ದಕ್ಷಿಣ ಕನ್ನಡದಲ್ಲಿ 44 ಮಂದಿಗೆ ಕೊರೋನಾ, 17 ಡಿಸ್ಚಾರ್ಜ್‌

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕು ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. ಮಂಗಳವಾರ ಮತ್ತೆ 44 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಜಿಲ್ಲೆಯಲ್ಲಿ ಇದುವರೆಗಿನ ಒಟ್ಟು ಸೋಂಕಿತರ ಸಂಖ್ಯೆ 749ಕ್ಕೆ ಏರಿಕೆಯಾಗಿದೆ. 17 ಮಂದಿ ಗುಣಮುಖರಾಗಿದ್ದಾರೆ.

44 found covid19 positive in dakshina kannada on June 30th

ಮಂಗಳೂರು(ಜು.01): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕು ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. ಮಂಗಳವಾರ ಮತ್ತೆ 44 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಜಿಲ್ಲೆಯಲ್ಲಿ ಇದುವರೆಗಿನ ಒಟ್ಟು ಸೋಂಕಿತರ ಸಂಖ್ಯೆ 749ಕ್ಕೆ ಏರಿಕೆಯಾಗಿದೆ. 17 ಮಂದಿ ಗುಣಮುಖರಾಗಿದ್ದಾರೆ.

ಹೊಸದಾಗಿ ಸೋಂಕು ತಗುಲಿದವರ ಪೈಕಿ ಸೌದಿಯಿಂದ ಇಬ್ಬರು, ಅಂತರ್‌ ಜಿಲ್ಲೆ ಪ್ರಯಾಣ ಇತಿಹಾಸ ಇರುವ ಮೂವರು, ಬೇರೆ ರಾಜ್ಯದಿಂದ ಬಂದ ಒಬ್ಬರು, ಶೀತ, ಜ್ವರ ಲಕ್ಷಣದ ಒಂಭತ್ತು, ತೀವ್ರ ಉಸಿರಾಟ ಸಮಸ್ಯೆಯ 3, ಮೂಲವೇ ಪತ್ತೆಯಾಗದ ಐದು, ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 21 ಮಂದಿಗೆ ಕೊರೋನಾ ಬಂದಿದೆ. ಎಲ್ಲ ಸೋಂಕಿತರನ್ನು ವೆನ್ಲಾಕ್‌ ಕೊವಿಡ್‌ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ತಿಳಿಸಿದ್ದಾರೆ.

ಸೋಂಕಿತರ ಶವ ಗುಂಡಿಗೆಸೆದರು: ಒಂದೇ ಗುಂಡಿಗೆ 8 ಶವ!

8 ವೃದ್ಧರಿಗೆ ಪಾಸಿಟಿವ್‌: ಈ 44 ಮಂದಿಯಲ್ಲಿ ಎಂಟು ವೃದ್ಧರು ಸೇರಿದ್ದಾರೆ. ಈ ಪೈಕಿ ಇಬ್ಬರು (67, 65 ವರ್ಷ) ಮಹಿಳೆಯರಿದ್ದರೆ ಉಳಿದವರೆಲ್ಲ ಪುರುಷರು. 77, 72, 67, 67, 66, 63 ವರ್ಷದ ಪುರುಷರಲ್ಲಿ ಸೋಂಕು ದೃಢಪಟ್ಟಿದೆ. ಹಿರಿಯ ನಾಗರಿಕರ ಸಂಖ್ಯೆ ಏರುತ್ತಿರುವುದು ಆತಂಕ ಸೃಷ್ಟಿಸಿದೆ.

17 ಮಂದಿ ಡಿಸ್ಚಾರ್ಜ್: ಸಮಾಧಾನಕರ ಬೆಳವಣಿಗೆಯಲ್ಲಿ ಮಂಗಳವಾರ 64 ವರ್ಷದ ವೃದ್ಧ ಸೇರಿದಂತೆ 17 ಮಂದಿ ಕೋವಿಡ್‌ ಆಸ್ಪತ್ರೆಯಿಂದ ಡಿಸ್ಚಾಜ್‌ರ್‍ ಆಗಿ ಮನೆಗೆ ಮರಳಿದ್ದಾರೆ. ಇದರೊಂದಿಗೆ 443 ಮಂದಿ ಇದುವರೆಗೆ ಸೋಂಕು ಮುಕ್ತರಾದಂತಾಗಿದೆ.

ಧಾರವಾಡ: ಒಂದು ದಿನದ ಮಗುವಿಗೆ ಕೋವಿಡ್‌, ಮತ್ತೆ 17 ಕೊರೋನಾ ಪಾಸಿಟಿವ್‌

ಈಗ ಚಿಕಿತ್ಸೆಯಲ್ಲಿರುವ 292 ಮಂದಿಯಲ್ಲಿ ಬಹುತೇಕರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಆದರೆ 49 ವರ್ಷದ ವ್ಯಕ್ತಿಯು ಡಯಾಬಿಟಿಸ್‌ಮತ್ತು ನ್ಯುಮೋನಿಯದಿಂದ ಬಳಲುತ್ತಿದ್ದು, ಇವರನ್ನು ಐಸಿಯುನಲ್ಲಿ ಎಚ್‌ಎಫ್‌ಎನ್‌ಸಿ ಮೂಲಕ ಆಮ್ಲಜನಕ ನೀಡಲಾಗುತ್ತಿದೆ. ಲಿವರ್‌ ಕಾಯಿಲೆ, ಡಯಾಬಿಟಿಸ್‌, ಹೃದಯರೋಗ ಹಾಗೂ ನ್ಯುಮೋನಿಯದಿಂದ ಬಳಲುತ್ತಿರುವ 57 ವರ್ಷದ ಮಹಿಳೆ ಐಸಿಯುನಲ್ಲಿದ್ದಾರೆ. ಡಯಾಬಿಟಿಸ್‌, ಅಧಿಕ ರಕ್ತದೊತ್ತಡ, ಪಾರ್ಕಿನ್‌ಸನ್‌ ಕಾಯಿಲೆ ಮತ್ತು ನ್ಯುಮೋನಿಯದಿಂದ ಬಳಲುತ್ತಿರುವ 78 ವರ್ಷದ ವೃದ್ಧ, ನ್ಯುಮೋನಿಯದಿಂದ ಬಳಲುತ್ತಿರುವ 39 ವರ್ಷದ ವ್ಯಕ್ತಿಗೂ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಗಳೂರು: ಅಡ್ರೆಸ್ ಕೇಳುವ ನೆಪದದಲ್ಲಿ ಪತ್ರಕರ್ತೆ ಎದುರೇ ಹಸ್ತಮೈಥುನ ಮಾಡ್ಕೊಂಡ

ಮಂಗಳವಾರ ಒಟ್ಟು 148 ವರದಿಗಳು ಪ್ರಯೋಗಾಲಯದಿಂದ ಬಂದಿದ್ದು, ಅವುಗಳಲ್ಲಿ 44 ಪಾಸಿಟಿವ್‌ ಆಗಿದ್ದರೆ, ಉಳಿದೆಲ್ಲವೂ ನೆಗೆಟಿವ್‌ ಆಗಿವೆ. ಹೊಸದಾಗಿ 316 ಮಂದಿಯ ಸ್ಯಾಂಪಲ್‌ನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಒಟ್ಟು 325 ಮಂದಿಯ ವರದಿ ಇನ್ನಷ್ಟೇ ಬರಲು ಬಾಕಿಯಿದೆ.

Latest Videos
Follow Us:
Download App:
  • android
  • ios