ಮಂಗಳೂರು(ಮೇ 26): ಲಾಕ್‌ಡೌನ್‌ನಿಂದ ಸ್ಥಗಿತಗೊಂಡ ದೇಶೀಯ ವಿಮಾನಯಾನ ಆರಂಭದ ಮೊದಲ ದಿನವಾದ ಸೋಮವಾರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈ, ಬೆಂಗಳೂರು ಮತ್ತು ಚೆನ್ನೈಗೆ ನಾಲ್ಕು ವಿಮಾನ ಸಂಚಾರವನ್ನು ರದ್ದುಗೊಳಿಸಲಾಗಿದೆ.

ಪ್ರಯಾಣಿಕರ ಕೊರತೆಯಿಂದ ವಿಮಾನಯಾನ ರದ್ದು ಮಾಡಿರುವುದಾಗಿ ಏರ್‌ಪೋರ್ಟ್‌ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಬೆಂಗಳೂರಿಗೆ ರಾತ್ರಿ 2 ವಿಮಾನಗಳು ಸಂಚಾರ ನಡೆಸಿವೆ.

23,236 ಉತ್ತರ ಭಾರತ ಕಾರ್ಮಿಕರು ಮರಳಿ ಊರಿಗೆ

ಬೆಂಗಳೂರು, ಮುಂಬೈ, ಚೆನ್ನೈಗೆ ಸ್ಪೈಸ್‌ಜೆಟ್‌ ಮತ್ತು ಇಂಡಿಗೋದ ಒಟ್ಟು ಆರು ವಿಮಾನಗಳನ್ನು ನಿಗದಿಪಡಿಸಿ, ವೇಳಾಪಟ್ಟಿಯನ್ನೂ ಪ್ರಕಟಿಸಲಾಗಿತ್ತು. ಆರು ವಿಮಾನಗಳು ದಿನಂಪ್ರತಿ 12 ಟ್ರಿಪ್‌ಗಳನ್ನು ಮಾಡಬೇಕಿತ್ತು. ಆದರೆ ಮುಂಬೈ ಮತ್ತು ಚೆನ್ನೈಗೆ ಕರಾವಳಿ ಜನರು ಹೋಗಲು ಹಿಂದೇಟು ಹಾಕಿದ್ದರಿಂದ ಪ್ರಯಾಣಿಕರ ಕೊರತೆ ಉಂಟಾಗಿ ನಾಲ್ಕು ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

ಮುಂಬೈಗೆ ಎಸ್‌ಜಿ 353 ಮತ್ತು 6ಇ 5328 ವಿಮಾನಗಳನ್ನು ರದ್ದುಪಡಿಸಲಾಗಿದ್ದು, 6ಇ7139 ವಿಮಾನ ಚೆನ್ನೆ ೖಗೆ ಮತ್ತು ಎಸ್‌ಜಿ 1027 ವಿಮಾನ ಬೆಂಗಳೂರಿಗೆ ರದ್ದಾಗಿದೆ. ಈ ಎಲ್ಲ ವಿಮಾನಗಳು ಸೋಮವಾರ ಬೆಳಗ್ಗೆ ಪ್ರಯಾಣಿಕರನ್ನು ಕರೆತಂದು ಮರಳಿ ಪ್ರಯಾಣಿಕರನ್ನು ಹೊತ್ತು ಹೊರಡಬೇಕಿತ್ತು.

ದಕ್ಷಿಣ ಕನ್ನಡದಲ್ಲಿ ಮತ್ತೆ ನಾಲ್ವರಿಗೆ ಕೊರೋನಾ, ಒಂದು ಬಲಿ

ಕೊರೋನಾ ಲಾಕ್‌ಡೌನ್‌ ಜಾರಿಗೊಳಿಸಿದ ಮಾಚ್‌ರ್‍ 22ರ ನಂತರ ಅಂತಾರಾಷ್ಟ್ರೀಯ ವಿಮಾನಯಾನ ಸೇವೆಗಳು ಸ್ಥಗಿತಗೊಂಡಿದ್ದು, ಮಾಚ್‌ರ್‍ 25ರ ನಂತರ ದೇಶೀಯ ವಿಮಾನಗಳನ್ನು ಸ್ಥಗಿತಗೊಳಿಸಲಾಗಿತ್ತು. ಈ ನಡುವೆ ವಂದೇ ಭಾರತ್‌ ಮಿಷನ್‌ ಅಡಿಯಲ್ಲಿ ಮೇ 12ರಿಂದ ಮೂರು ವಿಮಾನಗಳು ಕೊಲ್ಲಿ ರಾಷ್ಟ್ರಗಳಿಂದ ಬಂದಿವೆ. ಇದೀಗ ದೇಶೀಯ ವಿಮಾನಯಾನ ಸೇವೆ ಕೂಡ ಆರಂಭವಾಗಿದೆ.

ಯಾವಾಗ ಬೇಕಾದರೂ ರದ್ದಾಗಬಹುದು!

ಸ್ಪೈಸ್‌ಜೆಟ್‌ ಕಂಪೆನಿಯು ಮೇ 27ರವೆರೆಗೆ ಮುಂಬೈ- ಮಂಗಳೂರು ಸಂಚಾರವನ್ನು ರದ್ದುಗೊಳಿಸಿರುವುದಾಗಿ ಪ್ರಕಟಿಸಿದೆ. ಆದರೆ ಪ್ರಯಾಣಿಕರ ಕೊರತೆ ಇದ್ದರೆ ಉಳಿದ ವಿಮಾನಗಳು ಕೂಡ ಯಾವ ಸಂದರ್ಭದಲ್ಲೂ ರದ್ದಾಗುವ ಸಾಧ್ಯತೆಗಳಿವೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಸ್ಪೈಸ್‌ಜೆಟ್‌ ಮತ್ತು ಇಂಡಿಗೋ ವಿಮಾನಗಳ ವೇಳಾಪಟ್ಟಿಪ್ರಕಟಿಸಿದ್ದರೂ ಕಾಲಕಾಲಕ್ಕೆ ಇದರ ಬದಲಾವಣೆ ಆಗಲಿದೆ.