Asianet Suvarna News Asianet Suvarna News

ಗದಗ: ಜೆಸಿಬಿ ಡಿಕ್ಕಿ, ಮನೆಯಂಗಳದಲ್ಲಿ ಆಟವಾಡುತ್ತಿದ್ದ 5 ವರ್ಷದ ಮಗು ಸ್ಥಳದಲ್ಲೇ ಸಾವು

ಜೆಸಿಬಿ ಶಿರಹಟ್ಟಿಯಿಂದ ಮಾಗಡಿ ಕಡೆಗೆ ಹೊರಟ್ಟಿತ್ತು. ಈ ವೇಳೆ ಮನೆಯಂಗಳದಲ್ಲಿ ಆಟವಾಡುತ್ತಿದ್ದ ಮಗುವಿಗೆ ಜೆಸಿಬಿ ಡಿಕ್ಕಿ ಹೊಡೆದಿದೆ. ಜೆಸಿಬಿ ಡಿಕ್ಕಿಯಿಂದ ಮಗುವಿನ ತಲೆಗೆ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದೆ. 

5 Years Old Child dies Due to JCB Collision st Shirahatti in Gadag grg
Author
First Published Jan 11, 2024, 12:11 PM IST

ಗದಗ(ಜ.11): ಜೆಸಿಬಿಯೊಂದು ಡಿಕ್ಕಿ ಹೊಡೆದ ಪರಿಣಾಮ ಮನೆಯಂಗಳದಲ್ಲಿ ಆಟವಾಡುತ್ತಿದ್ದ ಐದು ವರ್ಷದ ಮಗುವೊಂದು ದಾರುಣವಾಗಿ ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದ ಶಬ್ಬೀರ್ ನಗರದಲ್ಲಿ ಇಂದು(ಗುರುವಾರ) ನಡೆದಿದೆ. 

ಜೆಸಿಬಿ ಡಿಕ್ಕಿಯಾಗಿ ಮನ್ವಿತ್ ಏರಿಮನಿ ಎಂಬ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಜೆಸಿಬಿ ಶಿರಹಟ್ಟಿಯಿಂದ ಮಾಗಡಿ ಕಡೆಗೆ ಹೊರಟ್ಟಿತ್ತು. ಈ ವೇಳೆ ಮನೆಯಂಗಳದಲ್ಲಿ ಆಟವಾಡುತ್ತಿದ್ದ ಮಗುವಿಗೆ ಜೆಸಿಬಿ ಡಿಕ್ಕಿ ಹೊಡೆದಿದೆ. ಜೆಸಿಬಿ ಡಿಕ್ಕಿಯಿಂದ ಮಗುವಿನ ತಲೆಗೆ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದೆ. 

ತುಮಕೂರು: ದ್ವಿಚಕ್ರವಾಹನಗಳಿಗೆ ಕಾರು ಡಿಕ್ಕಿ, ಇಬ್ಬರು ವಿದ್ಯಾರ್ಥಿಗಳ ಸಾವು

ಜೆಸಿಬಿ ಚಾಲಕನ ನಿರ್ಲಕ್ಷ್ಯ, ಅಜಾಗರೂಕತೆಯೆ ಘಟನೆಗೆ ಕಾರಣ ಎಂದು ಆರೋಪಿಸಲಾಗಿದೆ. ಘಟನಾ ಸ್ಥಳಕ್ಕೆ ಶಿರಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಜೆಸಿಬಿ ಚಾಲಕನ ಮೈಲಾರಪ್ಪ ಹಲವಾಗಲಿಯನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.  

Follow Us:
Download App:
  • android
  • ios