ಪುಟ್ಟ ಬಾಲಕಿಯ ಪ್ರಾಣವನ್ನೇ ತೆಗೆದ ಜೋಕಾಲಿ : ಎಚ್ಚರ!
ಜೋಕಾಲಿ ಆಡಲು ಹೋಗಿ ಪುಟ್ಟ ಬಾಲಕಿಯೋರ್ವಳು ಪ್ರಾಣವನ್ನೇ ಕಳೆದುಕೊಂಡ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರು [ಜೂ.17] : ಜೋಕಾಲಿ ಆಡಲು ಹೋಗಿ ಬಾಲಕಿಯೋರ್ವಳು ಪ್ರಾಣವನ್ನೇ ಕಳೆದುಕೊಂಡಿದ್ದಾಳೆ.
ಉಯ್ಯಾಲೆಗೆ ಕಟ್ಟಿದ್ದ ವೇಲ್ ಕತ್ತಿಗೆ ಸುತ್ತಿಕೊಂಡು ಬಾಲಕಿ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ಹುಕ್ಕುಂದ ಗ್ರಾಮದಲ್ಲಿ ನಡೆದಿದೆ.
ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತಿದ್ದ ನಿಸರ್ಗ ಎಂಬ ಬಾಲಕಿ ಮನೆಯಲ್ಲಿಯೇ ಜೋಕಾಲಿ ಕಟ್ಟಿ ಆಟವಾಡುತ್ತಿದ್ದಳು. ಈ ವೇಳೆ ವೇಲ್ ಸುತ್ತಕೊಂಡು ಉಸಿರು ಕಟ್ಟಿ ಸಾವು ಸಂಭವಿಸಿದೆ.
ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.