ಬೀದರ್: ಪಾಪನಾಶ ದೇಗುಲ ಅಭಿವೃದ್ಧಿಗೆ 5 ಕೋಟಿ, ಕೇಂದ್ರ ಸಚಿವ ಖೂಬಾ
ಇಂದು ನಾವು ಮಾಡಿರುವ ಕೆಲಸಗಳು ಮುಂದಿನ ನೂರು ವರ್ಷದವರೆಗೆ ಅವುಗಳಿಗೆ ಧಕ್ಕೆಯಾಗದಂತೆ, ಮತ್ತೆ ಮರು ನಿರ್ಮಾಣ ಮಾಡುವಂತೆ ಆಗಬಾರದು. ಅಷ್ಟು ಶಿಸ್ತಿನಿಂದ ಕೆಲಸ ಮಾಡಿ, ದೇವಸ್ಥಾನದ ಸ್ಥಳವಿರುವುದರಿಂದ ವಾಸ್ತುಗಳಂತಹ ವಿಷಯ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿ ಎಂದು ಸೂಚಿಸಿದ ಕೇಂದ್ರ ಸಚಿವ ಭಗವಂತ ಖೂಬಾ
ಬೀದರ್(ಡಿ.25): ಪ್ರಸಾದ ಯೋಜನೆಯಡಿ, ಪ್ರಸಕ್ತ ಸಾಲಿನಲ್ಲಿ ಇಲ್ಲಿನ ಪಾಪನಾಶ ದೇವಾಲಯವು ಆಯ್ಕೆಯಾಗಿದ್ದು, ಸದ್ಯ ಸದರಿ ದೇವಸ್ಥಾನದ ಅಭಿವೃದ್ಧಿಗೆ ರು.5 ಕೋಟಿ ಮಂಜೂರಾತಿಯಾಗಿರುತ್ತದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದರು. ಮತ್ತು ದೇವಸ್ಥಾನದ ಆಡಳಿತ ಮಂಡಳಿಯ ಮುಖ್ಯಸ್ಥರೊಂದಿಗೆ ಶನಿವಾರ ಬೆಳಗ್ಗೆ ತಮ್ಮ ಗೃಹ ಕಚೇರಿಯಲ್ಲಿ ಸಭೆ ನಡೆಸಿ ತಿಳಿಸಿದರು.
ರು.5 ಈ ಕುರಿತು ಸಚಿವ ಖೂಬಾ ಶನಿವಾರ ಈ ಅನುದಾನವನ್ನು ಸರಿಯಾದ ಕಾಮಗಾರಿಗಳಿಗೆ ಉಪಯೋಗಿಸಿಕೊಂಡು, ದೇವಸ್ಥಾನದ ಅಭಿವೃದ್ಧಿ ಮತ್ತು ಭಕ್ತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಅಧಿಕಾರಿಗಳ ಕೋಟಿ ಅನುದಾನದಲ್ಲಿ ಸದ್ಯಕ್ಕೆ ಪಾಪನಾಶ ದೇವಸ್ಥಾನದಲ್ಲಿ ಶೌಚಾಲಯಗಳೊಂದಿಗೆ 20 ಕೋಣೆಗಳು, ಬಹುಪಯೋಗಿ ಸಭಾಂಗಣ, ಸೋಲಾರ್ ಪ್ಯಾನೆಲ್, ಸಾಮಾನ್ಯ ಶೌಚಾಲಯಗಳು, ಭಕ್ತಾದಿಗಳಿಗೆ ಮಾಹಿತಿ ಕೇಂದ್ರ, ಕಾಯುವ ಕೋಣೆ ನಿರ್ಮಿಸಿಕೊಡುವಂತೆ ದೇವಸ್ಥಾನದ ಆಡಳಿತ ಮಂಡಳಿಯವರು ಸಚಿವರಿಗೆ ಕೋರಿಕೊಂಡರು. ಇದಕ್ಕೆ ಸಚಿವರು ಸಹಮತಿಸಿ, ವಿವರವಾದ ಯೋಜನಾ ವರದಿ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚಿಸಿದರು. ತದನಂತರ ದೇವಸ್ಥಾನದ ಮುಖ್ಯಸ್ಥರೊಂದಿಗೆ ಅಧಿಕಾರಿಗಳು ಸ್ವತಃ ಪಾಪನಾಶ ದೇವಸ್ಥಾನಕ್ಕೆ ಹಾಗೂ ದೇವಸ್ಥಾನದ ಸುತ್ತಮುತ್ತ ಇರುವ ಸ್ಥಳಗಳಿಗೆ ಭೇಟಿ ನೀಡಿ, ಕೈಗೊಳ್ಳಬೇಕಾದ ಕಾಮಗಾರಿಗಳ ಬಗ್ಗೆ ಸಲಹೆ ಮತ್ತು ಸೂಚನೆಗಳು ನೀಡಿದರು.
ಬೀದರ್: 4 ನೀರಾವರಿ ಯೋಜನೆಗಳಿಗೆ ಸಚಿವ ಸಂಪುಟ ಅಸ್ತು, ಕೇಂದ್ರ ಸಚಿವ ಖೂಬಾ
ದೇವಸ್ಥಾನದಲ್ಲಿ ಮುಖ್ಯದ್ವಾರ, ಕೊಳದ ಜೀರ್ಣೊದ್ಧಾರ ಇತ್ಯಾದಿ ವಿಷಯಗಳ ಕುರಿತು ಚರ್ಚಿಸಲಾಯಿತು. ಸಚಿವರು ದೇವಸ್ಥಾನದ ಅಧೀನದಲ್ಲಿರುವ ಎಲ್ಲಾ ಸ್ಥಳವನ್ನು ಸರಿಯಾಗಿ ಸರ್ವೆ ಮಾಡಿ, ನಮ್ಮ ಸಂಸ್ಕಾರ, ನಮ್ಮ ಪರಂಪರೆ ಎತ್ತಿ ಹಿಡುವಂತಹ ಕಾಮಗಾರಿಗಳು ಮಾಡಬೇಕು. ಇದಕ್ಕಾಗಿ ಹತ್ತಾರು ಸಲ ಯೋಚಿಸಿ, ಸರಿಯಾಗಿ ಕ್ರೀಯಾ ಯೋಜನೆ ಸಿದ್ಧಪಡಿಸಿ, ಇಂದು ನಾವು ಮಾಡಿರುವ ಕೆಲಸಗಳು ಮುಂದಿನ ನೂರು ವರ್ಷದವರೆಗೆ ಅವುಗಳಿಗೆ ಧಕ್ಕೆಯಾಗದಂತೆ, ಮತ್ತೆ ಮರು ನಿರ್ಮಾಣ ಮಾಡುವಂತೆ ಆಗಬಾರದು. ಅಷ್ಟು ಶಿಸ್ತಿನಿಂದ ಕೆಲಸ ಮಾಡಿ, ದೇವಸ್ಥಾನದ ಸ್ಥಳವಿರುವುದರಿಂದ ವಾಸ್ತುಗಳಂತಹ ವಿಷಯ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿ ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಬುಡಾ ಅಧ್ಯಕ್ಷ ಬಾಬುವಾಲಿ, ಪುರಾತತ್ವ ಸಂರಕ್ಷಣಾ ಅಭಿಯಂತರರಾದ ಪ್ರೇಮಲತಾ ಬಿ.ಎಮ್ ಹಾಗೂ ಅವರ ತಂಡ ಮತ್ತು ದೇವಸ್ಥಾನದ ಆಡಳಿತ ಮಂಡಳಿಯ ಮುಖ್ಯಸ್ಥರಾದ ಚಂದ್ರಕಾಂತ ಶೇಟಕಾರ, ರಾಜಶೇಖರ ಜವಳಿ, ಸೂರ್ಯಕಾಂತ ಶೆಟಕಾರ, ರಾಜು ಮೇಟಕಾರಿ, ಸಂಗಮೇಶ ಖೂಬಾ, ರಾಜಶೇಖರ ಖಡಕೆ, ಸೋಮಶೇಖರ ಸಿರಸಂದ, ಶಿವಪುತ್ರಪ್ಪ ಮೇಟಗೆ, ನಾಗರಾಜ ಕರ್ಪೂರ, ಕೃಷ್ಣಾ ಎಲ್, ಅಮರ ಹಿರೇಮಠ ಉಪಸ್ಥಿತರಿದ್ದರು.