ಕಾರವಾರ(ಜು.01): ಉತ್ತರ ಕನ್ನಡದಲ್ಲಿ ಕೋವಿಡ್‌ -19 ಮಂಗಳವಾರ ಹೊಸ ದಾಖಲೆ ಬರೆದಿದೆ. ಬರೊಬ್ಬರಿ 40 ಜನರಿಗೆ ಸೋಂಕು ತಗುಲಿರುವುದು ಖಚಿತವಾಗಿದೆ.

ಭಟ್ಕಳದಲ್ಲಿ ಎರಡು ಸೋಂಕಿತರಿಂದ 21 ಜನರಿಗೆ ತಗುಲಿದೆ. ಹಳಿಯಾಳಕ್ಕೆ ಬಂದ 8 ಜನರಲ್ಲಿ, ಮುಂಡಗೋಡಿನಲ್ಲಿ ಸೋಂಕಿತನಿಂದ ಇಬ್ಬರಿಗೆ, ಅಂಕೋಲಾ ಸೋಂಕಿತನಿಂದ 5 ಜನರಿಗೆ ಕೋವಿಡ್‌ -19 ಹಬ್ಬಿದೆ.

ಸಿದ್ದರಾಮಯ್ಯ ವಿರುದ್ಧ ಸಂಸದ ಪ್ರತಾಪ್‌ ಸಿಂಹ ಕಿಡಿ

ಮುಂಡಗೋಡಿನ ಪಿ -10178 ರ ಸಂಪರ್ಕಕ್ಕೆ ಬಂದ 12 ವರ್ಷದ ಬಾಲಕ, 17 ವರ್ಷದ ಬಾಲಕಿ, ಮಹಾರಾಷ್ಟ್ರದಿಂದ ಕುಮಟಾಕ್ಕೆ ಬಂದ 7 ವರ್ಷದ ಬಾಲಕ, 16 ವರ್ಷದ ಯುವಕ, 35 ವರ್ಷದ ಮಹಿಳೆಯಲ್ಲಿ, ಗೋಕರ್ಣಕ್ಕೆ ಬಂದ 27 ವರ್ಷದ ಯುವತಿಯಲ್ಲಿ, ಅಂಕೋಲಾದ ಸೋಂಕಿತ ಪಿ- 10648ರ ಪ್ರಾಥಮಿಕ ಸಂಪರ್ಕಕ್ಕೆ ಬಂದ 25 ವರ್ಷದ ಯುವಕ, 65 ವರ್ಷದ ಮಹಿಳೆ, 49 ವರ್ಷದ ಮಹಿಳೆ, 72 ವರ್ಷದ ವೃದ್ಧ, 33 ವರ್ಷದ ಮಹಿಳೆಯಲ್ಲಿ ಪಾಸಿಟಿವ್‌ ಬಂದಿದೆ.

ಪಿ- 13314ರ ಪ್ರಾಥಮಿಕ ಸಂಪರ್ಕಕ್ಕೆ ಬಂದ ಭಟ್ಕಳದ 1 ವರ್ಷದ ಮಗು, 12 ವರ್ಷದ ಬಾಲಕ, 51 ವರ್ಷದ ಪುರುಷ, 58 ವರ್ಷದ ಇಬ್ಬರು ಪುರುಷರಲ್ಲಿ, 43 ವರ್ಷದ ಪುರುಷನಲ್ಲಿ, ಮಂಗಳೂರಿನಿಂದ ಭಟ್ಕಳಕ್ಕೆ ಬಂದ 39 ವರ್ಷದ ಪುರುಷ ಖಚಿತವಾಗಿದೆ.

ಬಳ್ಳಾರಿ: ಮಹಾಮಾರಿ ಕೊರೋನಾಗೆ ಮತ್ತೆ ಆರು ಸಾವು: ಕಳೆದ 4 ದಿನಗಳಲ್ಲಿ 20 ಬಲಿ

ಪಿ- 13314ರ ಪ್ರಾಥಮಿಕ ಸಂಪರ್ಕಕ್ಕೆ ಬಂದ ಭಟ್ಕಳದ 32, 43, 46 ವರ್ಷದ ಮಹಿಳೆಯಲ್ಲಿ, 7 ವರ್ಷದ ಬಾಲಕಿ, 15 ವರ್ಷದ ಬಾಲಕ, 24 ವರ್ಷದ ಯುವಕನಲ್ಲಿ, ಪಿ -12407ರ ಪ್ರಾಥಮಿಕ ಸಂಪರ್ಕಕ್ಕೆ ಬಂದ ಭಟ್ಕಳದ 60, 48 ವರ್ಷದ ಪುರುಷರಲ್ಲಿ, 14, 16 ವರ್ಷದ ಬಾಲಕಿಯರಲ್ಲಿ, 18 ವರ್ಷದ ಯುವಕ, 15 ವರ್ಷದ ಬಾಲಕನಲ್ಲಿ, 15 ವರ್ಷದ ಬಾಲಕಿ, 55 ವರ್ಷದ ಪುರುಷನಲ್ಲಿ ದೃಢಪಟ್ಟಿದೆ.

ಸೋಂಕಿತರ ಶವ ಗುಂಡಿಗೆಸೆದರು: ಒಂದೇ ಗುಂಡಿಗೆ 8 ಶವ!

ಮಹಾರಾಷ್ಟ್ರದ ಮೀರಜ್‌ನಿಂದ ಹಳಿಯಾಳಕ್ಕೆ ಬಂದ 21 ವರ್ಷದ ಯುವತಿ, 4 ವರ್ಷದ ಮಗು, ಆಂಧ್ರಪ್ರದೇಶದಿಂದ ಹಳಿಯಾಳಕ್ಕೆ ಬಂದ 48 ವರ್ಷದ ಪುರುಷ, ಗುಜರಾತಿನಿಂದ ಹಳಿಯಾಳಕ್ಕೆ ಬಂದ 51 ವರ್ಷದ ಮಹಿಳೆ, ಮಹಾರಾಷ್ಟ್ರದಿಂದ ಹಳಿಯಾಳಕ್ಕೆ ಬಂದ 12 ವರ್ಷದ ಬಾಲಕಿ, 28 ವರ್ಷದ ಯುವತಿ, 72 ವರ್ಷದ ವೃದ್ಧೆ, 76 ವರ್ಷದ ವೃದ್ಧನಲ್ಲಿ ಸೋಂಕು ಕಾಣಿಸಿಕೊಂಡಿದೆ.