Asianet Suvarna News Asianet Suvarna News

23,236 ಉತ್ತರ ಭಾರತ ಕಾರ್ಮಿಕರು ಮರಳಿ ಊರಿಗೆ

ಲಾಕ್‌ಡೌನ್‌ ಸಮಯಲ್ಲಿ ಮಂಗಳೂರಿನಲ್ಲಿ ಸಿಲುಕಿಕೊಂಡು ಊರಿಗೆ ತೆರಳಲು ಹಪಹಪಿಸುತ್ತಿದ್ದ ಉತ್ತರ ಭಾರತದ ಕಾರ್ಮಿಕರಿಗೆ ಸೋಮವಾರವೂ ಶ್ರಮಿಕ್‌ ವಿಶೇಷ ರೈಲಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಂಗಳೂರು ಜಂಕ್ಷನ್‌ನಿಂದ ಸಂಜೆ 4.25ಕ್ಕೆ ಹೊರಟ ಈ ರೈಲು 1,224 ಕಾರ್ಮಿಕರನ್ನು ಹೊತ್ತು ಜಾರ್ಖಂಡ್‌ನತ್ತ ಪ್ರಯಾಣ ಬೆಳೆಸಿದೆ.

More than 20 thousand north india migrant workers go home from mangalore
Author
Bangalore, First Published May 26, 2020, 7:52 AM IST

ಮಂಗಳೂರು(ಮೇ 26): ಲಾಕ್‌ಡೌನ್‌ ಸಮಯಲ್ಲಿ ಮಂಗಳೂರಿನಲ್ಲಿ ಸಿಲುಕಿಕೊಂಡು ಊರಿಗೆ ತೆರಳಲು ಹಪಹಪಿಸುತ್ತಿದ್ದ ಉತ್ತರ ಭಾರತದ ಕಾರ್ಮಿಕರಿಗೆ ಸೋಮವಾರವೂ ಶ್ರಮಿಕ್‌ ವಿಶೇಷ ರೈಲಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಂಗಳೂರು ಜಂಕ್ಷನ್‌ನಿಂದ ಸಂಜೆ 4.25ಕ್ಕೆ ಹೊರಟ ಈ ರೈಲು 1,224 ಕಾರ್ಮಿಕರನ್ನು ಹೊತ್ತು ಜಾರ್ಖಂಡ್‌ನತ್ತ ಪ್ರಯಾಣ ಬೆಳೆಸಿದೆ.

ಇದುವರೆಗೆ ಮಂಗಳೂರು ಜಂಕ್ಷನ್‌ ಮೂಲಕ 17 ಶ್ರಮಿಕ್‌ ರೈಲುಗಳನ್ನು ಉತ್ತರ ಭಾರತಕ್ಕೆ ಕಳುಹಿಸಿಕೊಡಲಾಗಿದ್ದು, ಒಟ್ಟಾರೆಯಾಗಿ 23,236 ಮಂದಿ ತಮ್ಮೂರಿಗೆ ತೆರಳಿದಂತಾಗಿದೆ.

ದಕ್ಷಿಣ ಕನ್ನಡದಲ್ಲಿ ಮತ್ತೆ ನಾಲ್ವರಿಗೆ ಕೊರೋನಾ, ಒಂದು ಬಲಿ

ಬಿಹಾರಕ್ಕೆ 4 ರೈಲುಗಳು, ಜಾರ್ಖಂಡ್‌ಗೆ 6, ರಾಜಸ್ತಾನಕ್ಕೆ 1, ಉತ್ತರಪ್ರದೇಶಕ್ಕೆ 6 ರೈಲುಗಳ ವ್ಯವಸ್ಥೆ ಮಾಡಲಾಗಿತ್ತು. ಬಿಹಾರಕ್ಕೆ ಇದುವರೆಗೆ ಒಟ್ಟು 5540 ಮಂದಿ ತೆರಳಿದ್ದರೆ, ಜಾರ್ಖಂಡ್‌ಗೆ ಅತಿ ಹೆಚ್ಚು 8262 ಕಾರ್ಮಿಕರು ಹೋಗಿದ್ದಾರೆ. ರಾಜಸ್ತಾನದ 1,104 ಕಾರ್ಮಿಕರು ಊರು ಸೇರಿದ್ದರೆ, ಉತ್ತರ ಪ್ರದೇಶದ 8,116 ಮಂದಿ ಪ್ರಯಾಣ ಬೆಳೆಸಿದ್ದಾರೆ.

ಚುನಾವಣೆ ಮುಂದಕ್ಕೆ, ಮುಂಬೈ ಸಹೋದರರನ್ನು ಕರೆಸಿಕೊಳ್ತೀವಿ: ನಳಿನ್

ರೈಲ್ವೆಯ ಪಾಲಕ್ಕಾಡ್‌ ವಿಭಾಗದಿಂದ ಒಟ್ಟು 40 ಶ್ರಮಿಕ್‌ ವಿಶೇಷ ರೈಲುಗಳನ್ನು ಉತ್ತರ ಭಾರತಕ್ಕೆ ಕಳುಹಿಸಲಾಗಿದ್ದು, ಇದುವರೆಗೆ 52,593 ಕಾರ್ಮಿಕರು 2 ತಿಂಗಳ ಬಳಿಕ ಕೊನೆಗೂ ಹುಟ್ಟೂರು ತಲುಪಿದ್ದಾರೆ.

Follow Us:
Download App:
  • android
  • ios