ರೈತರ ಕಬ್ಬಿನ ಬಾಕಿ 400 ಕೋಟಿ: ಸಕ್ಕರೆ ಸಚಿವ ಶಿವಾನಂದ ಪಾಟೀಲ

ಬಾಕಿ ಉಳಿಸಿಕೊಂಡಿರುವ ಈ 400 ಕೋಟಿ ಬಾಕಿ ಬಿಲ್‌ ಅನ್ನು ಕಬ್ಬು ನುರಿಸುವ ಹಂಗಾಮು ಆರಂಭಕ್ಕೂ ಮುನ್ನವೇ ಕೊಡುತ್ತೇವೆ. ಬಿಲ್‌ ಯಾರದ್ದೇ ಬಾಕಿ ಇರಲಿ, ನಿರಾಣಿಯವರದ್ದು ಬಾಕಿದ್ದರೆ ಕೊಡಲೇಬೇಕು ಕೊಡುತ್ತಾರೆ. ರೈತರಿಗೆ ಬಾಕಿ ಬಿಲ್‌ ಕೊಡಿಸುವ ಪ್ರಯತ್ನ ಮಾಡುತ್ತೇವೆ ಎಂದ ಸಕ್ಕರೆ ಸಚಿವ ಶಿವಾನಂದ ಪಾಟೀಲ

400 Crores of Sugarcane Pending of Farmers Says Shivanand Patil grg

ಬೆಳಗಾವಿ(ಜೂ.22): ರಾಜ್ಯದಲ್ಲಿನ ಸಕ್ಕರೆ ಕಾರ್ಖಾನೆಗಳು ಸುಮಾರು 400 ಕೋಟಿ ಬಿಲ್‌ ಬಾಕಿ ಉಳಿಸಿಕೊಂಡಿದ್ದು, ಕಬ್ಬು ನುರಿಸುವ ಮುಂಗಾರು ಹಂಗಾಮು ಆರಂಭಕ್ಕೂ ಮುನ್ನವೇ ಕೋಡುತ್ತೇವೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ನಗರದಲ್ಲಿರುವ ಎಸ್‌.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಕಿ ಉಳಿಸಿಕೊಂಡಿರುವ ಈ 400 ಕೋಟಿ ಬಾಕಿ ಬಿಲ್‌ ಅನ್ನು ಕಬ್ಬು ನುರಿಸುವ ಹಂಗಾಮು ಆರಂಭಕ್ಕೂ ಮುನ್ನವೇ ಕೊಡುತ್ತೇವೆ. ಬಿಲ್‌ ಯಾರದ್ದೇ ಬಾಕಿ ಇರಲಿ, ನಿರಾಣಿಯವರದ್ದು ಬಾಕಿದ್ದರೆ ಕೊಡಲೇಬೇಕು ಕೊಡುತ್ತಾರೆ. ರೈತರಿಗೆ ಬಾಕಿ ಬಿಲ್‌ ಕೊಡಿಸುವ ಪ್ರಯತ್ನ ಮಾಡುತ್ತೇವೆ ಎಂದರು.

ಪ್ರಾಕೃತಿಕ ವಿಕೋಪ ಎದುರಿಸಲು ಸನ್ನದ್ಧರಾಗಿ: ಸಚಿವ ಸತೀಶ ಜಾರಕಿಹೊಳಿ ಸೂಚನೆ

ಸಕ್ಕರೆ ಕಾರ್ಖಾನೆಗಳು ರೈತರಿಗೆ ತೂಕದಲ್ಲಿ ಮೋಸ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಕ್ಕರೆ ಕಾರ್ಖಾನೆಗಳ ಸಭೆ ಕರೆಯುತ್ತಿದ್ದೇವೆ. ಅಲ್ಲದೇ ಇನ್ನೊಂದು ಹೆಜ್ಜೆ ಮುಂದೆ ಹೋಗಿ ನಾವೇ ಸರ್ಕಾರದಿಂದ ತೂಕದ ಮಷಿನ್‌ ಹಾಕಬೇಕು ಎಂಬ ಚಿಂತನೆಯಿದೆ. ಅದನ್ನು ಒಂದೇ ರಾತ್ರಿಯಲ್ಲಿ ನಿರ್ಧಾರ ಮಾಡಲು ಆಗುವುದಿಲ್ಲ. ಖಂಡಿತ ಪರಿಸ್ಥಿತಿ ಅನಿವಾರ್ಯ ಆಯಿತು ಎಂದರೆ ಹಾಕಲೇಬೇಕಾಗುತ್ತದೆ ಎಂದರು.

ಸಾಕಷ್ಟು ಕಾರ್ಖಾನೆಗಳು ಲಾಭ ಮಾಡಿಕೊಳ್ಳುತ್ತವೆ. ಆದರೆ ಸರ್ಕಾರಕ್ಕೆ, ಸಂಸ್ಥೆಗೆ ಏನೂ ಸಹಾಯ ಕೊಟ್ಟಿಲ್ಲ ಎಂಬುವುದು ನನ್ನ ಗಮನಕ್ಕೆ ಬಂದಿದೆ. ಕೆಲವು ಮಹಾಶಯರು ಒಂದು ಟನ್‌ ಕಬ್ಬಿಗೆ ಒಂದು ರುಪಾಯಿಯನ್ನೂ ಕೊಟ್ಟಿಲ್ಲ. ಅವರಿಗೊಂದು ಸಣ್ಣ ತಡೆಯಾಜ್ಞೆ ತರಲು ಇವರು ಬಿಟ್ಟು ಬಿಟ್ಟಿದ್ದಾರೆ. ಆದರೆ ಮಹಾರಾಷ್ಟ್ರ ಕಾರ್ಖಾನೆಗಳು ಸಕ್ಕರೆ ಸಂಸ್ಥೆಗೆ ಪ್ರತಿ ಟನ್‌ ಕಬ್ಬಿಗೆ .30 ಕೊಡುತ್ತವೆ. ನಾವು ಇಲ್ಲಿ ಎರಡು ರುಪಾಯಿ ಇರೋದನ್ನು ಒಂದು ರುಪಾಯಿ ಕೇಳುತ್ತಿದ್ದೇವೆ. ಒಂದು ಟನ್‌ಗೆ ಕಾರ್ಖಾನೆಗಳು .600 ರಿಂದ .800 ಉಳಿಸುತ್ತವೆ. ನಾವು ಈಗ ಆ ಗೊಂದಲಕ್ಕೆ ಹೋಗುವುದು ಬೇಡ, ಅವರು ಲಾಭ ಮಾಡಿ ಬದುಕಲಿ. ರೈತನೂ ಬದುಕಬೇಕು. ಸರ್ಕಾರ ರೈತರಿಗೆ ಉಚಿತ ನೀರು, ಉಚಿತ ವಿದ್ಯುತ್‌ ಕೊಡುತ್ತದೆ ಎಂದರು.

ಸಕ್ಕರೆ ಸಂಸ್ಥೆ ವಿರುದ್ಧ ಅಸಮಾಧಾನ

ನಗರದಲ್ಲಿರುವ ಎಸ್‌.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಗೆ ಬುಧವಾರ ಭೇಟಿ ನೀಡಿದ ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು, ನಿರೀಕ್ಷೆಗೆ ತಕ್ಕ ಹಾಗೆ ಈ ಸಕ್ಕರೆ ಸಂಸ್ಥೆಯನ್ನು ನಾವು ಬೆಳೆಸಿಲ್ಲ ಎಂದು ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಕಾರ್ಯವೈಖರಿ ಬಗ್ಗೆ ಬೇಸರ ಹೊರಹಾಕಿದರು. ಶುಗರ್‌ ಇಂಡಸ್ಟ್ರಿ ಬೆಳೆಯುವುದರ ಜತೆಗೆ ಹೊಸ ಆವಿಷ್ಕಾರ ಆಗುತ್ತಿದೆ, ಇಥೆನಾಲ್‌ ಉತ್ಪಾದನೆಗೆ ನಾವು ಒತ್ತು ಕೊಡಬೇಕು. ಆ ನಿಟ್ಟಿನಲ್ಲಿ ಈ ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಬೆಳೆಸಬೇಕಿದೆ. ಅದಕ್ಕಾಗಿ ಸರ್ಕಾರದ ಮುಂದೆ ಏನೆಲ್ಲಾ ವಿಚಾರಗಳನ್ನು ತೆಗೆದುಕೊಂಡು ಹೋಗಬೇಕು? ಇನ್ನೂ ಹೆಚ್ಚಿನ ಲಾಭ ಜನರಿಗೆ, ಸಮಾಜಕ್ಕೆ, ದೇಶಕ್ಕೆ, ಸರ್ಕಾರಕ್ಕೂ ಆಗಬೇಕಿದೆ ಎಂದರು.

Latest Videos
Follow Us:
Download App:
  • android
  • ios