Asianet Suvarna News Asianet Suvarna News

ಬೆಂಗಳೂರಲ್ಲಿ ಹೊಸ ದಾಖಲೆ ಬರೆದ ಕೊರೋನಾ..!

ಭಾನುವಾರ 4,217 ಹೊಸ ಕೊರೋನಾ ಕೇಸ್‌| ಸತತ 4ನೇ ದಿನವೂ 4 ಸಾವಿರ ಪ್ರಕರಣ ಪತ್ತೆ| ದೇಶದಲ್ಲಿ ಸೋಂಕು ಪ್ರಕರಣದಲ್ಲಿ ಬೆಂಗಳೂರು ಮೂರನೇ ಸ್ಥಾನದಲ್ಲಿದೆ| ಕೊರೋನಾ ಸೋಂಕಿನ ಸಕ್ರಿಯ ಪ್ರಕರಣದಲ್ಲಿ ದೆಹಲಿ, ಮುಂಬೈ ನಗರಗಳಿಗಿಂತ ಹೆಚ್ಚಿನ ಪ್ರಕರಣಗಳು ಬೆಂಗಳೂರಿನಲ್ಲಿವೆ| 

4217 New Coronavirus Cases in Bengalurugrg
Author
Bengaluru, First Published Sep 28, 2020, 7:44 AM IST

ಬೆಂಗಳೂರು(ಸೆ.28): ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ದಾಖಲೆಯ 4,217 ಹೊಸ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 2.20 ಲಕ್ಷಕ್ಕೆ ತಲುಪಿದೆ.

ಬೆಂಗಳೂರಿನಲ್ಲಿ ಸತತ ನಾಲ್ಕು ದಿನದಿಂದ ದಿನಕ್ಕೆ ನಾಲ್ಕು ಸಾವಿರಕ್ಕೂ ಅಧಿಕ ಕೊರೋನಾ ಸೋಂಕು ಪತ್ತೆಯಾಗುತ್ತಿವೆ. ಕಳೆದ ಗುರುವಾರ 4,192 ಪ್ರಕರಣ ಪತ್ತೆ ಆಗಿದ್ದು ಈವರೆಗಿನ ದಾಖಲೆಯಾಗಿತ್ತು. ಈವರೆಗೆ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 2,20,847ಕ್ಕೆ ಏರಿಕೆಯಾಗಿದೆ. ಒಟ್ಟು 44,274 ಸಕ್ರಿಯ ಪ್ರಕರಣಗಳಿವೆ. ಇದೇ ದಿನ 3,306 ಮಂದಿ ಗುಣಮುಖರಾಗಿದ್ದು, ಈವರೆಗೆ 1,73,736 ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 15 ಮಂದಿ ಸಾವನ್ನಪ್ಪಿದ್ದಾರೆ. ಈವರೆಗೆ 2,836 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

4 ದಿನದಲ್ಲಿ 16 ಸಾವಿರ ಸೋಂಕು:

ಕಳೆದ ಗುರುವಾರ 4,192 ಪ್ರಕರಣ, ಶುಕ್ರವಾರ 4,080, ಶನಿವಾರ 4,083 ಹಾಗೂ ಭಾನುವಾರ 4,217 ಒಟ್ಟು ನಾಲ್ಕು ದಿನದಲ್ಲಿ 16,572 ಪ್ರಕರಣ ಪತ್ತೆಯಾಗಿವೆ. ಆದರೆ, ಈ ನಾಲ್ಕು ದಿನದಲ್ಲಿ ಕೇವಲ 12,201 ಮಂದಿ ಮಾತ್ರ ಗುಣಮುಖರಾಗಿದ್ದಾರೆ. ಈ ನಾಲ್ಕು ದಿನದಲ್ಲಿ 98 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕರ್ನಾಟಕದಲ್ಲಿ ಕೊರೋನಾ ಅಟ್ಟಹಾಸ: ಭಾನುವಾರದ ಜಿಲ್ಲಾವಾರು ಅಂಕಿ-ಸಂಖ್ಯೆ ಇಲ್ಲಿದೆ

ಸೆಪ್ಟಂಬರ್‌ನಲ್ಲಿ ಅತಿ ಕಡಿಮೆ ಸಾವು:

ಭಾನುವಾರ ನಗರದಲ್ಲಿ ಕೇವಲ 15 ಮಂದಿ ಮಾತ್ರ ಕೊರೋನಾ ಸೋಂಕಿನಿಂದ ಮೃತಪಟ್ಟಿವರದಿಯಾಗಿದೆ. ಇದು ಸೆಪ್ಟಂಬರ್‌ ತಿಂಗಳಲ್ಲಿ ಒಂದು ದಿನದಲ್ಲಿ ಮೃತಪಟ್ಟವರದಿಯಾದ ಅತಿ ಕಡಿಮೆ ಸಂಖ್ಯೆಯಾಗಿದೆ. ಕಳೆದ ಆಗಸ್ಟ್‌ 23ರಂದು ನಗರದಲ್ಲಿ 5 ಮಂದಿ ಮೃತಪಟ್ಟಿದ್ದರು. ಅದಾದ ನಂತರ 20ಕ್ಕಿಂತ ಹೆಚ್ಚು ಮಂದಿ ಪ್ರತಿ ದಿನ ಮೃತಪಟ್ಟವರದಿಯಾಗಿತ್ತು.

ಸಕ್ರಿಯ ಕೇಸ್‌: ದೇಶದಲ್ಲಿ ಬೆಂಗಳೂರಿಗೆ 2ನೇ ಸ್ಥಾನ

ದೇಶದಲ್ಲಿ ಸೋಂಕು ಪ್ರಕರಣದಲ್ಲಿ ಬೆಂಗಳೂರು ಮೂರನೇ ಸ್ಥಾನದಲ್ಲಿ ಇದೆ. ಆದರೆ, ಕೊರೋನಾ ಸೋಂಕಿನ ಸಕ್ರಿಯ ಪ್ರಕರಣದಲ್ಲಿ ದೆಹಲಿ, ಮುಂಬೈ ನಗರಗಳಿಗಿಂತ ಹೆಚ್ಚಿನ ಪ್ರಕರಣಗಳು ಬೆಂಗಳೂರಿನಲ್ಲಿ ಇವೆ. ಪುಣೆ ಮೊದಲ ಸ್ಥಾನದಲ್ಲಿ 57,535 ಸಕ್ರಿಯ ಪ್ರಕರಣಗಳಿವೆ, ಎರಡನೇ ಸ್ಥಾನದಲ್ಲಿ ಬೆಂಗಳೂರಿನಲ್ಲಿ 44,274 ಪ್ರಕರಣಗಳಿವೆ. ದೆಹಲಿ ಮತ್ತು ಮುಂಬೈನಲ್ಲಿ 29,717 ಹಾಗೂ 28,691 ಸಕ್ರಿಯ ಪ್ರಕರಣಗಳಿವೆ.
 

Follow Us:
Download App:
  • android
  • ios