ್ತಿದೆ.

ಆಂಧ್ರ ಆಯ್ತು.. ಕಾಲೇಜು ಆರಂಭಕ್ಕೆ ಡೇಟ್ ಫಿಕ್ಸ್, ಕೆಲ ಕಂಡಿಶನ್!

ಈ ಬಗ್ಗೆ ಮಾಹಿತಿ ನೀಡಿದ ಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಜಯಣ್ಣ ಕಂಚಿಕೆರೆ, ಈ ಸೌಲಭ್ಯದ ಜೊತೆಗೆ ಹಾಸ್ಟೆಲ್‌, ಬಸ್‌ ವ್ಯವಸ್ಥೆ, ಕ್ಯಾಂಟೀನ್‌, ಆಧುನಿಕ ಪ್ರಯೋಗಾಲಯ, ಹಾಗೂ ಅನುಭವಿ, ನುರಿತ ಪ್ರಾಧ್ಯಾಪಕ ವೃಂದವನ್ನು ಕಾಲೇಜು ಹೊಂದಿದೆ ಎಂದು ತಿಳಿಸಿದ್ದಾರೆ.