ಚಿತ್ರದುರ್ಗ[ಜು. 17]  ಟೈರ್  ಬ್ಲಾಸ್ಟ್ ಆಗಿ ಲಾರಿ ಮತ್ತು ಕಾರು ಡಿಕ್ಕಿಯಾಗಿದ್ದು  ಚಾಲಕ ಸೇರಿ ಮೂವರು ಮಹಿಳೆಯರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕಾರಿನಲ್ಲಿ 2 ಮಕ್ಕಳು ಸೇರಿ 8 ಜನ ಪ್ರಯಾಣಿಸುತ್ತಿದ್ದರು. ಇಬ್ಬರು ಮಕ್ಕಳು ಸೇರಿ ನಾಲ್ವರಿಗೆ ಗಂಭೀರ ಗಾಯಗಳಾಗಿವೆ. 

ಬೆಂಗಳೂರಿನಿಂದ ಬಾದಾಮಿ ಬನಶಂಕರಿಗೆ ತೆರಳುವಾಗ ದುರ್ಘಟನೆ ಸಂಭವಿಸಿದೆ. ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ 4ರ ಕುಂಚಿಗನಾಳ್ ಬಳಿ ಅಪಘಾತವಾಗಿದ್ದು  ಅಶೋಕ್, ಪ್ರವಿತಾ,  ಮಂಜುಳಾ, ಶೋಭಾ, ಸುಕನ್ಯಾ,ಶ್ರೇಷ್ಠ ಕಾರಿನಲ್ಲಿದ್ದವರು.  ಇವರು ಬೆಂಗಳೂರಿನ  RR ನಗರ ನಿವಾಸಿಗಳು ಎಂದು ತಿಳಿದುಬಂದಿದೆ.

ಇನೋವಾ ಕಾರಿನಲ್ಲಿ ಒಂದೇ ಕುಟುಂಬದ ಒಟ್ಟು ಎಂಟು ಜನರಿದ್ದರು. ಬೆಂಗಳೂರಿನಿಂದ ಬದಾಮಿಯ ಬನಶಂಕರಿ ದೇಗುಲಕ್ಕೆ ತೆರಳುತ್ತಿದ್ದರು. ಕಾರು ಟೈರ್ ಬರ್ಸ್ಟ್ ಆಗಿ ಅಪಘಾತ ನಡೆದಿದೆ. ಮೃತರನ್ನು  ಅಶೋಕ (35), ಶಾಮಲಾ (60)  ಮೃತರು ಎಂದು ಗುರುತಿಸಲಾಗಿದೆ. ಇನ್ನಿಬ್ಬರ  ಗುರುತು ಪತ್ತೆ ಆಗಬೇಕಿದೆ ಎಂದು ಚಿತ್ರದುರ್ಗ ಎಸ್ಪಿ ಡಾ.ಕೆ.ಅರುಣ್  ಮಾಹಿತಿ ನೀಡಿದ್ದಾರೆ.