ಮೂಡುಬಿದಿರೆ: ಡೆಂಘೀ 5 ಖಚಿತ, 23 ಶಂಕಿತ

ಮಳೆಗಾಲದ ಆರಂಭದ ದಿನಗಳಲ್ಲೇ ಮೂಡುಬಿದಿರೆ ತಾಲೂಕು ವ್ಯಾಪ್ತಿಯ ಪುರಸಭೆ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಡೆಂಘೀ, ಮಲೇರಿಯಾ ಪ್ರಕರಣಗಳು ಪತ್ತೆಯಾಗುತ್ತಿದ್ದು, ಆರೋಗ್ಯಾಧಿಕಾರಿಗಳು ಸೂಕ್ತ ಕ್ರಮ ಜರಗಿಸಬೇಕಾಗಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್‌ ಸೂಚಿಸಿದ್ದಾರೆ.

5 people found dengue positive in Mangalore

ಮೂಡುಬಿದಿರೆ(ಜೂ.24): ಮಳೆಗಾಲದ ಆರಂಭದ ದಿನಗಳಲ್ಲೇ ಮೂಡುಬಿದಿರೆ ತಾಲೂಕು ವ್ಯಾಪ್ತಿಯ ಪುರಸಭೆ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಡೆಂಘೀ, ಮಲೇರಿಯಾ ಪ್ರಕರಣಗಳು ಪತ್ತೆಯಾಗುತ್ತಿದ್ದು, ಆರೋಗ್ಯಾಧಿಕಾರಿಗಳು ಸೂಕ್ತ ಕ್ರಮ ಜರಗಿಸಬೇಕಾಗಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್‌ ಸೂಚಿಸಿದರು.

ಪ್ರವಾಸಿ ಮಂದಿರದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಟ್ಟಡ ಕಾಮಗಾರಿಗಳು ನಡೆಯುವಲ್ಲಿ, ಕೊರೊನಾ ಕಾರಣದಿಂದ ಅರ್ಧದಲ್ಲೇ ನಿಲುಗಡೆಯಾದ ನಿರ್ಮಾಣ ಕಾಮಗಾರಿಗಳ ಪ್ರದೇಶದಲ್ಲಿ ಬಹುದಿನಗಳಿಂದ ನಿಂತ ನೀರಲ್ಲಿ ರೋಗಕಾರಕ ಸೊಳ್ಳೆಗಳು ಉತ್ಪಾದನೆಯಾಗುವ ಸಾಧ್ಯತೆ ಇದ್ದು, ತಕ್ಷಣವೇ ಇಂಥ ತಾಣಗಳನ್ನು ಗುರುತಿಸಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕಾಗಿದೆ. ತ್ಯಾಜ್ಯ ವಿಲೇವಾರಿಯೂ ಅತ್ಯಂತ ಜವಾಬ್ದಾರಿಯಿಂದ ನಡೆಯಬೇಕಾಗಿದ್ದು, ಅಧಿಕಾರಿಗಳೊಂದಿಗೆ ಜನಪ್ರತಿನಿಧಿಗಳೂ ಎಚ್ಚರಿಕೆ ವಹಿಸಬೇಕಾಗಿದೆ’ ಎಂದರು.

ಮೀನು ಮಾರಾ​ಟ​ಗಾರ ಯುವ​ಕಗೆ ಸೋಂಕು: ದಕ್ಕೆ ಸೀಲ್‌​ಡೌ​ನ್‌

ತಾಲೂಕು ಆರೋಗ್ಯಾಧಿಕಾರಿ ಡಾ. ಸುಜಯ ಕುಮಾರ್‌ ಅವರು ನಗರಕ್ಕಿಂತ ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿ ಡೆಂಘೀ, ಮಲೇರಿಯಾ ಪ್ರಕರಣಗಳು ಪತ್ತೆಯಾಗುತ್ತಿರುವ ಬಗ್ಗೆ ತಿಳಿಸಿದರು.

ಡೆಂಘೀ ಪ್ರಕರಣಗಳಲ್ಲಿ ಪಾಲಡ್ಕದಲ್ಲಿ 2 ಶಂಕಿತ, ನೆಲ್ಲಿಕಾರ್‌ನಲ್ಲಿ 1 ಶಂಕಿತ, ಬೆಳುವಾಯಿಯಲ್ಲಿ 1, ಶಿರ್ತಾಡಿಯಲ್ಲಿ 6 ಶಂಕಿತ ಹಾಗೂ ಮೂರು ಡೆಂಘೀ ಪ್ರಕರಣಗಳು ಖಚಿತವಾಗಿವೆ. ನೆಲ್ಲಿಕಾರ್‌ನಲ್ಲಿ 1 ಶಂಕಿತ, ಕಲ್ಲ ಮುಂಡ್ಕೂರುನಲ್ಲಿ 7 ಶಂಕಿತ, 1 ಪ್ರಕರಣ ಖಚಿತವಾಗಿದೆ. ಮೂಡುಬಿದಿರೆ ಪುರಸಭಾ ವ್ಯಾಪ್ತಿಯಲ್ಲಿ 6 ಡೆಂಘೀ ಶಂಕಿತ. 1 ಪ್ರಕರಣ ಖಚಿತವಾಗಿದೆ. ಮಲೇರಿಯಾ ಪ್ರಕರಣಗಳಲ್ಲಿ ಬೆಳುವಾಯಿಯಲ್ಲಿ 1 ಹಾಗೂ ಮೂಡುಬಿದಿರೆಯಲ್ಲಿ 2 ಪ್ರಕರಣಗಳು ಖಚಿತವಾಗಿವೆ ಎಂದು ಅವರು ವಿವರಿಸಿದರು.

'ಕೊರೋನಾ ಚಿಕಿತ್ಸೆಗೆ ನಿಗದಿಪಡಿಸಿರೋ ದರ ಸೋಂಕಿತರಿಗೆ ಹೃದಯಾಘಾತವಾಗುವಂತಿದೆ '

ಪುರಸಭಾ ಮುಖ್ಯಾಧಿಕಾರಿ ಇಂದೂ ಎಂ., ಪರಿಸರ ಅಭಿಯಂತರೆ ಶಿಲ್ಪಾ ಎಸ್‌., ತಹಸೀಲ್ದಾರ್‌ ಅನಿತಾಲಕ್ಷ್ಮೇ, ಮೂಡುಬಿದಿರೆ ಪುರಸಭಾ ಸದಸ್ಯರಾದ ಪ್ರಸಾದ್‌ ಕುಮಾರ್‌, ರಾಜೇಶ್‌ ನಾಯ್‌್ಕ, ಕೊರಗಪ್ಪ, ನವೀನ್‌ ಶೆಟ್ಟಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ದಯಾವತಿ, ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಶಶಿಕಲಾ, ಪಾಲಡ್ಕ ಪ್ರಾ. ಆರೋಗ್ಯಕೇಂದ್ರದ ಡಾ. ಮನೀಷಾ, ಶಿರ್ತಾಡಿಯ ಡಾ. ನಸೀಬಾ ಮತ್ತಿತರರು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios