Asianet Suvarna News Asianet Suvarna News

ತನ್ನ ಬಟ್ಟೆ ಒಗೆಯದ್ದಕ್ಕೆ ನಾದಿನಿಯನ್ನು ಕೊಚ್ಚಿ ಕೊಲೆ ಮಾಡಿದ ಭಾವ

ಶಿಡ್ಲಘಟ್ಟ ತಾಲೂಕು ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯ ಆನೆ ಮಡುಗು ಗ್ರಾಮದಲ್ಲಿ ದುರುಳನೊಬ್ಬ ತನ್ನ ನಾದಿನಿಯನ್ನೇ ಕೊಚ್ಚಿ ಕೊಲೆ ಮಾಡಿದ ಘಟನೆ  ಜರುಗಿದೆ.

 

Man murdered brothers wife for not washing his cloths
Author
Bangalore, First Published May 7, 2020, 2:45 PM IST
  • Facebook
  • Twitter
  • Whatsapp

ಚಿಕ್ಕಬಳ್ಳಾಪುರ(ಮೇ.07): ಶಿಡ್ಲಘಟ್ಟ ತಾಲೂಕು ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯ ಆನೆ ಮಡುಗು ಗ್ರಾಮದಲ್ಲಿ ದುರುಳನೊಬ್ಬ ತನ್ನ ನಾದಿನಿಯನ್ನೇ ಕೊಚ್ಚಿ ಕೊಲೆ ಮಾಡಿದ ಘಟನೆ  ಜರುಗಿದೆ.

ಗ್ರಾಮದ ನವೀನಚಂದ್ರ ಎಂಬುವವರ ಪತ್ನಿ ನಾಗಜ್ಯೋತಿ (26) ಕೊಲೆಯಾದ ನತದೃಷ್ಟೆ. ಆಕೆಯ ಭಾವ ಹರೀಶ್‌ ಕುಮಾರ್‌ ತನ್ನ ಬಟ್ಟೆಗಳನ್ನು ಒಗೆಯಲು ನಾದಿನಿ ನಾಗಜ್ಯೋತಿಗೆ ತಿಳಿಸಿದನು.

ಮದ್ಯ ಪ್ರಿಯರ ಜೇಬಿಗೆ ಸದ್ದಿಲ್ಲದೇ ದೊಡ್ಡ ಕತ್ತರಿ,  ಕರ್ನಾಟಕದಲ್ಲಿ ಬಲು ದುಬಾರಿ!

ಈಕೆ ಬಟ್ಟೆಒಗೆಯದೆ ಟಿ.ವಿ ನೋಡಿಕೊಂಡು ಮಲಗಿದ್ದಳು. ಆಕೆ ಗಂಡ ಸೀಮಂತಕ್ಕಾಗಿ ಬಟ್ಟೆಗಳನ್ನು ತರಲು ಚಿಂತಾಮಣಿಗೆ ಹೋಗಿದ್ದು, ಮಾವ ಮತ್ತು ಅತ್ತೆ ತೋಟದ ಕೆಲಸಕ್ಕೆಂದು ಹೋಗಿದ್ದರು. ಈ ಸಮಯದಲ್ಲಿ ಮನೆಯ ಒಳಗೆ ಬಂದ ಈಕೆಯ ಭಾವ ಹರೀಶ್‌ ಕುಮಾರ್‌ ಕೋಪಗೊಂಡು ಮಚ್ಚಿನಿಂದ ಹಲವು ಬಾರಿ ಕೊಚ್ಚಿದನೆಂದು ಈಕೆಯನ್ನು ಆಸ್ಪತ್ರೆಗೆ ಸೇರಿಸುವ ಯತ್ನದಲ್ಲಿದ್ದಾಗ ಮೃತಪಟ್ಟಿದ್ದಾಳೆಂದು ತಿಳಿದು ಬಂದಿದೆ.

ಸುದ್ದಿ ತಿಳಿದ ತಕ್ಷಣ ದಿಬ್ಬೂರಹಳ್ಳಿ ಪಿಎಸ್‌ಐ ನಾರಾಯಣಪ್ಪ ಸ್ಥಳಕ್ಕೆ ಭೇಟಿ ನೀಡಿ ಅವಿತುಕೊಂಡಿದ್ದ ಕೊಲೆ ಆರೋಪಿ ಹರೀಶ್‌ ಕುಮಾರ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

Follow Us:
Download App:
  • android
  • ios