ದಸರಾ ಉದ್ಯೋಗ ಮೇಳದಲ್ಲಿ 49 ಜನಕ್ಕೆ ಕೆಲಸ

ಶ್ರೀರಂಗಪಟ್ಟಣ ದಸರಾ ಅಂಗವಾಗಿ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದ ಉದ್ಯೋಕಾಕ್ಷಿಗಳ ಪೈಕಿ 49 ಮಂದಿ ಸಂದರ್ಶನದ ಮೂಲಕ ಉದ್ಯೋಗ ಪಡೆದುಕೊಂಡರು. ಸಂಸದೆ ಸುಮಲತಾ ಅವರು ಉದ್ಯೋಗ ಮೇಳಕ್ಕೆ ಚಾಲನೆ ನೀಡಿದರು.

49 got job in dasara job fair at mandya

ಮಂಡ್ಯ(ಅ.06): ಶ್ರೀರಂಗಪಟ್ಟಣ ದಸರಾ ಅಂಗವಾಗಿ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದ ಉದ್ಯೋಕಾಕ್ಷಿಗಳ ಪೈಕಿ 49 ಮಂದಿ ಸಂದರ್ಶನದ ಮೂಲಕ ಉದ್ಯೋಗ ಪಡೆದುಕೊಂಡರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಜಿಲ್ಲಾಡಳಿತ, ಸ್ಥಳಿಯ ಪುರಸಭೆ ಹಾಗೂ ಕಾರ್ಮಿಕ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಪ್ರತಿಷ್ಟಿತ ಕಂಪೆನಿಗಳಾದ ಯೂರೋ ಕ್ಲಾತಿಂಗ್‌, ಶಾಹಿ ಗ್ರೂಫ್ಸ್‌, ಎಎಚ್‌ಪಿ ಅಪೇರಲ್ಸ್‌, ಗಿರೀಶ್‌ ಎಕ್ಸ್‌ ಸ್ಪೋರ್ಟ್‌, ಚೋಳ ಪೀಪಲ… ಅಂಡ್‌ ಮಾರ್ಕೇಟಿಂಗ್‌, ವಿಕಲಚೇತನರಿಗಾಗಿ ಡಾ.ರೆಡ್ಡಿ ಫೌಂಡೇಷನ್‌, ಅರಸ್‌ ಕಾರ್‌ ಸರ್ವಿಸ್‌ ಸೇರಿದಂತೆ 15ಕ್ಕೂ ಹೆಚ್ಚು ಕಂಪೆನಿಗಳು ಭಾಗಿಯಾದ್ದವು.

ಮಂಡ್ಯ: 'ಮೋದಿ- ಬಿಎಸ್‌ವೈ ಸಂಬಂಧ ಹಳಸಿದೆ'..!

ಮೇಳದಲ್ಲಿ 214 ಪುರುಷರು ಹಾಗೂ 192 ಮಹಿಳೆಯರು ಸೇರಿ ಒಟ್ಟು 406 ಜನರು ಉದ್ಯೋಗ ಅರಸಿ ಆಗಮಿಸಿದ್ದರು. ಇದರಲ್ಲಿ 15 ಮಹಿಳೆಯರು ಹಾಗೂ 34 ಪುರುಷರು ಸೇರಿದಂತೆ ಒಟ್ಟು 49 ಜನ ಸಂದರ್ಶನದ ಮೂಲಕ ನೇರ ಉದ್ಯೋಗಕ್ಕೆ ಆಯ್ಕೆಯಾಗಿದರು. ನಂತರ 49 ಮಂದಿಯನ್ನು ತರಬೇತಿಗೆ ತೆಗೆದುಕೊಳ್ಳಲಾಯಿತು. ಉದ್ಯೋಗ ಮೇಳದಲ್ಲಿ 18 ವರ್ಷ ಹಾಗೂ ಮೇಲ್ಪಟ್ಟಯುವಕ, ಯುವತಿಯರು ಭಾಗವಹಿಸಲು ಅವಕಾಶ ನೀಡಲಾಗಿತ್ತು. ಬೆಂಗಳೂರು, ಮೈಸೂರು ಹಾಗೂ ಮಂಡ್ಯ ಸೇರಿದಂತೆ ರಾಜ್ಯದ ಇತರೆಡೆಯಿಂದ ಪ್ರತಿಭಾವಂತ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮೇಳಕ್ಕೆ ಸಂಸದೆ ಚಾಲನೆ:

ಮೇಳಕ್ಕೆ ಚಾಲನೆ ನೀಡಿದ ಸಂಸದೆ ಸುಮಲತಾ ಮಾತನಾಡಿ, ವಿದ್ಯಾವಂತ ಯುವಕ, ಯುವತಿಯರು ಸರ್ಕಾರಿ ಕೆಲಸಗಳಿಗೆ ಅರ್ಜಿ ಹಾಕಿ ಕಾದು ಕುಳಿತುಕೊಳ್ಳುವ ಬದಲು ಖಾಸಗಿ ಕ್ಷೇತ್ರಗಳಲ್ಲಿ ತಮ್ಮ ಬೆಳವಣಿಗೆ ಕಂಡುಕೊಳ್ಳಬೇಕು. ವಿದ್ಯಾವಂತ ಯುವಜನರು ಉದ್ಯೋಗ ಮೇಳಗಳಲ್ಲಿ ಭಾಗಿಯಾಗಿ ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್‌, ಉಪವಿಭಾಗಾಧಿಕಾರಿ ಶೈಲಜಾ, ಪುರಸಭೆ ಮುಖ್ಯಾಧಿಕಾರಿ ಕೃಷ್ಣ, ಜಿಲ್ಲಾ ಕಾರ್ಮಿಕ, ಉದ್ಯೋಗ ವಿನಿಮಯ ಇಲಾಖೆ ಅಧಿಕಾರಿಗಳು ಹಾಗೂ ಪ್ರಥಮ ದರ್ಜೇ ಕಾಲೇಜು ಪ್ರಾಂಶುಪಾಲರು ಇದ್ದರು.

Latest Videos
Follow Us:
Download App:
  • android
  • ios