ಚಿಕ್ಕಬಳ್ಳಾಪುರ : ನಿವೃತ್ತ ದಿನಗೂಲಿ ನೌಕರರಿಗೆ 5 ಲಕ್ಷ ನೆರವು
- ನಗರಸಭೆಯಲ್ಲಿ ಕರ್ತವ್ಯ ಬಹಳ ವರ್ಷಗಳಿಂದ ಸೇವೆ ನಿರ್ವಹಿಸುತ್ತಿರುವ (ಕನಿಷ್ಠ ವೇತನದ) ದಿನಗೂಲಿ ನೌಕರರು
- ದಿನಗೂಲಿ ನೌಕರರಿಗೆ ನಿವೃತ್ತಿಯಾದಾಗ ಬರಿಗೈಯಲ್ಲಿ ಕಳುಹಿಸುತ್ತಿರುವುದು ನೋವಿನ ಸಂಗತಿ
- ದೀರ್ಘ ಸೇವೆಯನ್ನು ಗಣನೆಗೆ ತೆಗೆದುಕೊಂಡು ಅವರ ನಿವೃತ್ತಿಯಂದು ಸೇವಾ ಅವಧಿಗೆ ಅನುಗುಣವಾಗಿ ಮಾನವೀಯ ದೃಷ್ಟಿಯಿಂದ ಗರಿಷ್ಠ 5 ಲಕ್ಷ ನೆರವು
ಶಿಡ್ಲಘಟ್ಟ (ಸೆ.15): ನಗರಸಭೆಯಲ್ಲಿ ಕರ್ತವ್ಯ ಬಹಳ ವರ್ಷಗಳಿಂದ ಸೇವೆ ನಿರ್ವಹಿಸುತ್ತಿರುವ (ಕನಿಷ್ಠ ವೇತನದ) ದಿನಗೂಲಿ ನೌಕರರಿಗೆ ನಿವೃತ್ತಿಯಾದಾಗ ಬರಿಗೈಯಲ್ಲಿ ಕಳುಹಿಸುತ್ತಿರುವುದು ನೋವಿನ ಸಂಗತಿಯಾಗಿದ್ದು, ಅವರ ದೀರ್ಘ ಸೇವೆಯನ್ನು ಗಣನೆಗೆ ತೆಗೆದುಕೊಂಡು ಅವರ ನಿವೃತ್ತಿಯಂದು ಸೇವಾ ಅವಧಿಗೆ ಅನುಗುಣವಾಗಿ ಮಾನವೀಯ ದೃಷ್ಟಿಯಿಂದ ಗರಿಷ್ಠ 5 ಲಕ್ಷ ರುಪಾಯಿಗಳನ್ನು ನೀಡವ ಕುರಿತಂತೆ ನಗರಸಭಾ ಪೌರಾಯುಕ್ತ ಶ್ರೀಕಾಂತ್ ಮನವಿಗೆ ಅವಿರೋಧವಾಗಿ ಸಮ್ಮತಿ ಸೂಚಿಸಲಾಯಿತು.
ಸೋಮವಾರ ನಗರಸಭೆಯ ಸಭಾಂಗಣದಲ್ಲಿ ಅಧ್ಯಕ್ಷೆ ಸುಮಿತ್ರಾ ರಮೇಶ್‌ರವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ 15 ನೇ ಹಣಕಾಸು ಯೋಜನೆಯಲ್ಲಿನ 1 ಕೋಟಿ 80 ಲಕ್ಷ ರೂ ಗಳ ವೆಚ್ಚಕ್ಕೆ ಒಪ್ಪಿಗೆ ಸೂಚಿಸಲಾಯಿತು.
ತಿಂಗಳಲ್ಲಿ 11,436 ಮಂದಿಗೆ ಪಿಂಚಣಿ ಮಂಜೂರು
ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಪೌರಾಯುಕ್ತ ಶ್ರೀಕಾಂತ್ ಬಹುತೇಕ ನಗರಸಭೆಗಳಿಗೆ 15 ನೇ ಹಣಕಾಸು ಯೋಜನೆಯಲ್ಲಿ 6 ರಿಂದ 7 ಕೋಟಿ ರೂ ಗಳನ್ನು ನೀಡುತ್ತಿದ್ದು ಶಿಡ್ಲಘಟ್ಟನಗರ ಸಭೆಗೆ ಸರ್ಕಾರ ಕೇವಲ 1 ಕೋಟಿ ರೂ ಮಾತ್ರ ಬರುತ್ತಿದೆ ಈ ಸಹಾಯ ಧನದಿಂದ ಹೆಚ್ಚಿನ ಅಭಿವೃದ್ಧಿಗೆ ತೊಡಕಾಗಿದ್ದು ನಗರಸಭೆಯ ಸದಸ್ಯರ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗತ್ತಿಲ್ಲ ಎಂದರು ಚುನಾಯಿತ ಪ್ರತಿನಿಧಿಗಳು ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ತಂದು ಹೆಚ್ಚಿನ ಅನುಧಾನ ತರಬೇಕೆಂದು ಕೋರಿದರು.
ಸರ್ಕಾರದ ಖಾಲಿ ಜಾಗದಲ್ಲಿ ಅಕ್ರಮ ನಿರ್ಮಾಣಗಳಿಗೆ ಹಕ್ಕು ಪತ್ರಗಳನ್ನು ನೀಡುವುದಿಲ್ಲ. ಆನ್ ಲೈನ್ ಮುಖಾಂತರ ಪಾರದರ್ಶಕವಾಗಿ ಅರ್ಜಿಗಳನ್ನು ಸ್ವೀಕರಸಿ 20/30 ನಿವೇಶನಗಳನ್ನು ನೀಡಬಹುದಾಗಿದ್ದು ಈ ಬಗ್ಗೆ ಸಾರ್ವಜನಿಕವಾಗಿ ಪ್ರಕಟಣೆ ಹೊರಡಿಸಲಾಗುವುದೆಂದರು.
ನಗರದಲ್ಲಿನ ಅಂಗನವಾಡಿ ಕಟ್ಟಡಗಳು ಬಾಡಿಗೆಗೆ ಪಡೆಯಲಾಗಿದ್ದು ಹೆಚ್ಚಿನ ವೆಚ್ಚ ಬರುತ್ತಿದ್ದು ಸ್ವಂತ ಕಟ್ಟಡಗಳನ್ನು ನಗರಸಭೆಯ ವತಿಯಿಂದ ನಿರ್ಮಿಸಲು ಅನುಮತಿ ಕೋರಿದರು, ಹೆಚ್ಚಿನ ಚರ್ಚೆ ಇಲ್ಲದೆ 1.20 ಕೊಟಿರೂಗಳ ವೆಚ್ಚದ ಪ್ರಸ್ತಾವನೆಯನ್ನು ಸಭೆಯಲ್ಲಿ ಸರ್ವಾನುಮತದಿಂದ ಅನುಮೋದನೆ ನೀಡಲಾಯಿತು