ಬೆಂಗಳೂರು :  ಮಗನ ಸ್ಕೂಲ್ ಫೀಜ್‌ ಕಟ್ಟಲು ಡ್ರಾ ಮಾಡಿದ್ದ ಹಣವನ್ನು ಕಳ್ಳರು ಎಗರಿಸಿದ್ದು, ಅಡ್ಮಿಶನ್ ಫೀಜ್ ಕಟ್ಟಲಾಗದೇ ದಂಪತಿ ಕಣ್ಣೀರು ಸುರಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

ಮಂಗಳವಾರ ಮಧ್ಯಾಹ್ನ ‌ಭಟ್ಟರಹಳ್ಳಿ‌ ಉಡುಪಿ ಗಾರ್ಡನ್ ಹೋಟೆಲ್ ಮುಂಭಾಗದಲ್ಲಿ ಬ್ಯಾಂಕ್ ಆಫ್ ಇಂಡಿಯಾದಿಂದ ಡ್ರಾ ಮಾಡಿದ 48 ಸಾವಿರ ಕಳವು ಮಾಡಿದ್ದಾರೆ. 

ಮಗನ ಸ್ಕೂಲ್ ಅಡ್ಮಿಶನ್ ಫೀಜ್, ಬುಕ್ಸ್, ಗಾಗಿ ಹಣ ಡ್ರಾ ಮಾಡಿದ ದಂಪತಿ ಊಟ ಮಾಡಲು ತಮ್ಮ ಆಕ್ಟೀವಾ ಬೈಕ್ ನ ಡಿಕ್ಕಿಯಲ್ಲಿ ಹಣವನ್ನು ಇಟ್ಟು ಹೋಟೆಲ್ ಗೆ ತೆರಳಿದ್ದರು.  ಭಟ್ಟರಹಳ್ಳಿ‌ ಮುಖ್ಯರಸ್ತೆಯ ಉಡುಪಿ ಗಾರ್ಡನ್ ಹೋಟೆಲ್ ಗೆ ತೆರಳಿದ್ದು, ಈ ವೇಳೆ ಹೊರಗೆ ಕಳ್ಳರು ಬೈಕ್ ನಲ್ಲಿದ್ದ ಹಣವನ್ನು ಎಗರಿಸಿದ್ದಾರೆ.

ಹಣವನ್ನು ಬ್ಯಾಂಕಿಂದ ಡ್ರಾ ಮಾಡಿದ ಸಮಯದಿಂದಲೂ ಕಳ್ಳರು ದಂಪತಿಯನ್ನು ಫಾಲೋ ಮಾಡಿದ್ದು, ಕಳ್ಳರ ಸಂಪೂರ್ಣ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.  ಸುಮಾರು 2 ಕಿಲೋ‌ಮೀಟರ್ ಫಾಲೋ ಮಾಡಿ ಕಳ್ಳರು ಕೈ ಚಳಕ ತೋರಿದ್ದಾರೆ.