Asianet Suvarna News Asianet Suvarna News

Covid In Bengaluru: ಐಟಿಬಿಟಿ ಹಬ್‌ಗಳೇ ಕೊರೋನಾ ತಾಣಗಳು, ಶೇ. 50 ರಷ್ಟು ಕೇಸ್‌ ಇಲ್ಲೇ ಪತ್ತೆ

* ನಗರದ ಶೇ.50 ರಷ್ಟುಕೇಸ್‌ ಐಟಿ-ಬಿಟಿ ವಲಯದಲ್ಲೇ ಪತ್ತೆ

* ಮಹದೇವಪುರ, ಬೊಮ್ಮನಹಳ್ಳಿ, ಪೂರ್ವ ವಲಯದಲ್ಲೇ ಹೆಚ್ಚಿನ ಕೇಸ್‌ ದಾಖಲು

* ಹೊರ ದೇಶ, ಅಂತಾರಾಜ್ಯ ಪ್ರಯಾಣಿಕರು ಈ ಪ್ರದೇಶದಲ್ಲೇ ವಾಸ

* ಕೋವಿಡ್‌ ನಿಯಮ ಪಾಲಿಸದ ಕೂಲಿ ಕಾರ್ಮಿಕರು: ಬಿಬಿಎಂಪಿ ಅಧಿಕಾರಿ

50 PC Of Covid cases In Bangalore detected In IT BT hubs pod
Author
Bangalore, First Published Jan 11, 2022, 6:56 AM IST
  • Facebook
  • Twitter
  • Whatsapp

ಸಂಪತ್‌ ತರೀಕೆರೆ

ಬೆಂಗಳೂರು(ಜ.01): ನಗರಕ್ಕೆ ಸಿಲಿಕಾನ್‌ ಸಿಟಿ ಎಂಬ ಖ್ಯಾತಿ ತಂದುಕೊಟ್ಟಪ್ರದೇಶಗಳೇ ಸದ್ಯ ಕೋವಿಡ್‌ ಸ್ಫೋಟಗೊಳ್ಳುತ್ತಿರುವ ತಾಣಗಳಾಗಿ ಮಾರ್ಪಟ್ಟಿವೆ. ಐಟಿಬಿಟಿ ಕಂಪನಿಗಳು ಹೆಚ್ಚಿರುವ ವಿದೇಶಿಗರು, ಹೊರ ರಾಜ್ಯದವರು ಹೆಚ್ಚಾಗಿ ವಾಸಿಸುತ್ತಿರುವ ಮಹದೇವಪುರ, ಬೊಮ್ಮನಹಳ್ಳಿ, ಪೂರ್ವ ವಲಯಗಳಲ್ಲೇ ಶೇಕಡ 50ರಷ್ಟುಕೊರೋನಾ ಪ್ರಕರಣಗಳು ಪತ್ತೆಯಾಗುತ್ತಿವೆ.

ಪಾಲಿಕೆಯ ಎಂಟು ವಲಯಗಳಲ್ಲಿ ಒಂದೇ ವಾರದಲ್ಲಿ 25,871 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ ಮಹದೇವಪುರ ಒಂದರಲ್ಲೇ ಕೇವಲ ಏಳು ದಿನಗಳಲ್ಲಿ 6423 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಉಳಿದಂತೆ ಬೊಮ್ಮನಹಳ್ಳಿ ವಲಯದಲ್ಲಿ 4,500ಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ. ವಿಶೇಷವೆಂದರೆ ಎಂಟು ವಲಯಗಳಲ್ಲಿ ಪತ್ತೆಯಾಗಿರುವ 382 ಮೈಕ್ರೋ ಕಂಟೈನ್ಮೆಂಟ್‌ಗಳಲ್ಲಿ ಮಹದೇವಪುರ, ಬೊಮ್ಮನಹಳ್ಳಿ ಮತ್ತು ದಕ್ಷಿಣ ವಲಯಗಳಲ್ಲೇ 273 ಮೈಕ್ರೋ ಕಂಟೈನ್ಮೆಂಟ್‌ ವಲಯಗಳನ್ನು ಗುರುತಿಸಲಾಗಿದೆ.

ಈ ವಲಯಗಳ ವ್ಯಾಪ್ತಿಯಲ್ಲೇ ಬರುವ ಬೆಳ್ಳಂದೂರು, ಬೇಗೂರು, ದೊಡ್ಡನೆಕ್ಕುಂದಿ, ವರ್ತೂರು, ಎಚ್‌ಎಸ್‌ಆರ್‌ ಲೇಔಟ್‌, ಹೊರಮಾವು, ನ್ಯೂ ತಿಪ್ಪಸಂದ್ರ ವಾರ್ಡ್‌ಗಳಲ್ಲಿ ನಿತ್ಯ ಸರಾಸರಿ 90ಕ್ಕೂ ಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿವೆ.

ಮಹದೇವಪುರ, ಬೊಮ್ಮನಹಳ್ಳಿ ವಲಯಗಳಲ್ಲಿ ತಮಿಳುನಾಡು, ಕೇರಳ, ಮಹಾರಾಷ್ಟ್ರ, ಗೋವಾ ಸೇರಿದಂತೆ ಇತರೆ ರಾಜ್ಯಗಳ ಪ್ರಯಾಣಿಕರು ಹೆಚ್ಚಾಗಿದ್ದಾರೆ. ಮುಖ್ಯವಾಗಿ ಹೊರ ರಾಜ್ಯಗಳ ಕೂಲಿ ಕಾರ್ಮಿಕರು ಅತ್ಯಧಿಕ ಸಂಖ್ಯೆಯಲ್ಲಿ ಇದ್ದು, ಕೋವಿಡ್‌ ನಿಯಮಗಳನ್ನು ನಿರಂತರವಾಗಿ ಉಲ್ಲಂಘಿಸುತ್ತಿರುವ ಪ್ರಕರಣಗಳು ಇಲ್ಲಿ ಜಾಸ್ತಿ. ಹಾಗಾಗಿ ಕೊರೋನಾ ಸೋಂಕು ಒಂದೇ ವಾರದಲ್ಲಿ 5,500ಕ್ಕೂ ಹೆಚ್ಚಾಗಲು ಕಾರಣವೆಂದು ಮಹದೇವಪುರ ವಲಯದ ಜಂಟಿ ಆಯುಕ್ತ ಆರ್‌.ವೆಂಕಟಾಚಲಪತಿ ಅವರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಮಹದೇವಪುರ 1,114ಕ್ಕೂ ಅತ್ಯಧಿಕ ಸಂಖ್ಯೆಯಲ್ಲಿ ಅಪಾರ್ಟ್‌ಮೆಂಟ್‌ಗಳಿದ್ದು, ಇಲ್ಲಿ ವಾಸಿಸುವ ಟೆಕ್ಕಿಗಳು, ಹೊರ ರಾಜ್ಯ ಮತ್ತು ಹೊರ ದೇಶಗಳ ಪ್ರಯಾಣಿಕರೇ ಕೊರೋನಾದ ಟಾರ್ಗೆಟ್‌ ಆಗಿದ್ದಾರೆ. ಹಾಗಾಗಿ ಶೇ.60ಕ್ಕೂ ಹೆಚ್ಚು ಅಪಾರ್ಟ್‌ಂಟ್‌ಗಳನ್ನು ಕಂಟೈನ್ಮೆಂಟ್‌ ವಲಯಗಳೆಂದು ಗುರುತಿಸಲಾಗಿದೆ. (ಮೂರು ಮತ್ತು ಮೂರಕ್ಕಿಂತ ಹೆಚ್ಚು ಸೋಂಕಿತರು ಇರುವ ಜಾಗವನ್ನು ಮೈಕ್ರೋ ಕಂಟೈನ್ಮೆಂಟ್‌ ವಲಯ ಎಂದು ಗುರುತಿಸಲಾಗುತ್ತದೆ) ಬಿಬಿಎಂಪಿ ಮಾಹಿತಿ ಪ್ರಕಾರ ಮಹದೇವಪುರ ವಲಯದಲ್ಲಿ ಕಳೆದ ಹತ್ತು ದಿನಗಳಲ್ಲಿ ಪಾಸಿಟಿವಿಟಿ ದರ ಶೇ.5ಕ್ಕೂ ಹೆಚ್ಚಾಗಿದೆ.

7 ದಿನದಲ್ಲಿ 25,871 ಕೇಸ್‌

ಬಿಬಿಎಂಪಿ ಮಾಹಿತಿ ಪ್ರಕಾರ ಜ.2ರಿಂದ 8ರವರೆಗೆ ನಗರದಲ್ಲಿ 25,871 ಕೊರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ಶೇ.50ರಷ್ಟುಮಹದೇವಪುರ, ಪೂರ್ವ, ದಕ್ಷಿಣ ಮತ್ತು ಬೊಮ್ಮನಹಳ್ಳಿ ವಲಯಗಳಲ್ಲೇ ಪತ್ತೆಯಾಗಿವೆ. ಮಹದೇವಪುರ 6423, ಪೂರ್ವ 4690, ದಕ್ಷಿಣ ವಲಯ 3735, ಬೊಮ್ಮನಹಳ್ಳಿ 3063, ಪಶ್ಚಿಮ 2942, ರಾಜರಾಜೇಶ್ವರಿ ನಗರ 1590, ಯಲಹಂಕ 1486, ದಾಸರಹಳ್ಳಿ 398, ಆನೇಕಲ್‌ 738, ಬೆಂಗಳೂರು ದಕ್ಷಿಣ 360, ಬೆಂಗಳೂರು ಪೂರ್ವ 310, ಬೆಂಗಳೂರು ಉತ್ತರ 97, ಬೆಂಗಳೂರು ಹೊರ ವಲಯ 1551 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಹೀಗೆ ಒಟ್ಟು 25,871 ಪ್ರಕರಣಗಳು ಕೇವಲ ಏಳು ದಿನಗಳಲ್ಲಿ ಪತ್ತೆಯಾಗಿವೆ.

ಕಳೆದೊಂದು ವಾರದಲ್ಲಿ ಪಾಲಿಕೆಯ ಎಂಟು ವಲಯಗಳಲ್ಲಿ 4,14,321 ಕೋವಿಡ್‌ ಪರೀಕ್ಷೆ ಮಾಡಲಾಗಿದ್ದು, 25871 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇದೇ ಅವಧಿಯಲ್ಲಿ 1,572 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, 18 ಮಂದಿ ಮೃತಪಟ್ಟಿದ್ದಾರೆ. ಪಾಸಿಟಿವಿಟಿ ದರ ಕಳೆದ ವಾರಕ್ಕೆ(ಶೇ.1.04) ಹೋಲಿಸಿದರೆ ಶೇ.5ರಷ್ಟುಏರಿಕೆಯಾಗಿದ್ದು, ಪ್ರಸ್ತುತ ಪಾಸಿಟಿವಿಟಿ ದರ ಶೇ 6.24 ದಾಖಲಾಗಿದೆ.

ಸೋಮವಾರ ವರದಿಯಾದ ವಲಯವಾರು ಕಂಟೈನ್ಮೆಂಟ್‌ಗಳು

ವಲಯ- ಕಂಟೈನ್ಮೆಂಟ್‌

ಮಹದೇವಪುರ- 143

ಬೊಮ್ಮನಹಳ್ಳಿ- 100

ದಕ್ಷಿಣ- 49

ಪಶ್ಚಿಮ- 44

ಪೂರ್ವ- 33

ಯಲಹಂಕ- 33

ದಾಸರಹಳ್ಳಿ- 06

ಆರ್‌ಆರ್‌ನಗರ- 04

ಒಂದು ವಾರದಲ್ಲಿ ಪಾಲಿಕೆಯ 10 ವಾರ್ಡ್‌ಗಳಲ್ಲಿ ನಿತ್ಯ ಸರಾಸರಿ ವರದಿಯಾದ ಕೊರೋನಾ ಸೋಂಕಿತ ಪ್ರಕರಣಗಳು ಇಂತಿವೆ.

ವಾರ್ಡ್‌- ಸೋಂಕಿತರ ಸಂಖ್ಯೆ

ಬೆಳ್ಳಂದೂರು- 265

ಬೇಗೂರು- 128

ಹಗದೂರು- 127

ದೊಡ್ಡನೆಕ್ಕುಂದಿ- 106

ವರ್ತೂರು- 103

ಎಚ್‌ಎಸ್‌ಆರ್‌ಲೇಔಟ್‌- 100

ಹೊರಮಾವು- 93

ನ್ಯೂತಿಪ್ಪಸಂದ್ರ- 91

ಕೋರಮಂಗಲ- 84

Follow Us:
Download App:
  • android
  • ios