ಮಂಡ್ಯ(ಮೇ.07): ನಾಗಮಂಗಲ ಪುರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರು ಅಥವಾ ಆಸ್ತಿ ಮಾಲೀಕರು ಪ್ರತಿ ಸಾಲಿನಂತೆ ಪುರಸಭೆ ಕಾಯ್ದೆಯನ್ವಯ ಆರ್ಥಿಕ ವರ್ಷದ ಆರಂಭದಲ್ಲಿ ಪುರಸಭೆ ವ್ಯಾಪ್ತಿಗೆ ಬರುವ ಆಸ್ತಿಗಳ ತೆರಿಗೆ ಭರಿಸಬೇಕಾಗಿರುತ್ತದೆ.

ನಾಗರಿಕರಿಗೆ ಕರ್ನಾಟಕ ಪುರಸಭೆಗಳ ಅಧಿನಿಯಮ 1964 ಕಲಂ 105(1)ರಂತೆ ರಿಯಾಯಿತಿ ಸೌಲಭ್ಯವಿದೆ. ಏಪ್ರಿಲ… ಮಾಹೆಯಲ್ಲಿ ಆಸ್ತಿಯ ತೆರಿಗೆ ಸಂದಾಯ ಮಾಡಲು ಹೆಚ್ಚಿನ ಜನಸಂದಣಿಯಾಗಲಿದೆ. ಪ್ರಸ್ತುತ ಸಂದರ್ಭಕ್ಕೆ ಅನುಗುಣವಾಗಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಚೇರಿಯಲ್ಲಿ ಬ್ಯಾಂಕ್‌ ಚಲನ್‌ ಮೂಲಕ ಸಂದಾಯ ಮಾಡಲು ಸಾಧ್ಯವಾಗದೆ ಇರುವುದರಿಂದ ಆಸ್ತಿ ಮೇಲಿನ ಶೇಕಡ 5% ರ ರಿಯಾಯಿತಿಯ ಕಾಲಾವಧಿಯನ್ನು ಮೇ 31ರವರೆಗೂ ವಿಸ್ತರಿಸಿದೆ.

ತನ್ನ ಬಟ್ಟೆ ಒಗೆಯದ್ದಕ್ಕೆ ನಾದಿನಿಯನ್ನು ಕೊಚ್ಚಿ ಕೊಲೆ ಮಾಡಿದ ಭಾವ

ಈ ಪುರಸಭೆಯ ವ್ಯಾಪ್ತಿಯಲ್ಲಿ ಲಾಕ್‌ಡೌನ್‌ ಮತ್ತು ನಿಷೇಧಾಜ್ಞೆ ಜಾರಿಯಲ್ಲಿ ಇರುವ ಅವಧಿಯಲ್ಲೂ ಕಛೇರಿಯ ಆಡಳಿತತ್ಮಾಕ ಹಾಗೂ ಬೀದಿ ದೀಪ, ನೀರು ಸರಬರಾಜು ನಿರ್ವಹಣೆಯಲ್ಲಿ ಯಾವುದೆ ಸಮಸ್ಯೆಗಳಿಲ್ಲದೆ ಸಾರ್ವಜನಿಕರಿಗೆ ತಲುಪುವಂತೆ ಮಾಡಿದೆ ಹಾಗೂ ಮುಂದಿನ ದಿನಗಳಲ್ಲಿ ಸಹ ಇದೆ ರೀತಿ ಉತ್ತಮ ಸೇವೆಯನ್ನು ತಲುಪಿಸುವ ನಿಟ್ಟಿನಲ್ಲಿದೆ. ಬೀದಿದೀಪ, ನೀರು ಸರಬರಾಜು, ಘನತ್ಯಾಜ್ಯ ನಿರ್ವಹಣೆ ವಾಹನಗಳಿಗೆ ಇಂಧನ, ನೌಕರರಿಗೆ, ಡಾಟಾ ಎಂಟ್ರಿ ಆಪರೇಟರ್‌ , ಕನಿಷ್ಠ ವೇತನದಾರರಿಗೆ ವೇತನ ಸಂದಾಯಿಸಲು ಹಾಗೂ ಆಡಳಿತಾತ್ಮಕ ಮತ್ತು ಇತರ ಕಚೇರಿ ವತಿಯಿಂದ ನಿರ್ವಹಿಸುತ್ತಿರುವ ನಿರ್ವಹಣೆಗಳಿಗೆ ವೆಚ್ಚವನ್ನು ಭರಿಸಲು ತೆರಿಗೆ ಅನಿವಾರ್ಯವಾಗಿದೆ. ಆದ್ದರಿದ ಸಾರ್ವಜನಿಕರು ಅಥವಾ ಆಸ್ತಿ ಮಾಲಿಕರು ತಮ್ಮ ಆಸ್ತಿ ತೆರಿಗೆ ಹಾಗೂ ನೀರಿನ ತೆರಿಗೆಯನ್ನು ಈ ಲಾಕ್‌ಡೌನ್‌ ಸಮಯದಲ್ಲಿ ಸಂದಾಯ ಮಾಡಲು ಇಚ್ಚಿಸಿದಲ್ಲಿ ಕಚೇರಿಯಿಂದ ನೂತನವಾಗಿ ತೆರಿಗೆ ಸಂಗ್ರಹಿಸಲು ಪ್ರಾರಂಭಿಸಿದೆ.

ಮದ್ಯ ಪ್ರಿಯರ ಜೇಬಿಗೆ ಸದ್ದಿಲ್ಲದೇ ದೊಡ್ಡ ಕತ್ತರಿ,  ಕರ್ನಾಟಕದಲ್ಲಿ ಬಲು ದುಬಾರಿ!

ಆಸ್ತಿ ಹಾಗೂ ನೀರಿನ ತೆರಿಗೆಯನ್ನು ಕಚೇರಿಯಿಂದ ನಿಯೋಜಿಸಿರುವ ಸಂಬಂಧಪಟ್ಟವಾರ್ಡಿನ ಅಧಿಕಾರಿಯ ಈ ಕೆಳಗಿನ ದೂರವಾಣಿ ಸಂಖ್ಯೆ ಕರೆ ಮಾಡಿ ಕಚೇರಿ ಗುರುತಿನ ಚೀಟಿ ಧರಿಸಿದ ನೌಕರರೇ ಸಂಬಂಧಪಟ್ಟಚಲನ್‌ ತೆಗೆದು ತಮ್ಮ ಮನೆ ಬಾಗಿಲಿಗೆ ಬಂದು ಹೊಸದಾಗಿ ಜಾರಿಗೆ ತಂದಿರುವ ನೇರವಾಗಿ ಹಣವನ್ನು ಪಡೆದು, ಚಲನ್‌ಗೆ ಮಾಲಿಕನ ಸಹಿ ಹಾಕಿಸಿ ಹಣ ಸ್ವೀಕೃತಿಗೊಂಡ ಬಗೆ ಖಾತೆಗೆ ಹಾಗೂ ಜಮೆ ಮಾಡಿರುವ ಚಲನ್‌ ಪ್ರತಿಯನ್ನು ಮತ್ತೆ ತಮ್ಮ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ.

ಚಲನ್‌ ಪ್ರತಿಯನ್ನು ತಮ್ಮ ಮೊಬೈಲ… ವಾಟ್ಸಪ್‌ಗೆ ಮೂಲಕ ಕಳುಹಿಸಲಾಗುವುದು. ಸದರಿ ಚಲನ್‌ ಮೊತ್ತವನ್ನು ಫೋನ್‌ ಪೇ, ಗೊಗಲ… ಪೇ, ಮುಖಾಂತರ ಜಮೆ ಮಾಡಿದ ಐಡಿ ಅಥವಾ ರೆಫರೆಸ್ಸ್‌ ಐಡಿಯನ್ನು ಸಂಬಂಧಪಟ್ಟಅಧಿಕಾರಿ ದೂರವಾಣಿ ಸಂಖ್ಯೆಗೆ ಕಳುಹಿಸಸಬೇಕು ಹಾಗೂ ಕಚೇರಿ ಜಾರಿಗೆ ತಂದಿರುವ ಸ್ಟೈಪಿಂಗ್‌ ಮಷೀನ್‌ ಮತ್ತು ಎಟಿಎಂ ಮುಖಾಂತರ ಆಸ್ತಿ ತೆರಿಗೆ ತೆರಿಗೆ ಪಾವತಿಸಲು ಖಾತೆಯ ಹೆಸರು - ಎಸ್‌ಎಎಸ್‌ ಫಂಡ್‌, ಖಾತೆ ಸಂಖ್ಯೆ -54026765506 ಮತ್ತು ನೀರಿ ತೆರಿಗೆ -ವಾಟರ್‌ ಫಂಡ್‌ -64044829780 -ಐಎಫ್‌ಎಸ್ಸಿ ಕೋಡ್‌ -ಎಸ್‌ಬಿಐಎನ್‌- 00040043 ತೆರಿಗೆ ಕಟ್ಟಬಹುದು.