Asianet Suvarna News Asianet Suvarna News

Mysuru ಹವಾಮಾನ ಇಲಾಖೆಯಿಂದ ರೈತರಿಗೆ ಸಲಹೆ : 31ರವರೆಗೆ ಮಳೆ

  • ಭಾರತೀಯ ಹವಾಮಾನ ಇಲಾಖೆಯ ಈ ವಾರದ ಮುನ್ಸೂಚನೆ
  • ಮೈಸೂರು ಜಿಲ್ಲೆಯಲ್ಲಿ ಅ.27 ರಿಂದ 31 ರವರೆಗೆ ಮೋಡ ಕವಿದ ವಾತಾವರಣ
  • ಸಾಧಾರಣ ಮಳೆ ಬರುವ ಸಾಧ್ಯತೆ ಇದೆ ಎಂದು ನಾಗನಹಳ್ಳಿಯ ಗ್ರಾಮೀಣ ಕೃಷಿ ಹವಾಮಾನ ಸೇವಾ, ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಮಾಹಿತಿ
5 Days Light Rain Alerts To Mysore farmers snr
Author
Bengaluru, First Published Oct 28, 2021, 1:53 PM IST

 ಮೈಸೂರು (ಅ.28):  ಭಾರತೀಯ ಹವಾಮಾನ ಇಲಾಖೆಯ (IMD) ಈ ವಾರದ ಮುನ್ಸೂಚನೆ ಪ್ರಕಾರ ಮೈಸೂರು (Mysuru) ಜಿಲ್ಲೆಯಲ್ಲಿ ಅ.27 ರಿಂದ 31 ರವರೆಗೆ ಮೋಡ ಕವಿದ ವಾತಾವರಣ (Cloudy weather) ಇರಲಿದ್ದು ಸಾಧಾರಣ ಮಳೆ ಬರುವ ಸಾಧ್ಯತೆ ಇದೆ ಎಂದು ನಾಗನಹಳ್ಳಿಯ ಗ್ರಾಮೀಣ ಕೃಷಿ ಹವಾಮಾನ ಸೇವಾ, ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಕೃಷಿ ಸಲಹೆಗಳು- ಜಿಲ್ಲೆಯಲ್ಲಿ ಸಾಕಷ್ಟು ಮಳೆ (Rain) ಬಂದಿರುವುದರಿಂದ ಸಾಮಾಜಿಕ ಅರಣ್ಯವನ್ನು (Forest) ಬೆಳೆಸಲು ಒತ್ತು ನೀಡುವುದು ಅವಶ್ಯಕ. ಹೊಲದ ಬದುವು ಮತ್ತು ಸಾಗುವಳಿಯಲ್ಲಿ ಇಲ್ಲದ ಜಮೀನಿನಲ್ಲಿ (land) ಹಣ್ಣಿನ ಹಾಗೂ ಆರ್ಥಿಕವಾಗಿ ಅನುಕೂಲವಾಗುವ ಸಾಗವಾನಿ, ಬೇವು ಹೆಬ್ಬೇವು, ಸಿಲ್ವರ್‌ ಓಕ್‌ ಮತ್ತು ಸರ್ವೆ ಮುಂತಾದ ಮರಗಳನ್ನು (Tree) ಮತ್ತು ಕೃಷಿ ಉಪಕರಣ ತಯಾರಿಸಲು ಉಪಯೋಗವಾಗುವ ಗಿಡ ಮರಗಳನ್ನು ನೆಡಬೇಕು. ಮಳೆಯಾಗುವ ಸಂಭವವಿರುವುದರಿಂದ ಹೆಚ್ಚಿನ ಮಳೆ ನೀರನ್ನು ಬಸಿಗಾಲುವೆಗಳ ಮೂಲಕ ಹೊರಕ್ಕೆ ಹಾಕಿ. ಬೆಳೆಗಳಲ್ಲಿ ಔಷದ ಸಿಂಪಡಣೆಯನ್ನು (Pesriside) ಕೆಲದಿನಗಳ ಕಾಲ ಮುಂದೂಡಿ. ಹಿಂಗಾರು ಬಿತ್ತನೆಯನ್ನು ಕೆಲ ದಿನಗಳ ಕಾಲ ಮುಂದೂಡಿ ಹಾಗೂ ಕಡಿಮೆ ಅವಧಿಯ ತಳಿಗಳನ್ನು ಬಿತ್ತನೆ ಮಾಡಿ.

ಅತಿವೃಷ್ಟಿಯಿಂದ ಆಲೂ ಬಿತ್ತನೆ ಇನ್ನೂ ವಿಳಂಬ : ಕೊಳೆಯುತ್ತಿರುವ ಬಿತ್ತನೆ ಬೀಜ

ಕಳೆದ ಒಂದು ತಿಂಗಳಿನಿಂದ ಉತ್ತಮ ಮಳೆಯಿಂದ ಕಳೆಗಳ ಸಂಖ್ಯೆ ಹೆಚ್ಚಾಗಿ ಬೆಳೆಗಳಲ್ಲಿ (Crops) ಬೆಳವಣಿಗೆ ಕುಂಠಿತವಾಗುವುದು ಕಂಡು ಬಂದಿದ್ದು, ಇದರ ಹತೋಟಿಗೆ ಅಂತರ ಬೇಸಾಯ ಪದ್ಧತಿಯನ್ನು ಅನುಸರಿಸಿ ಕಳೆಗಳನ್ನು ನಿರ್ಮೂಲನೆ ಮಾಡುವಂತೆ ವಿಭಾಗದ ಹಿರಿಯ ಕೃಷಿ ಅಧೀಕ್ಷಕ ಡಾ.ಪಿ. ಪ್ರಕಾಶ್‌, ಸಹ ಸಂಶೋಧಕ ಎನ್‌. ನರೇಂದ್ರಬಾಬು ಸಲಹೆ ನೀಡಿದ್ದಾರೆ.

ರೈತರು ಹೆಚ್ಚಿನ ಮಾಹಿತಿಗಾಗಿ ಮೊ. 94498 69914, 93435 32154, ದೂ. 0821- 2591267 ಸಂಪರ್ಕಿಸಬಹುದು.

2 ದಿನ 15 ಜಿಲ್ಲೆಗಳಲ್ಲಿ ಮಳೆಯ ‘ಯೆಲ್ಲೋ ಅಲರ್ಟ್‌

ರಾಜ್ಯದ ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ (Coastal) ಅಕ್ಟೋಬರ್‌ 29 ಮತ್ತು 30ರಂದು ಹಿಂಗಾರು ಮಾರುತಗಳು ಪ್ರಬಲವಾಗಲಿದ್ದು, ಗುಡುಗು ಸಹಿತ ಮಳೆಯಾಗಲಿದೆ (Rain). 

ಈ ಹಿನ್ನೆಲೆಯಲ್ಲಿ ಬೆಂಗಳೂರು (Bengaluru) ನಗರ ಸೇರಿದಂತೆ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ‘ಯೆಲ್ಲೋ ಅಲರ್ಟ್‌’ (Yellow Alert) ಘೋಷಿಸಲಾಗಿದೆ. 

ಅ.29ಕ್ಕೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ (kolar), ಚಿಕ್ಕಬಳ್ಳಾಪುರ (Chikkaballapura), ಚಾಮರಾಜನಗರ (Chamarajanagar), ಮೈಸೂರು, ಕೋಲಾರ, ಮಂಡ್ಯ (Mandya), ರಾಮನಗರ (Ramanagara), ಶಿವಮೊಗ್ಗ (shivamogga), ದಾವಣಗೆರೆ, ತುಮಕೂರು, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಯಲ್ಲಿ ‘ಯೆಲ್ಲೋ ಅಲರ್ಟ್‌’ ಎಚ್ಚರಿಕೆ ನೀಡಲಾಗಿದೆ. 

ಕೇರಳ ಮಳೆ ಭೀಕರತೆ: ತಬ್ಬಿದ ಸ್ಥಿತಿಯಲ್ಲಿ ತಾಯಿ, ಮಗು ಶವಪತ್ತೆ!

ಅ.30ಕ್ಕೆ ಈ ಜಿಲ್ಲೆಗಳ ಜೊತೆಗೆ ಕರಾವಳಿಯ ಉತ್ತರ ಕನ್ನಡ, ಉಡುಪಿ (Udupi), ದಕ್ಷಿಣ ಕನ್ನಡ ಜಿಲ್ಲೆಗೂ ‘ಯೆಲ್ಲೋ ಅಲರ್ಟ್‌’ ಘೋಷಿಸಲಾಗಿದೆ. ಅ.27 ಮತ್ತು ಅ.28ರಂದು ಮಳೆಯ ಅಬ್ಬರ ಇರುವುದಿಲ್ಲ. ಉತ್ತರ ಕರ್ನಾಟಕದಲ್ಲಿ ಒಣ ಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಲಾಗಿದೆ.

ಕಳೆದ ಕೆಲ ದಿನಗಳಿಂದ ನಿರಂತರವಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಹಲವೆಡೆ ಬೆಳೆಗಳು ಹಾಳಾಗಿದ್ದು ರೈತರು ಸಂಕಷ್ಟ ಪಡುವಂತಾಗಿದೆ. ಇನ್ನು ಬೆಂಗಳೂರು ನಗರದಲ್ಲಿಯೂ ಕಳೆದ ಅನೇಕ ದಿನಗಳಿಂದ ಮಳೆಯಾಗುತ್ತಲೇ ಇದ್ದು ಜನರು ಪರದಾಡುವಂತಾಗಿದೆ. ಮನೆಗಳಿಗೂ ನೀರು ನುಗ್ಗುತ್ತಿದ್ದು ತಗ್ಗು ಪ್ರದೇಶಗಳು ಜಲಾವೃತವಾಗುತ್ತಿವೆ.

Follow Us:
Download App:
  • android
  • ios