ತುಮಕೂರು(ಏ.21): ಕೊರೋನಾ ವಿರುದ್ಧದ ಹೋರಾಟದಲ್ಲಿ ಪೊಲೀಸರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿರುವುದು ಸರಿಯಷ್ಟೆ. ಅಂತೆಯೇ ಗರ್ಭಿಣಿ ಕೆಎಎಸ್‌ ಅಧಿಕಾರಿಯೊಬ್ಬರು ಜನಸೇವೆಗೆ ನಿಂತು ಮಾದರಿ ಎನಿಸಿದ್ದಾರೆ.

ಜಿಲ್ಲೆಯ ಶಿರಾ ಪಟ್ಟಣದ ತಹಸೀಲ್ದಾರ್‌ ನಹೀದ್‌ ಝಮ್‌ ಅವರು ಐದು ತಿಂಗಳ ಗರ್ಭಿಣಿಯಾಗಿದ್ದರೂ ಕೂಡಾ ಕರ್ತವ್ಯ ನಿಷ್ಠೆಯಿಂದ ಜನ ಸೇವೆಗೆ ನಿಂತಿದ್ದಾರೆ. ಈಗಾಗಲೇ ಶಿರಾದಲ್ಲಿ 2 ಕೊಕೋನಾ ಪ್ರಕರಣಗಳು ಪತ್ತೆಯಾಗಿದ್ದು ಇವರ ಪೈಕಿ ಒಬ್ಬರು ಮೃತಪಟ್ಟಿದ್ದಾರೆ. ಮುಂಜಾಗೃತ ಕ್ರಮವಾಗಿ ತಾವೇ ಖುದ್ದುನಿಂತು ಕಾರ್ಯ ವೈಖರಿಯನ್ನು ನೋಡುತ್ತಿದ್ದಾರೆ.

'ನಟ ಭಯಂಕರ' ಚಿತ್ರ ತಂಡದೊಂದಿಗೆ ಬಡವರಿಗೆ ನೆರವಾದ ಜಾರಕಿಹೊಳಿ ಕುಟುಂಬದ ಕುಡಿ!

ಈಗಾಗಲೇ 32 ಜನರನ್ನು ಹೋಮ್‌ ಕ್ವಾರಂಟೈನ್‌ನಲ್ಲಿ ಇರಿಸಲಾಗಿದ್ದು, ನಿತ್ಯ ಅವರಿರುವಂತಹ ಪ್ರದೇಶಕ್ಕೆ ತೆರಳಿ ಪರಿಶೀಲಿಸುತ್ತಿದ್ದಾರೆ. ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಪತಿ ಮೊಹತುರ್‌ ಅವರು ಸದ್ಯ ಶಿರಾ ಪಟ್ಟಣಕ್ಕೆ ಬಂದು ಜೊತೆಯಲ್ಲಿ ಉಳಿದುಕೊಂಡಿದ್ದಾರೆ.

ಬಡ, ನಿರ್ಗತಿಕರಿಗೆ ನಟ 'ಭಯಂಕರ' ಸಹಾಯ ಮಾರ್ರೆ!

ಇಂತಹ ಸಂದರ್ಭದಲ್ಲಿ ಸಾಮಾಜಿಕ ಸೇವೆ ಮಾಡುವ ಅವಕಾಶ ಜೀವನದಲ್ಲಿ ಸಿಗುವುದಿಲ್ಲ. ಆರೋಗ್ಯವನ್ನು ಸುಧಾರಿಸಿಕೊಂಡು ಕೆಲಸದಲ್ಲಿ ತೊಡಗಿರುವುದು ನನಗೆ ಸಂತೋಷ ತಂದಿದೆ. ಹೊಸ ಹೊಸ ಚಾಲೆಂಜ್ಗಳನ್ನು ಎದುರಿಸುತ್ತಿದ್ದೇನೆ. ಪ್ರತಿದಿನ ಸರ್ಕಾರದ ಪ್ರೊಟೋಕಾಲ್‌ಗಳನ್ನು ಪಾಲನೆ ಮಾಡುವುದು ವಿಭಿನ್ನವಾಗಿದೆ. ಮನೆಯಲ್ಲಿ ತಮ್ಮ ಪತಿ ಜೊತೆಯಲ್ಲಿದ್ದು ಆತ್ಮಸ್ಥೈರ್ಯವನ್ನು ತುಂಬುತ್ತಿದ್ದಾರೆ ಎಂದು ತಿಳಿಸಿದ್ದಾರೆ.