ಬೆಂಗಳೂರು[ಅ.02]: ದರೋಡೆಗೆ ಸಂಚು ರೂಪಿಸುತ್ತಿದ್ದ ರೌಡಿ ಸೈಕಲ್‌ ರವಿಯ ಐವರು ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಜಕ್ಕೂರು ಲೇಔಟ್‌ ನಿವಾಸಿಗಳಾದ ಗಂಗಾಧರ ಅಲಿಯಾಸ್‌ ಕರಿ(30), ಶಿವಕುಮಾರ್‌(30), ಅರ್ಜುನ್‌(30), ಮಂಜುನಾಥ್‌ ಅಲಿಯಾಸ್‌ ಪುಳಿ(31), ನರೇಶ್‌(29) ಬಂಧಿತರು.

ಆರೋಪಿಗಳಿಂದ ಕಾರು, ಚಾಕು, ದೊಣ್ಣೆ ಹಾಗೂ ಖಾರದ ಪುಡಿ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆರೋಪಿಗಳು ಅಮೃತಹಳ್ಳಿ ಪೊಲೀಸ್‌ ಠಾಣಾ ಸರಹದ್ದಿನ ಲುಂಬಿಣಿ ಗಾರ್ಡನ್‌ ಬಳಿಯ ಸರ್ವೀಸ್ ರಸ್ತೆಯಲ್ಲಿ ಸಾರ್ವಜನಿಕರಿಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ದರೋಡೆ ಮಾಡಲು ಸಂಚು ರೂಪಿಸಿದ್ದರು. ಈ ವೇಳೆ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.