ವಿರಾಜಪೇಟೆ(ಜು.04): ವಿರಾಜಪೇಟೆಗೆ ಇಂದು ಡಬಲ್‌ ಶಾಕ್‌ ಎದುರಾಗಿದ್ದು, ಶಾಂತಿನಗರದ ಇಬ್ಬರು ನಿವಾಸಿಗಳಿಗೆ ಕೊರೋನಾ ಪಾಸಿಟಿವ್‌ ದೃಢಪಟ್ಟಿದೆ. ಅದರಲ್ಲಿ ಓರ್ವ ವ್ಯಕ್ತಿ ಈಗಾಗಲೇ ಜಿಲ್ಲಾ ಕೊವಿಡ್‌ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಮತ್ತೋರ್ವ 40 ವರ್ಷ ಪ್ರಾಯದ ವ್ಯಕ್ತಿ, ಹಳೆಬಟ್ಟೆವ್ಯಾಪಾರಿಯಾಗಿದ್ದು ಬೇರೆ ರಾಜ್ಯಗಳಿಂದ ತಂದ ಸೆಕೆಂಡ್‌ ಹ್ಯಾಂಡ್‌ ಬಟ್ಟೆಗಳನ್ನು ಕೊಡಗಿನ ವಿವಿಧ ಸಂತೆಗಳಲ್ಲಿ ಮಾರಾಟ ಮಾಡುತ್ತಿದ್ದರು.

ಈಗ ಕೆಲವು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ತೆರಳಿದ್ದರು. ಈ ವೇಳೆ ಅವ​ರ ಗಂಟಲು ದ್ರವ ಮಾದ​ರಿ​ಯನ್ನು ಪರೀ​ಕ್ಷೆಗೆ ಕಳು​ಹಿ​ಸ​ಲಾ​ಗಿತ್ತು. ವರದಿ ಬಾರದ ಕಾರಣ ಅವರು ಶಾಂತಿ​ನ​ಗ​ರದ ನಿವಾ​ಸ​ದಲ್ಲಿ ನಾಲ್ಕು ದಿನ​ಗ​ಳಿಂದ ನೆಲೆ​ಸಿ​ದ್ದರು. ಈ ವೇಳೆ ಅವರು ಮಾಮೂ​ಲಿ​ಯಾಗಿ ಪರಿ​ಸ​ರ​ದಲ್ಲಿ ಓಡಾ​ಡು​ತ್ತಿ​ದ್ದರು ಎಂದು ಸ್ಥಳೀ​ಯರು ತಿಳಿ​ಸಿ​ದ್ದಾರೆ. ಶುಕ್ರ​ವಾರ ಅವರ ಗಂಟಲು ದ್ರವದ ಮಾದರಿ ಪರೀಕ್ಷಾ ವರ​ದಿ​ಯಲ್ಲಿ ಕೊರೋನಾ ಇರು​ವುದು ದೃಢ​ಪ​ಟ್ಟಿದ್ದು, ಕೋವಿಡ್‌ ಆಸ್ಪ​ತ್ರೆಗೆ ದಾಖ​ಲಿ​ಸ​ಲಾ​ಗಿದೆ.

ಕೋವಿಡ್‌ನಿಂದ ದುಡ್ಡು ಮಾಡುವ ದಾರಿದ್ರ್ಯ ಬಂದಿಲ್ಲ: ಸಿದ್ದರಾಮಯ್ಯಗೆ ತಿರುಗೇಟು

ಇದೀಗ ತಾಲೂಕು ಆಡಳಿತ ಹಾಗೂ ಪಟ್ಟಣ ಪಂಚಾಯಿತಿ ಶಾಂತಿನಗರಕ್ಕೆ ಭೇಟಿ ನೀಡಿ ಶಾಂತಿನಗರದ ಸುಮಾರು 50 ಮನೆಗಳನ್ನು ಸೀಲ್‌​ಡೌನ್‌ ಮಾಡಿ​ದ್ದಾರೆ. ಅಲ್ಲದೆ ಸೋಂಕಿತ ವ್ಯಕ್ತಿ ಭೇಟಿ ನೀಡಿದ್ದ ಖಾಸಗಿ ಆಸ್ಪ​ತ್ರೆ​ಯನ್ನೂ ತಾತ್ಕಾ​ಲಿ​ಕ​ವಾಗಿ ಸೀಲ್‌​ಡೌನ್‌ ಮಾಡ​ಲಾ​ಗಿದೆ.

ವೈದ್ಯರಾದ ಯತಿರಾಜ್‌, ಪಟ್ಟಣ ಪಂಚಾಯಿತಿ ಕಂದಾಯ ನಿರೀಕ್ಷಕ ಸೋಮೇಶ್‌, ಆರೋಗ್ಯ ಅಧಿಕಾರಿ ಐವನ್‌, ವಾರ್ಡ್‌ನ ಸದಸ್ಯರಾದ ರಜನಿಕಾಂತ್‌, ಜಲೀಲ್‌ ಅವರು ಸ್ಥಳದಲ್ಲಿ ಹಾಜರಿದ್ದರು. ವಿರಾಜಪೇಟೆಯಲ್ಲಿ ಮೀನು ಪೇಟೆಯ ಬಳಿಕ ಸೀಲ್‌ಡೌನ್‌ ಆದ ಎರಡನೇ ಪ್ರದೇಶ ಶಾಂತಿ​ನ​ಗ​ರ​ವಾ​ಗಿದೆ.