ಬೆಂಗಳೂರು(ಅ.04): ಸಂಚಾರ ನಿಯಮ ನಿಯಮ ಉಲ್ಲಂಘಿಸುವವರ ವಿರುದ್ಧ ಪೊಲೀಸರ ಕಾರ್ಯಾಚರಣೆ ಮುಂದುವರೆದಿದ್ದು, ಮತ್ತೆ ಆರು ದಿನಗಳಲ್ಲೇ 2.35 ಕೋಟಿ ದಂಡ ಸಂಗ್ರಹಿಸಿದ್ದಾರೆ.

ನಗರ ವ್ಯಾಪ್ತಿ ಸೆ.20 ರಿಂದ 26 ವರೆಗೆ ಈ ವಿಶೇಷ ಕಾರ್ಯಾಚರಣೆ ನಡೆದಿದೆ. ಕಾನೂನು ಉಲ್ಲಂಘನೆ ಆರೋಪದ ಮೇರೆಗೆ 55 ಸಾವಿರ ಪ್ರಕರಣಗಳನ್ನು ದಾಖಲಾಗಿದ್ದು, 2, 35,33,100 ದಂಡ ಸಂಗ್ರಹವಾಗಿದೆ ಎಂದು ಜಂಟಿ ಆಯುಕ್ತ (ಸಂಚಾರ) ಡಾ.ಬಿ.ಆರ್‌.ರವಿಕಾಂತೇಗೌಡ ಹೇಳಿದ್ದಾರೆ.

ಕೊರೋನಾ ಸೋಂಕು ಹರಡುವಿಕೆ ಕಾರಣಕ್ಕೆ ವೈಯಕ್ತಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ರಸ್ತೆಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ಪ್ರಕರಣ ದಾಖಲಿಸುವ ಕಾರ್ಯಾಚರಣೆಗೆ ಪೊಲೀಸರು ತಡೆ ಹಿಡಿದಿದ್ದರು. ಕಳೆದ ಹದಿನೈದು ದಿನಗಳಿಂದ ಮತ್ತೆ ಆಪರೇಷನ್‌ಗೆ ಚಾಲನೆ ನೀಡಿರುವ ಪೊಲೀಸರು, ಸಂಚಾರ ಶಿಸ್ತು ಮೀರಿದವರೆಗೆ ರಸ್ತೆಯಲ್ಲೇ ದಂಡಾಸ್ತ್ರ ಪ್ರಯೋಗಿಸುತ್ತಿದ್ದಾರೆ.

ಕೊರೋನಾ ನಡುವೆ ನಿಯಮ ಉಲ್ಲಂಘನೆ: 5 ಲಕ್ಷ ಸಂಚಾರಿ ಕೇಸ್‌, 96 ಕೋಟಿ ದಂಡ!

ಚಾಲನೆ ವೇಳೆ ಮೊಬೈಲ್‌ ಸಂಭಾಷಣೆ, ಸಿಗ್ನಲ್‌ ಜಂಪ್‌, ಹೆಲ್ಮಟ್‌ ರಹಿತ ವಾಹನ ಚಾಲನೆ, ಅತಿವೇಗ ಚಾಲನೆ, ಪಾನಮತ್ತ ಚಾಲನೆ ಸೇರಿದಂತೆ ಸಂಚಾರ ನಿಯಮ ಉಲ್ಲಂಘನೆ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸುತ್ತಿದ್ದಾರೆ.

ಪ್ರಮುಖ ಸಂಚಾರ ನಿಯಮ ಉಲ್ಲಂಘನೆ ಹೀಗಿವೆ

ಕೃತ್ಯ ಪ್ರಕರಣ ದಂಡ

ಅಪಾಯಕಾರಿ ವಾಹನ ಚಾಲನೆ 108 66,600
ನೋ ಪಾರ್ಕಿಂಗ್‌ 2398 7,08,200
ಸಿಗ್ನಲ್‌ ಜಂಪ್‌ 5967 21,39,900
ನಂಬರ್‌ ಪ್ಲೇಟ್‌ 1662 6,01,800
ಸೀಟ್‌ ಬ್ಲೇಟ್‌ ಹಾಕದ 2228 10,33,800
ಚಾಲನೆ ವೇಳೆ ಮೊಬೈಲ್‌ ಬಳಕೆ 1620 1,10,200
ಹೆಲ್ಮಟ್‌ ಇಲ್ಲದ ಚಾಲನೆ 18319 68,39,600