ಗ್ಯಾಸ್ ಪೂರೈಕೆ ವೇಳೆ 5 ಕಿ.ಮೀ. ಮೇಲ್ಪಟ್ಟರೆ ಸೇವಾ ಶುಲ್ಕ ನೀಡಬೇಕು
ಸರ್ಕಾರದ ಆದೇಶದಂತೆ 5 ಕಿ.ಮೀ. ಮೇಲೆ ಪ್ರತಿ ಕಿ.ಮೀ.ಗೆ 1.60 ರಂತೆ ಸೇವಾ ಶುಲ್ಕ ನೀಡಬೇಕು ಎಂದು ಹೈಕೋರ್ಚ್ ಆದೇಶಿಸಿರುವುದಾಗಿ ಎಚ್‌ಪಿ ಗ್ಯಾಸ್ ಸಂಚಾಲಕ ಮೆಹುಲ್ ಜೆ. ಪಟೇಲ್ ತಿಳಿಸಿದ್ದಾರೆ. 2006ರಲ್ಲಿ ಆಹಾರ ಸರಬರಾಜು ಇಲಾಖೆ ಆಯುಕ್ತರಿಂದ ಒಂದು ಆದೇಶವಾಗಿದೆ.
ಮೈಸೂರು : ಸರ್ಕಾರದ ಆದೇಶದಂತೆ 5 ಕಿ.ಮೀ. ಮೇಲೆ ಪ್ರತಿ ಕಿ.ಮೀ.ಗೆ 1.60 ರಂತೆ ಸೇವಾ ಶುಲ್ಕ ನೀಡಬೇಕು ಎಂದು ಹೈಕೋರ್ಚ್ ಆದೇಶಿಸಿರುವುದಾಗಿ ಎಚ್‌ಪಿ ಗ್ಯಾಸ್ ಸಂಚಾಲಕ ಮೆಹುಲ್ ಜೆ. ಪಟೇಲ್ ತಿಳಿಸಿದ್ದಾರೆ. 2006ರಲ್ಲಿ ಆಹಾರ ಸರಬರಾಜು ಇಲಾಖೆ ಆಯುಕ್ತರಿಂದ ಒಂದು ಆದೇಶವಾಗಿದೆ.
5 ಕಿ.ಮೀ ಮೇಲೆ ಪ್ರತಿ ಕಿ.ಮೀ.ಗೆ 1.60 ಪೈಸೆಯಂತೆ ಕೊಡಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದೆ. ಈ ಎರಡು ದಾಖಲಾತಿಯ ನಕಲನ್ನು ಜಿಲ್ಲಾಧಿಕಾರಿಗೆ ಎಲ್ಲಾ ಗ್ಯಾಸ್ ವಿತರಕರು ಸಹಿ ಮಾಡಿ ಮನವಿ ಪತ್ರ ಕೊಟ್ಟು ವಿಚಾರಣೆ ಮಾಡುವುದಕ್ಕೆ ಕೋರಿರುವುದಾಗಿ ಅವರು ತಿಳಿಸಿದ್ದಾರೆ.
ಸಗಣಿ ಗ್ಯಾಸ್‌ನಿಂದ ಓಡಬಲ್ಲ ಕಾರು ನಿರ್ಮಾಣಕ್ಕೆ ಮಾರುತಿ ರೆಡಿ
ನವದೆಹಲಿ (ಜನವರಿ 28, 2023): ಜಪಾನ್ ಮೂಲದ ಖ್ಯಾತ ಕಾರು ತಯಾರಕ ಕಂಪನಿ ಸುಜುಕಿ ಹಾಗೂ ಭಾರತದಲ್ಲಿ ಅದರ ಪೂರಕ ಸಂಸ್ಥೆಯಾಗಿರುವ ಮಾರುತಿ, ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಗಣಿಯಿಂದ ಬಿಡುಗಡೆಯಾಗುವ ಜೈವಿಕ ಅನಿಲವನ್ನು ಇಂಧನವಾಗಿ ಬಳಕೆ ಮಾಡಲು ಒಲವು ತೋರಿವೆ. ಜಪಾನ್‌ನ ಸುಜುಕಿ ಮೋಟಾರ್ ಕಾರ್ಪೊರೇಷನ್ ಸರ್ಕಾರವು ನಿಗದಿಪಡಿಸಿದ ದಿನಾಂಕಕ್ಕೆ ಅನುಗುಣವಾಗಿ 2070 ರ ವೇಳೆಗೆ ಭಾರತದಲ್ಲಿ ಇಂಗಾಲದ ತಟಸ್ಥತೆಯನ್ನು ಸಾಧಿಸುವ ಗುರಿಯನ್ನು ಹೊಂದಿದೆ.
2030ರ ವೇಳೆಗೆ 6 ಹೊಸ ಎಲೆಕ್ಟ್ರಿಕ್ ವಾಹನಗಳನ್ನು (Electric Vehicles) ಬಿಡುಗಡೆ ಮಾಡಲು ನಿರ್ಧರಿಸಿರುವ ಮಾರುತಿ ಸುಜುಕಿ (Maruti Suzuki), ಮುಂದಿನ ದಶಕಗಳಲ್ಲಿ ಮಾಲಿನ್ಯ ನಿಯಂತ್ರಣಕ್ಕೆ (Pollution Control) ಸಂಬಂಧಿಸಿದಂತೆ ಸುಸ್ಥಿರವಾದ ಪರಿಹಾರ (Solution) ತರಲು ನೋಡುತ್ತಿದೆ. ಇದರಲ್ಲಿ ಒಂದು ಯೋಜನೆ ಹಸುವಿನ ಸಗಣಿಯಿಂದ ಉತ್ಪಾದಿಸುವ ಅನಿಲವನ್ನು (Cow Dung Gas) ಆಧರಿಸಿದ್ದಾಗಿದ್ದು, ಈ ಕುರಿತು ಕಂಪನಿ ಸಂಶೋಧನೆ ಆರಂಭಿಸಿದೆ. ಜೈವಿಕ ಅನಿಲ ಮಾರುಕಟ್ಟೆಯಲ್ಲಿರುವ ಈ ಸವಾಲನ್ನು ಮೊದಲಿಗೆ ಸ್ವೀಕರಿಸಲು ಮುಂದಾಗಿರುವ ಸುಜುಕಿ, ತನ್ನ ಸಿಎನ್ಜಿ ಮಾಡೆಲ್ನ ವಾಹನಗಳಲ್ಲಿ ಇದನ್ನು ಬಳಕೆ ಮಾಡಲು ನಿರ್ಧರಿಸಿದೆ. ಪ್ರಸ್ತುತ ಭಾರತದಲ್ಲಿ ಶೇ.70ರಷ್ಟು ಸಿಎನ್ಜಿ ವಾಹನಗಳು ಮಾರುತಿ ಸುಜುಕಿ ಕಂಪನಿಗೆ ಸೇರಿದವುಗಳಾಗಿವೆ. ಸಗಣಿ ಬಳಕೆಯ ಕುರಿತಾಗಿ ಜಾಗತಿಕ ಮಟ್ಟದಲ್ಲಿ ಕಂಪನಿ ಈಗಾಗಲೇ ತನ್ನ ಪ್ರತಿಪಾದನೆಯನ್ನು ಮಂಡಿಸಿದೆ.
ಇದನ್ನು ಓದಿ: ಕಾರು ಪ್ರಿಯರಿಗೆ ಶಾಕಿಂಗ್ ನ್ಯೂಸ್: ಇಂದಿನಿಂದ ಮಾರುತಿ ಸುಜುಕಿಯ ಎಲ್ಲ ಮಾಡೆಲ್ ಕಾರುಗಳ ಬೆಲೆ ಹೆಚ್ಚಳ..!
ಆಮ್ಲಜನಕರಹಿತ ಜೀರ್ಣಕ್ರಿಯೆ ಎಂಬ ಪ್ರಕ್ರಿಯೆಯ ಮೂಲಕ ಹಸುವಿನ ಗೊಬ್ಬರವನ್ನು ಕಾರಿನ ಇಂಧನವಾಗಿ ಪರಿವರ್ತಿಸಬಹುದು. ಈ ಪ್ರಕ್ರಿಯೆಯು ಆಮ್ಲಜನಕದ ಅನುಪಸ್ಥಿತಿಯಲ್ಲಿ ಗೊಬ್ಬರವನ್ನು ಬ್ರೇಕ್ ಡೌನ್ ಮಾಡುವುದನ್ನು ಒಳಗೊಂಡಿರುತ್ತದೆ. ಇದು ಜೈವಿಕ ಅನಿಲ, ಮೀಥೇನ್, ಕಾರ್ಬನ್ ಡೈಆಕ್ಸೈಡ್ ಮತ್ತು ಇತರ ಅನಿಲಗಳ ಪ್ರಮಾಣವನ್ನು ಉತ್ಪಾದಿಸುತ್ತದೆ. ನಂತರ ಜೈವಿಕ ಅನಿಲವನ್ನು ಸ್ವಚ್ಛಗೊಳಿಸಬಹುದು ಮತ್ತು ಸಂಸ್ಕರಿಸಬಹುದು ಹಾಗೂ ಕಲ್ಮಶಗಳನ್ನು ತೆಗೆದುಹಾಕಬಹುದು ಮತ್ತು ಮೀಥೇನ್ ಅಂಶವನ್ನು ಹೆಚ್ಚಿಸಬಹುದಾಗಿದೆ. ಇದನ್ನು ಮಾಡಿದ ನಂತರ, ಜೈವಿಕ ಅನಿಲವನ್ನು ಇಂಧನ ಮೂಲವಾಗಿ ಬಳಸಬಹುದು. ವಿದ್ಯುಚ್ಛಕ್ತಿಯನ್ನು ಉತ್ಪಾದಿಸಲು ಸುಟ್ಟು ಅಥವಾ ಸಂಕುಚಿತಗೊಳಿಸಿ ಮತ್ತು ವಾಹನಗಳಿಗೆ ನೈಸರ್ಗಿಕ ಅನಿಲದ ಬದಲಿಯಾಗಿ ಬಳಸಲಾಗುತ್ತದೆ ಎಂದು ತಿಳಿದುಬಂದಿದೆ.
ಈ ಮಧ್ಯೆ, Fujisan Asagiri Biomas LLC ನಲ್ಲಿಯೂ ಹೂಡಿಕೆ ಮಾಡಿರುವುದಾಗಿ ಸುಜುಕಿ ಹೇಳಿಕೊಂಡಿದೆ. ಈ ಸಂಸ್ಥೆಯು ಸ್ಥಳೀಯ ರೈತರಿಂದ ಸಂಗ್ರಹಿಸಿದ ಹಸುವಿನ ಸಗಣಿಯನ್ನು ಶಕ್ತಿ ಉತ್ಪಾದನೆಗೆ ಜೈವಿಕ ಅನಿಲವಾಗಿ ಪರಿವರ್ತಿಸುತ್ತದೆ. ಭಾರತದಲ್ಲಿನ ಜೈವಿಕ ಅನಿಲ ವ್ಯವಹಾರವು ಇಂಗಾಲದ ತಟಸ್ಥತೆಗೆ ಕೊಡುಗೆ ನೀಡುವುದಲ್ಲದೆ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಭಾರತದ ಸಮಾಜಕ್ಕೆ ಕೊಡುಗೆ ನೀಡುತ್ತದೆ ಎಂದು ನಾವು ನಂಬುತ್ತೇವೆ ಎಂದೂ ಸುಜುಕಿ ಮಾಹಿತಿ ನೀಡಿದೆ.
ಇದನ್ನೂ ಓದಿ: 550 ಕಿ.ಮೀ ಮೈಲೇಜ್, ಗೇಮ್‌ಚೇಂಜರ್ ಮಾರುತಿ ಸುಜುಕಿ eVX ಎಲೆಕ್ಟ್ರಿಕ್ ಕಾರು ಅನಾವರಣ!