ಮಂಡ್ಯ(ಸೆ.05): ಈಗಾಗಲೇ ಜಿಲ್ಲೆಯ ಕೃಷ್ಣ ರಾಜಸಾಗರ ಆಣೆಕಟ್ಟೆಭರ್ತಿಯಾದ ನಂತರವೂ ಭಾರಿ ಪ್ರಮಾಣದ ನೀರು ಆಣೆಕಟ್ಟೆಗೆ ಗುರುವಾರ ಹರಿದು ಬಂದಿದೆ. ಹೀಗಾಗಿ ಆಣೆಕಟ್ಟೆಹೆಚ್ಚುವರಿ ನೀರನ್ನು ಮತ್ತೆ ಕಾವೇರಿ ನದಿಗೆ ಬಿಡಲಾಗಿದೆ.

KRS ಜಲಾಶಯದಿಂದ ಕಾವೇರಿ ನದಿ ಮೂಲಕ ಸುಮಾರು 43 ಸಾವಿರ ಕ್ಯುಸೆಕ್‌ ಅಧಿಕ ನೀರನ್ನ ತಮಿಳುನಾಡಿಗೆ ಬಿಡಲಾಗುತ್ತಿದೆ. ಈ ಹೊರ ಬಿಟ್ಟನೀರಿನಿಂದಾಗಿ ತಾಲೂಕಿನ ರಂಗನತಿಟ್ಟು ಪಕ್ಷಿಧಾಮ ಪ್ರವಾಸಿ ತಾಣದ ದೋಣಿ ವಿಹಾರವನ್ನು ಗುರುವಾರ ಮತ್ತೆ ಸ್ಥಗಿತಗೊಳಿಸಲಾಗಿದೆ ಎಂದು ಉಪ ವಲಯಾರಣ್ಯಾಧಿಕಾರಿ ಪುಟ್ಟಮಾದೇಗೌಡ ಕನ್ನಡ ಪ್ರಭ ಕ್ಕೆ ತಿಳಿಸಿದರು.

ಮಂಡ್ಯ: ಮೋದಿ, ಶಾ ವಿರುದ್ಧ ಹೆಚ್ಚಿದ ಕಿಚ್ಚು; ಭಾವಚಿತ್ರ ಸುಟ್ಟು ಆಕ್ರೋಶ

ತಮಿಳುನಾಡಿಗೆ ಮತ್ತೆ ನೀರು:

ಕಳೆದ 15 ದಿನಗಳಿಂದ ಕಾವೇರಿ ಕೊಳ್ಳದ ಪ್ರದೇಶಗಳಲ್ಲಿ ಕಡಿಮೆಯಾಗಿದ್ದ ಮಳೆ ಪ್ರಮಾಣ ಬುಧವಾರದಿಂದ ಮತ್ತೆ ಹೆಚ್ಚಾಗಿದೆ. ಮಲೆನಾಡು ಪ್ರದೇಶ ಹಾಗೂ ಕೊಡಗಿನ ಬಹುತೇಕ ಭಾಗದಲ್ಲಿ ಹೆಚ್ಚು ಮಳೆಯಾದ ಕಾರಣದಿಂದ ಕಾವೇರಿ ನದಿಗೆ ಹೆಚ್ಚಿನ ಒಳಹರಿವು ಬರುತ್ತಿದೆ. ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದೆ. ಅಣೆಕಟ್ಟೆಭದ್ರತೆ ದೃಷ್ಟಿಯಿಂದ ನೀರನ್ನು ಕಾವೇರಿ ನದಿ ಮೂಲಕ 43 ಸಾವಿರ ಕ್ಯುಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ.

ದೋಣಿ ವಿಹಾರ ಸ್ಥಗಿತ:

ಪ್ರವಾಸಿಗರ ಹಿತದೃಷ್ಠಿಯಿಂದ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಸೂಚನೆ ಮೇರೆಗೆ ರಂಗನತಿಟ್ಟಪಕ್ಷಿಧಾಮದಲ್ಲಿನ ದೋಣಿವಿಹಾರ ಸ್ಥಗಿತಗೊಳಿಸಿದ್ದಾರೆ. ಅಲ್ಲದೇ ಕಾವೇರಿ ನದಿ ಪಾತ್ರದ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದ್ದಾರೆ.

ಮದುವೆ ನೆನಪಿಗಾಗಿ ಗಿಡ ನೆಟ್ಟ ನವದಂಪತಿ

ಪ್ರಸ್ತುತ ಜಲಾಶಯದಲ್ಲಿ ಗರಿಷ್ಟಮಟ್ಟ124.80 ಅಡಿಗಳಷ್ಟುನೀರು ಸಂಗ್ರಹವಿದೆ. ಜಲಾಶಯಕ್ಕೆ 28.359 ಕ್ಯುಸೆಕ್‌ ಹರಿದು ಬರುತ್ತಿದೆ. 43.597 ಕ್ಯುಸೆಕ್‌ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತಿದೆ. ಜಲಾಶಯಕ್ಕೆ ಹೆಚ್ಚಿನ ಒಳ ಹರಿವು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಇನ್ನಷ್ಟುನೀರನ್ನು ಹೊರಬಿಡಲಾಗುವುದು. ಒಳ ಹರಿವಿನ ಪ್ರಮಾಣ ನೋಡಿಕೊಂಡು ಮುಂದಿನ ಕ್ರಮ ಜರುಗಿಸಲಾಗುವುದು ಎಂದು ನೀರಾವರಿ ಅಧಿಕಾರಿಗಳು ತಿಳಿಸಿದ್ದಾರೆ.