ದೊಡ್ಡ ಕಮರಹಳ್ಳಿ ಗ್ರಾಮದ ಹಾರಂಗಿ ನಾಲೆಯ ಏರಿ ಮೇಲೆ ವ್ಯಾನ್ ಚಲಿಸುತ್ತಿದ್ದಾಗ ಆಯತಪ್ಪಿ ನಾಲೆಗೆ ಉರುಳಿದೆ.
ಮೈಸೂರು[ಆ.06]: ನಾಲೆಗೆ ವ್ಯಾನ್ ಉರುಳಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕು
ದೊಡ್ಡ ಕಮರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೂಲತಃ ಕೊಡಗು ಜಿಲ್ಲೆಯ ನಾಪೋಕ್ಲು ಗ್ರಾಮದ ಪಳನಿಸ್ವಾಮಿ, ಪತ್ನಿ ಸಂಜು, ಪುತ್ರ ನಿಖಿತ್, ಪುತ್ರಿ ಪೂರ್ಣಿಮಾ ಮೃತರು. ದೊಡ್ಡ ಕಮರಹಳ್ಳಿ ಗ್ರಾಮದ ಹಾರಂಗಿ ನಾಲೆಯ ಏರಿ ಮೇಲೆ ವ್ಯಾನ್ ಚಲಿಸುತ್ತಿದ್ದಾಗ ಆಯತಪ್ಪಿ ನಾಲೆಗೆ ಉರುಳಿದೆ. ಬೆಟ್ಟದಪುರ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
