Asianet Suvarna News Asianet Suvarna News

20 ಸಾವಿರ ಮೌಲ್ಯದ ಬೈಕ್‌ಗೆ 42 ಸಾವಿರ ದಂಡ: ವಾಹನವನ್ನೇ ಪೊಲೀಸರಿಗೆ ಬಿಟ್ಟು ಹೋದ ಭೂಪ..!

77 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕೆ ದಂಡ| ವಾಹನ ಬಿಟ್ಟು ಹೋದ ಸವಾರ| ಸವಾರನಿಗೆ ದಂಡದ ರಶೀದಿ ನೀಡಿ, ವಾಹನ ಜಪ್ತಿ ಮಾಡಿದ ಪೊಲೀಸರು| ಬೈಕ್‌ ಮೌಲ್ಯ 20 ಸಾವಿರದಿಂದ 30 ಸಾವಿರ ಇರಬಹುದು, ಅದಕ್ಕಿಂತಲೂ ದಂಡವೇ ಹೆಚ್ಚಿದೆ| 

42500 Fine to Person for Violating Traffic Rules in Bengaluru grg
Author
Bengaluru, First Published Oct 31, 2020, 8:46 AM IST

ಬೆಂಗಳೂರು(ಅ.31): ಸಂಚಾರ ನಿಯಮ ಉಲ್ಲಂಘಿಸಿದ್ದ ದ್ವಿಚಕ್ರ ವಾಹನ ಸವಾರನೊಬ್ಬ ದಂಡದ ಮೊತ್ತ 42,500 ಹಣ ಪಾವತಿಸಲಾಗದೆ, ದ್ವಿಚಕ್ರ ವಾಹನವನ್ನೇ ಪೊಲೀಸರಿಗೆ ಬಿಟ್ಟು ಹೋಗಿದ್ದಾನೆ. ಸವಾರ ಅರುಣ್‌ ಕುಮಾರ್‌ ಎಂಬಾತ ಸಂಚಾರ ನಿಯಮ ಉಲ್ಲಂಘಿಸಿ ವಾಹನ ಬಿಟ್ಟು ಹೋಗಿರುವ ಭೂಪ.

ಅರುಣ್‌ ದ್ವಿಚಕ್ರ ವಾಹನದಿಂದ 77 ಬಾರಿ ಸಂಚಾರ ನಿಯಮ ಉಲ್ಲಂಘನೆ ಆಗಿತ್ತು. ಹೀಗಾಗಿ, ದಂಡ ವಿಧಿಸಿ ರಶೀದಿ ನೀಡಲಾಗಿದೆ. ವಾಹನ ಜಪ್ತಿ ಮಾಡಲಾಗಿದೆ. ವಾಹನ ಬಿಡಿಸಿಕೊಂಡು ಹೋಗಲು ಇದುವರೆಗೂ ಆತ ಠಾಣೆಗೆ ಬಂದಿಲ್ಲ ಎಂದು ಮಡಿವಾಳ ಠಾಣೆ ಸಂಚಾರ ಪೊಲೀಸರು ತಿಳಿಸಿದ್ದಾರೆ. 

ಸಂಚಾರ ನಿಯಮ ಉಲ್ಲಂಘನೆ: 6 ದಿನದಲ್ಲಿ 2 ಕೋಟಿ ದಂಡ

ಮಡಿವಾಳ ಸಂಚಾರ ಪಿಎಸ್‌ಐ ಶಿವರಾಜ್‌ಕುಮಾರ್‌ ಅಂಗಡಿ ಹಾಗೂ ಸಿಬ್ಬಂದಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳನ್ನು ತಡೆದು ದಂಡ ವಿಧಿಸುತ್ತಿದ್ದರು. ಮಡಿವಾಳ ವೃತ್ತದಲ್ಲಿ ಬಂದ ಅರುಣ್‌ ಕುಮಾರ್‌ ಅವರ ದ್ವಿಚಕ್ರ ವಾಹನ ತಡೆದು ತಪಾಸಣೆ ನಡೆಸಿದರು. ಅರುಣ್‌ ಕುಮಾರ್‌ ಇದುವರೆಗೂ 77 ಬಾರಿ ನಿಯಮ ಉಲ್ಲಂಘಿಸಿದ್ದು ತಪಾಸಣೆ ವೇಳೆ ಬೆಳಕಿಗೆ ಬಂದಿದೆ. ಸ್ಥಳದಲ್ಲಿಯೇ ಸವಾರನಿಗೆ ದಂಡದ ರಶೀದಿ ನೀಡಿ, ವಾಹನ ಜಪ್ತಿ ಮಾಡಲಾಗಿದೆ.

ಸವಾರ ಸೆಕೆಂಡ್‌ ಹ್ಯಾಂಡ್‌ನಲ್ಲಿ ದ್ವಿಚಕ್ರ ವಾಹನ ಖರೀದಿಸಿದ್ದ. ಅದರ ಮೌಲ್ಯವೇ ಸದ್ಯ 20 ಸಾವಿರದಿಂದ 30 ಸಾವಿರ ಇರಬಹುದು. ಅದಕ್ಕಿಂತಲೂ ದಂಡವೇ ಹೆಚ್ಚಿದೆ. ಹೀಗಾಗಿಯೇ ದಂಡದ ರಶೀದಿ ತೆಗೆದುಕೊಂಡು ಹೋದ ಸವಾರ, ವಾಪಸು ಬಂದಿಲ್ಲ. ಆತ ನ್ಯಾಯಾಲಯದಲ್ಲಿ ದಂಡ ಪಾವತಿಸಿ ವಾಹನ ಬಿಡಿಸಿಕೊಂಡು ಹೋಗಬೇಕು ಎಂದು ಪೊಲೀಸರು ಹೇಳಿದ್ದಾರೆ.
 

Follow Us:
Download App:
  • android
  • ios