ತುಮಕೂರು, [ಮೇ.11]:  ಟ್ರಾಕ್ಟರ್ ಪಲ್ಟಿಯಾಗಿ ನಾಲ್ವರು ಸಾವನ್ನಪ್ಪಿರುವ ದಾರುಣ ಘಟನೆ ಇಂದು [ಶನಿವಾರ] ತುಮಕೂರಿನ ತಿಪಟೂರು ತಾಲ್ಲೂಕು ಹತ್ಯಾಳು ನರಸಿಂಹಸ್ವಾಮಿ ಬೆಟ್ಟದಲ್ಲಿ ನಡೆದಿದೆ.

ಮೃತರು ಮತ್ತು ಗಾಯಾಳುಗಳು ಚಿಕ್ಕನಾಯಕನಹಳ್ಳಿ ತಾಲೂಕಿನ‌ ಮಾದಾಪುರ ಗ್ರಾಮದವರು.  ಟ್ರಾಕ್ಟರ್ ಚಾಲಕ ಶಿವಲಿಂಗಪ್ಪ (45), ಶಂಕರಮ್ಮ(45), ದೊಡ್ಡಲಿಂಗಯ್ಯ (40) ಮೃತ ದುರ್ದೈವಿಗಳು. 

7 ವರ್ಷದ ಭುವನ್ ಆಸ್ಪತ್ರೆಗೆ ತೆರಳುವಾಗ ಮಾರ್ಗ ‌ಮಧ್ಯೆ ಕೊನೆಯುಸಿರೆಳೆದಿದ್ದಾನೆ. ಟ್ರಾಕ್ಟರ್​​ನಲ್ಲಿ ಸುಮಾರು 12 ಜನರಿದ್ದರು ಎಂದು ತಿಳಿದುಬಂದಿದೆ.

ನರಸಿಂಹ ಸ್ವಾಮಿ ದೇವಾಲಯದಿಂದ ವಾಪಸ್ಸಾಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.  ಕಡಿದಾದ ಇಳಿಜಾರು ಇದ್ದಿದ್ದರಿಂದ ನಿಯಂತ್ರಣಕ್ಕೆ ಬಾರದ ಟ್ರಾಕ್ಟರ್ ಪಲ್ಟಿಯಾಗಿದೆ.