ಸದ್ಯ ನೇರ ವಿಮಾನ ಆರಂಭವಾಗಿರೋದ್ರಿಂದ ಕೇವಲ ಎರಡೇ ತಾಸಿನಲ್ಲಿ ಕಲಬುರಗಿಯಿಂದ ದೆಹಲಿಗೆ ತಲುಪಬಹುದು| ಸ್ಟಾರ್ ಏರ್ ಸಂಸ್ಥೆಯ ವಿಮಾನ ಮಂಗಳವಾರ ಬುಧವಾರ ಮತ್ತು ಶನಿವಾರ ಮೂರುದಿನ ಹಾರಾಟ ನಡೆಸಲಿದೆ| ಒಂದು ವರ್ಷದಲ್ಲಿ ಒಟ್ಟು 43 ಸಾವಿರ ಜನ ಪ್ರಯಾಣಸಿದ್ದು ವಿಶೇಷ|
ಕಲಬುರಗಿ(ನ.23): ಕಲಬುರಗಿಯಿಂದ ವಿಮಾನಯಾನ ಆರಂಭಗೊಂಡು ನ.22ಕ್ಕೆ ಒಂದು ವರ್ಷ ತುಂಬಿದೆ. ನ.21ರವರೆಗೆ ಕಲಬುರಗಿಯಿಂದ ಒಟ್ಟು 43,797 ಜನ ಪ್ರಯಾಣಿಕರು ಪ್ರಯಾಣಿಸಿದ್ದಾರೆ.
ವಿಮಾನ ನಿಲ್ದಾಣ ಆಗಬೇಕು ನಾವೂ ಆಗಸದಲ್ಲಿ ಹಾರಾಡಬೇಕೆಂದು ಇಲ್ಲಿಯ ಜನರು ದಶಕಗಳಿಂದ ಕನಸು ಕಂಡಿದ್ದರು. ಅಂತಹ ಬಣ್ಣಬಣ್ಣದ ಕನಸು ನನಸಾಗಿ ಇದೀಗ ಭರ್ತಿ ಒಂದು ವರ್ಷ. ಇದೇ ಏರ್ಪೋರ್ಟ್‌ಗಾಗಿ ಜನರು, ಸಂಘಟನೆಗಳು ಅದೆಷ್ಟೋ ಹೋರಾಟಗಳನ್ನ ಮಾಡಿದ್ದರು. ಅದೆಲ್ಲದರ ಫಲವಾಗಿ ಒಂದು ವರ್ಷದ ಹಿಂದೆ ಸೇಡಂ ರಸ್ತೆಯ ಶ್ರೀನಿವಾಸ ಸರಡಗಿ ಗ್ರಾಮದ ಬಳಿ ಏರ್‌ಪೋರ್ಟ್ ಆರಂಭವಾಗಿತ್ತು. ಸಿಎಂ ಬಿ.ಎಸ್. ಯಡಿಯೂರಪ್ಪ ಲೋಕಾರ್ಪಣೆ ಮಾಡಿ, ಬೆಂಗಳೂರು ಕಡೆ ವಿಮಾನ ಹಾರಾಟ ಶುರುಮಾಡಿಸಿದ್ದರು. ಇದೀಗ ಒಂದು ವರ್ಷದ ಸವಿನೆನಪಿಗಾಗಿ ಸರ್ಕಾರ ಇದೀಗ ದೂರದ ದೆಹಲಿಗೆ ಹೋಗಲು ನೇರ ವಿಮಾನದ ವ್ಯವಸ್ಥೆ ಮಾಡಿದೆ.
ಜೂ.13ರಿಂದ ಕಲಬುರಗಿ-ಮುಂಬೈ ವಿಮಾನ ಸೇವೆ ಆರಂಭ
ಹೌದು ಬರೋಬ್ಬರಿ 1800 ಕಿಲೋಮೀಟರ್ ದೂರವಿರುವ ದೆಹಲಿಗೆ ರೈಲಿನಲ್ಲಿ ಪ್ರಯಾಣಿಸಲು ಎರಡು ದಿನ ಬೇಕಾಗಿತ್ತು. ಆದರೆ ಸದ್ಯ ನೇರ ವಿಮಾನ ಆರಂಭವಾಗಿರೋದ್ರಿಂದ ಕೇವಲ ಎರಡೇ ತಾಸಿನಲ್ಲಿ ರಾಷ್ಟ್ರ ರಾಜಧಾನಿಗೆ ಕಾಲಿಡಬಹುದು. ಸ್ಟಾರ್ ಏರ್ ಸಂಸ್ಥೆಯ ವಿಮಾನ ಮಂಗಳವಾರ ಬುಧವಾರ ಮತ್ತು ಶನಿವಾರ ಮೂರುದಿನ ಹಾರಾಟ ನಡೆಸಲಿದೆ ವಿಶೇಷ ಅಂದರೆ ವಾರದ ಹಿಂದಷ್ಟೇ ಮುಂಬೈಗೆ ವಿಮಾನಯಾನ ಶುರುವಾಗಿತ್ತು.. ಹೀಗೆ ಒಂದು ವರ್ಷದಲ್ಲಿ ಒಟ್ಟು 43 ಸಾವಿರ ಜನ ಪ್ರಯಾಣಸಿದ್ದು ವಿಶೇಷ.. ಪ್ರಸ್ತುತ ಕಲಬುರಗಿಯಿಂದ ಬೆಂಗಳೂರಿಗೆ ಎರಡು ಹಾಗೂ ಕಲಬುರಗಿಯಿಂದ ದೆಹಲಿಗೆ ಹಿಂಡನ್‌ಗೆ ವಾರಕ್ಕೆ ಮೂರು ದಿನ ವಿಮಾನ ಸೇವೆ ಲಭ್ಯವಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Nov 23, 2020, 3:35 PM IST