ಬಿಜೆಪಿ ಶಾಸಕ ನಿರಾಣಿ ಒಡೆತನದ ಫ್ಯಾಕ್ಟರಿಯಲ್ಲಿ ಸ್ಫೋಟ: 6 ಜನ ಸಾವು

ಚಾಮರಾಜನಗರ ಜಿಲ್ಲೆಯ ಪ್ರಸಾದ ದುರಂತ ಮಾಸುವ ಮುನ್ನವೇ ಬಾಗಲಕೋಟೆ ಜಿಲ್ಲೆಯಲ್ಲಿ ಮತ್ತೊಂದು ದುರಂತ ಸಂಭವಿಸಿದೆ.

4 killed after blast indistillery unit at Kulali Bagalkot District

ಬಾಗಲಕೋಟೆ, [ಡಿ.16]: ಜಿಲ್ಲೆಯ ಮುಧೋಳ ತಾಲೂಕಿನ ಕುಳಲಿ ಬಳಿ ಇರುವ ಡಿಸ್ಟಿಲರಿ ಫ್ಯಾಕ್ಟರಿಯ ಬಾಯ್ಲರ್ ಬ್ಲಾಸ್ಟ್​ ಆಗಿ 6 ಕಾರ್ಮಿಕರು ದುರ್ಮರಣ ಹೊಂದಿದ್ದಾರೆ. 

ಹಾಗೇ ಐವರ ಸ್ಥಿತಿ ಚಿಂತಾಜನಕ ಎನ್ನಲಾಗಿದೆ. ಈ ಡಿಸ್ಟರ್ ಫ್ಯಾಕ್ಟರಿಯು ಮಾಜಿ ಸಚಿವ ಮುರುಗೇಶ್ ನಿರಾಣಿ ಅವರಿಗೆ ಸೇರಿದೆ.

ಮುರುಗೇಶ್ ನಿರಾಣಿ ಅವರು ಹಲವು ವರ್ಷಗಳಿಂದ ಈ ಫ್ಯಾಕ್ಟರಿಯನ್ನ ನಡೆಸಿಕೊಂಡು ಬರುತ್ತಿದ್ದಾರೆ. ಇಂದು [ಭಾನುವಾರ] ಮಧ್ಯಹ್ನ 12 ಗಂಟೆ ಸುಮಾರಿಗೆ ಫ್ಯಾಕ್ಟರಿಯ ಬಾಯ್ಲರ್ ಸ್ಫೋಟಗೊಂಡು ದುರ್ಘಟನೆ ನಡೆದಿದೆ. 

ಸಾವು ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಸದ್ಯ, ಮುಧೋಳ ಪೊಲೀಸರು ಸ್ಥಳಕ್ಕೆ ಬಂದು ಘಟನೆ ಹೇಗೆ ನಡೆಯಿತು ಅನ್ನೋದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

Latest Videos
Follow Us:
Download App:
  • android
  • ios