ವಾಹನ ಸವಾರರೇ ಗಮನಿಸಿ ಇನ್ಮುಂದೆ ಇಲ್ಲಿ ಸಂಚಾರ ಮಾಡುವಾಗ ವಾಹನ 40 ಕಿ.ಮೀ ವೇಗ ಮಿತಿ ದಾಟುವಂತಿಲ್ಲ ಎಂದು ಕಠಿಣ ಆದೇಶ ಹೊರಡಿಸಲಾಗಿದೆ. 

ಚಾಮರಾಜನಗರ (ಏ.03): ಸಾರ್ವಜನಿಕರ ರಕ್ಷಣೆ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಮತ್ತು ಅಪಘಾತ ತಪ್ಪಿಸುವ ಸಲುವಾಗಿ ಚಾಮರಾಜನಗರ ಪಟ್ಟಣ ನಗರಸಭಾ ವ್ಯಾಪ್ತಿಯಲ್ಲಿ ಮುಖ್ಯ ರಸ್ತೆಗಳಲ್ಲಿ ವಾಹನಗಳ ವೇಗ ಮಿತಿಯನ್ನು 40. ಕಿ.ಮೀ ನಿಗದಿ​ಪಡಿಸಿ, ಏ.1 ರಿಂದ ಜಾರಿಗೆ ಬರುವಂತೆ ಜಿಲ್ಲಾ​ಧಿಕಾರಿ ಡಾ. ಎಂ.ಆರ್‌.ರವಿ ಆದೇಶ ಹೊರಡಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 209 ರಲ್ಲಿ ಸಂತೇಮರಹಳ್ಳಿ ರಸ್ತೆಯ ದೊಡ್ಡರಾಯಪೇಟೆ ಗೇಟಿನಿಂದ ಕ್ರಮವಾಗಿ ಸಂತೇಮರಹಳ್ಳಿ ವೃತ್ತ, ಭುವನೇಶ್ವರಿ ವೃತ್ತ, ಸುಲ್ತಾನ್‌ ಷರೀಪ್‌ ವೃತ್ತ, ಸತ್ಯಮಂಗಲ ರಸ್ತೆ ಮಾರ್ಗವಾಗಿ ಸೋಮವಾರ ಪೇಟೆ ಬಳಿ ಹೊಸದಾಗಿ ನಿರ್ಮಾಣವಾಗುತ್ತಿರುವ ಬೈಪಾಸ್‌ ರಸ್ತೆಯ ವರೆಗೆ ವೇಗಮಿತಿಯನ್ನು 40 ಕಿ.ಮೀ ಗೆ ನಿಗ​ದಿಗೊಳಿಸಿದೆ.

ಟ್ಯಾಕ್ಸಿ ಪ್ರಯಾಣ ಇನ್ನು ಭಾರೀ ದುಬಾರಿ ..

ರಾಷ್ಟ್ರೀಯ ಹೆದ್ದಾರಿ 150ಎ ನಲ್ಲಿ ನಂಜನಗೂಡು ರಸ್ತೆಯಲ್ಲಿ ನಂಜನಗೂಡು ರಿಂಗ್‌ ರೋಡ್‌ ರಸ್ತೆಯಿಂದ ಸಂತೇಮರಹಳ್ಳಿ ವೃತ್ತದವರೆಗೆ 40 ಕಿ.ಮೀ ಗೆ ನಿಗದಿ​ಗೊಳಿಸಿದೆ. ರಾಜ್ಯ ಹೆದ್ದಾರಿ 81ರಲ್ಲಿ ಗುಂಡ್ಲುಪೇಟೆ ರಸ್ತೆಯ ಮೂಡಲಪುರ ಕ್ರಾಸಿನಿಂದ ಸುಲ್ತಾನ್‌ ಷರೀಪ್‌ ವೃತ್ತದವರೆಗೆ 40 ಕಿ ಮೀ ಗೆ ನಿಗ​ಧಿಗೊಳಿಸಿದೆ. ರಾಜ್ಯ ಹೆದ್ದಾರಿ 80ರಲ್ಲಿ ಬಿಳಿಗಿರಿರಂಗನ ಬೆಟ್ಟರಸ್ತೆಯ ಬೂದಿತಿಟ್ಟು ಗ್ರಾಮದ ಕ್ರಾಸಿನಿಂದ ರಾಮಸಮುದ್ರ. ಬಿ. ರಾಚಯ್ಯ ಜೋಡಿ ರಸ್ತೆ ಮಾರ್ಗವಾಗಿ ಭುವನೇಶ್ವರಿ ವೃತ್ತದವರೆಗೆ. 40 ಕಿ ಮೀ ಗೆ ನಿಗಧಿ​ಗೊಳಿಸಲಾಗಿದೆ ಎಂದು ಜಿಲ್ಲಾಧಿ​ಕಾರಿ ಡಾ. ಎಂ.ಆರ್‌. ರವಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.