Asianet Suvarna News Asianet Suvarna News

ಆಲಮಟ್ಟಿ ಡ್ಯಾಂ: 45000 ಕ್ಯುಸೆಕ್‌ ಹೊರಹರಿವು, ನದಿ ತೀರಕ್ಕೆ ಹೋಗದಂತೆ ಎಚ್ಚರಿಕೆ

ಆಲಮಟ್ಟಿ ಜಲಾಶಯದ ಬಲಭಾಗದ ಕೆಪಿಸಿಎಲ್‌ ಮೂಲಕ 45000 ಕ್ಯುಸೆಕ್‌ ನೀರು| ಜಲಾಶಯದ ಎಲ್ಲ ಘಟಕಗಳು ಕಾರ್ಯಾರಂಭ| 255 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ| 519.60 ಮೀ ಗರಿಷ್ಠ ಎತ್ತರದ ಜಲಾಶಯದಲ್ಲಿ 517.58 ಮೀ ವರೆಗೆ ನೀರು ಸಂಗ್ರಹ| 

45000 cusec outflows in Almatti Dam in Vijayapura district
Author
Bengaluru, First Published Jul 13, 2020, 2:00 PM IST

ಆಲಮಟ್ಟಿ(ಜು.13): ವಿಜಯಪುರ ಜಿಲ್ಲೆಯ ನಿಡ​ಗುಂದಿ ತಾಲೂ​ಕಿನ ಆಲಮಟ್ಟಿ ಜಲಾಶಯದ ಹೊರಹರಿವು ಭಾನುವಾರ ಬೆಳಗ್ಗೆಯಿಂದ 45000 ಕ್ಯುಸೆ​ಕ್‌ಗೆ ಹೆಚ್ಚಿಸಲಾಗಿದ್ದು, ಜಲಾಶಯದ ಮುಂಭಾಗದ ನದಿ ತೀರದ ಗ್ರಾಮಗಳಿಗೆ ಆಯಾ ತಾಲೂಕಾಡ​ಳಿತ ಮೂಲಕ ನದಿ ತೀರಕ್ಕೆ ಹೋಗದಂತೆ ಎಚ್ಚರಿಕೆ ನೀಡಲಾಗಿದೆ. ಮಹಾರಾಷ್ಟ್ರದಲ್ಲಿ ಮಳೆಯಬ್ಬರ ತಗ್ಗಿದ್ದು ಒಳಹರಿವು ಕೊಂಚ ಕಡಿಮೆಯಾಗಿದೆ. ಭಾನುವಾರ 69,868 ಕ್ಯುಸೆಕ್‌ (6ಟಿಎಂಸಿ ಅಡಿ) ನೀರು ಹರಿದು ಬಂದಿದೆ.

ಜಲಾಶಯದ ಹೊರಹರಿವು ಸ್ಥಗಿತಗೊಳಿಸಿದ್ದರೆ ಜಲಾಶಯ ಬಹುತೇಕ ಭರ್ತಿಯಾಗಿರುತ್ತಿತ್ತು. ಆದರೆ ಜಲಾಶಯದ ಪ್ರವಾಹ ನಿಯಂತ್ರಣಕ್ಕಾಗಿ ಜಲಾಶಯವನ್ನು ಭರ್ತಿ ಮಾಡದೇ ಸುರಕ್ಷಿತ ಅಂತರ ಕಾಪಾಡಲಾಗುತ್ತದೆ. 519.60 ಮೀ ಗರಿಷ್ಠ ಎತ್ತರದ ಜಲಾಶಯದಲ್ಲಿ 517.58 ಮೀ ವರೆಗೆ ನೀರು ಸಂಗ್ರಹವಾಗಿದೆ. ಜಲಾಶಯದಲ್ಲಿ ಸದ್ಯ 92 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.

ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಳ: ಶೀಘ್ರ ಅಧಿಸೂಚನೆ

ಆಲಮಟ್ಟಿ ಜಲಾಶಯದ ಬಲಭಾಗದ ಕೆಪಿಸಿಎಲ್‌ ಮೂಲಕ 45000 ಕ್ಯುಸೆಕ್‌ ನೀರು ಹರಿಸುತ್ತಿರುವ ಕಾರಣ ಜಲಾಶಯದ ಎಲ್ಲ ಘಟಕಗಳು ಕಾರ್ಯಾರಂಭ ಮಾಡಿದ್ದು 255 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಆಗು​ತ್ತಿದೆ ಎಂದು ಕೆಪಿಸಿಎಲ್‌ ಮೂಲಗಳು ತಿಳಿಸಿವೆ.

Follow Us:
Download App:
  • android
  • ios