ಕುಮಟಾದ ಒಂದೇ ಕುಟುಂಬದ ನಾಲ್ವರಲ್ಲಿ ಸೋಂಕು ದೃಢ?

ಕುಮಟಾ ಪಟ್ಟಣದ ಹೆರವಟ್ಟಾಮೂಲದ ಒಂದೇ ಕುಟುಂಬದ ನಾಲ್ವರಲ್ಲಿ ಶನಿವಾರ ಕೊರೋನಾ ಸೊಂಕು ದೃಢಪಟ್ಟಿದ್ದು, ಮುಂಬೈನಿಂದ ಕುಮಟಾಕ್ಕೆ ಬಂದು ಕ್ವಾರಂಟೈನ್‌ ಕೇಂದ್ರದಲ್ಲಿದ್ದರು.

4 from same family suspected covid19 positive in uttara kannada

ಉತ್ತರ ಕನ್ನಡ(ಮೇ 31): ಕುಮಟಾ ಪಟ್ಟಣದ ಹೆರವಟ್ಟಾಮೂಲದ ಒಂದೇ ಕುಟುಂಬದ ನಾಲ್ವರಲ್ಲಿ ಶನಿವಾರ ಕೊರೋನಾ ಸೊಂಕು ದೃಢಪಟ್ಟಿದ್ದು, ಮುಂಬೈನಿಂದ ಕುಮಟಾಕ್ಕೆ ಬಂದು ಕ್ವಾರಂಟೈನ್‌ ಕೇಂದ್ರದಲ್ಲಿದ್ದರು.

ಮಹಾರಾಷ್ಟ್ರ ರಾಜ್ಯದ ಮಂಬೈದಿಂದ ಮೇ 26ರಂದು ಕುಮಟಾಕ್ಕೆ ಬಂದು ನೇರವಾಗಿ ಸರ್ಕಾರಿ ಆಸ್ಪತ್ರೆಗೆ ಬಂದು ಆರೋಗ್ಯ ತಪಾಸಣೆ ಮಾಡಿಕೊಂಡಿದ್ದರು. ಇವರಲ್ಲಿ ಓರ್ವ ವ್ಯಕ್ತಿಗೆ ಸಂಶಯದ ಆಧಾರದಲ್ಲಿ ಸರ್ಕಾರಿ ಆಸ್ಪತ್ರೆಯ ನಿಗಾ ಘಟಕದಲ್ಲಿ ಇಡಲಾಗಿತ್ತು. ಇನ್ನುಳಿದ ಮೂವರನ್ನು ಕೊಂಕಣ ಏಜುಕೇಶನ್‌ ಶಿಕ್ಷಣ ಸಂಸ್ಥೆಯ ಸರ್ಕಾರಿ ಕ್ವಾರಟೈನ್‌ನಲ್ಲಿ ಇಡಲಾಗಿತ್ತು.

ಬೆಕ್ಕಿಗೆ ಹಾಲುಣಿಸುವ ಶ್ವಾನ: ಒಂದನ್ನೊಂದೊ ಬಿಟ್ಟಿರಲಾರದಷ್ಟು ಮಮತೆ

ಈ ಸಂದರ್ಭದಲ್ಲಿ ಅವರೆಲ್ಲರ ಗಂಟಲು ದ್ರವವನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಪತಿ, ಪತ್ನಿ, ಮಗ ಹಾಗೂ ಸಂಬಂಧಿ ಹುಡುಗ ಸೇರಿದಂತೆ ನಾಲ್ವರಿಗೆ ಸೋಂಕು ದೃಢಪಟ್ಟಿದೆ. ಇವರೆಲ್ಲರನ್ನೂ ಕಾರವಾರದ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ರವಾನಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಎಂ. ಅಜಿತ್‌ ತಿಳಿಸಿದ್ದಾರೆ. ಇದರಿಂದಾಗಿ ಕುಮಟಾದಲ್ಲಿ ಸೋಂಕಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.

ಮತ್ತೆ ಆತಂಕದಲ್ಲಿ ಕುಮಟಾದ ಜನತೆ:

ಲಾಕ್‌ಡೌನ್‌ ಸಂದರ್ಭದಲ್ಲಿ ನಿಶ್ಚಿಂತೆಯಿಂದ ಇದ್ದ ತಾಲೂಕಿನ ಜನತೆ ಕುಮಟಾದಲ್ಲಿ ಮಹಾರಾಷ್ಟ್ರದ ರತ್ನಾಗಿರಿಯಿಂದ ಬಂದ ವನ್ನಳ್ಳಿ ಮೂಲದ ವ್ಯಕ್ತಿಗೆ ಕೊರೋನಾ ದೃಢಪಡುತ್ತಿದ್ದಂತೆ ಹೌಹಾರಿದರು. ದೂರದ ಬೆಂಗಳೂರು ಇನ್ನಿತರ ಕಡೆ ಕೊರೋನಾ ಪ್ರಕರಣಗಳು ವರದಿಯಾಗುತ್ತಿದ್ದಂತೆ ನಮ್ಮೂರಿಗೆ ಬರುವ ಸಾಧ್ಯತೆ ಇಲ್ಲ ಎನ್ನುವ ಭಾವನೆಯಲ್ಲಿ ತಮ್ಮಷ್ಟಕ್ಕೆ ತಾವಿದ್ದರು. ಮೊದಲ ಪ್ರಕರಣ ವರದಿಯಾದ ಹಿನ್ನೆಲೆಯಲ್ಲಿ ಮನೆಯಿಂದ ಹೊರ ಹೋಗಲು ಹಿಂದೇಟು ಹಾಕಿದ್ದರು. ಅಂದು ರತ್ನಾಗಿರಿಯಿಂದ ಬಂದ ವ್ಯಕ್ತಿ ನೇರವಾಗಿ ಪೊಲೀಸರ ಕೈಗೆ ಸಿಕ್ಕು ಕ್ವಾರಂಟೈನ್‌ ಕೇಂದ್ರದಲ್ಲಿರುವುದರಿಂದ ಆತನಿಂದ ಇನ್ನಿತರರಿಗೆ ಸೋಂಕು ಹರಡುವುದಿಲ್ಲ. ಆತನನ್ನು ಕಾರವಾರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎನ್ನುವ ಕಾರಣದಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಈ ನಡುವೆ ಶನಿವಾರ ಮತ್ತೆ ಒಂದೇ ಕುಟುಂಬದ ನಾಲ್ವರಲ್ಲಿ ಕೊರೋನಾ ದೃಢಪಡುತ್ತಿದ್ದಂತೆ ಜನತೆ ಆತಂಕದಲ್ಲಿದ್ದಾರೆ.

ಮಂಗಳೂರಿನಲ್ಲಿ ನಾಳೆ ಖಾಸಗಿ ಬಸ್ಸು‌ ಶುರು: ಹೀಗಿದೆ ಸಿದ್ಧತೆ

ಶನಿವಾರ ದೃಢಪಟ್ಟನಾಲ್ವರು ಒಂದೇ ಕುಟುಂಬದವರು. ಅವರು ಮುಂಬೈನಿಂದ ಮೇ 26ಕ್ಕೆ ಬಂದು ಕ್ವಾರಂಟೈನ್‌ ಕೇಂದ್ರದಲ್ಲಿ ಇದ್ದಾರೆ. ಇವರ ಬಗ್ಗೆ ತಾಲೂಕು ಆಡಳಿತ ಹೆಚ್ಚಿನ ಮುತುವರ್ಜಿ ವಹಿಸಿತ್ತು. ಇವರಿಗೆ ಯಾವುದೇ ಟ್ರಾವಲ್‌ ಹಿಸ್ಟರಿ ಇಲ್ಲ. ಇವರನ್ನು ಕಾರವಾರದ ಕೋವಿಡ್‌ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ತಾಲೂಕಿನ ಜನತೆ ಯಾವುದೇ ಆತಂಕಕ್ಕೆ ಒಳಗಾಗಬಾರದು. ಕೊರೋನಾ ಯಾವುದೇ ರೀತಿಯಿಂದ ಸಮುದಾಯಕ್ಕೆ ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಆದರೆ, ಸಾರ್ವಜನಿಕರು ವಿದೇಶದಿಂದ ಅಥವಾ ಬೇರೆ ರಾಜ್ಯದಿಂದ ಬಂದವರು ಆರೋಗ್ಯವಾಗಿದ್ದರೂ ತಾಲೂಕು ಆಡಳಿತಕ್ಕೆ ಮಾಹಿತಿ ನೀಡಬೇಕು. ಏಕಾಏಕಿ ಹೊರಗಡೆಯಿಂದ ಬಂದು ಗೌಪ್ಯವಾಗಿ ಮನೆಯಲ್ಲಿ ಉಳಿದರೆ ಅಂತವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು. ಈ ಕುರಿತು ಗ್ರಾಮಸ್ಥರು ತಾಲೂಕು ಆಡಳಿತಕ್ಕೆ ಅಥವಾ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಉಪವಿಭಾಗಾಧಿಕಾರಿ ಎಂ. ಅಜಿತ್‌ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios