ಬೆಂಗಳೂರಿಗೆ ತೆರಳುತ್ತಿದ್ದ SRS ಬಸ್ - ಮ್ಯಾಕ್ಸಿ ಕ್ಯಾಬ್ ನಡುವೆ ಭೀಕರ ಅಪಘಾತ-ಸ್ಥಳದಲ್ಲೇ 4 ಸಾವು

  •  ಎಸ್.ಆರ್.ಎಸ್ ಬಸ್ ಹಾಗೂ ಮ್ಯಾಕ್ಸಿ ಕ್ಯಾಬ್ ನಡುವೆ ಭೀಕರ  ಅಪಘಾತ 
  •  ಭೀಕರ  ಅಪಘಾತ ಸಂಭವಿಸಿದ್ದು ನಾಲ್ವರು ಸ್ಥಳದಲ್ಲೇ ಸಾವು
4 dead in Spot in bus Maxi cab collision in  Tumkur snr

ತುಮಕೂರು (ಅ.17): ಎಸ್.ಆರ್.ಎಸ್ ಬಸ್ (SRS Bus) ಹಾಗೂ ಮ್ಯಾಕ್ಸಿ ಕ್ಯಾಬ್ (Maxi Cab) ನಡುವೆ ಭೀಕರ  ಅಪಘಾತ (Accident) ಸಂಭವಿಸಿದ್ದು ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು ಇಬ್ಬರ ಸ್ಥಿತಿ ಗಂಭೀರವಾಗಿದೆ.

"

ತುಮಕೂರಿನ‌ (Tumakur)  ಹೆಗ್ಗೆರೆ ಸಮೀಪದ ಗೊಲ್ಲಹಳ್ಳಿ ಬಳಿ ಮುಂಜಾನೆ 5.30ರ ಸುಮಾರಿಗೆ ಅಪಘಾತವಾಗಿದೆ.  ತುಮಕೂರು - ಶಿವಮೊಗ್ಗ (Shivamogga) ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. 

ಶಿವಮೊಗ್ಗದಿಂದ ಬೆಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್ (Private Bus)  ಹಾಗೂ  ತುಮಕೂರು ಮಾರುಕಟ್ಟೆಯಿಂದ (Market) ಚಿಕ್ಕನಾಯಕನಹಳ್ಳಿ ಹೋಗುತ್ತಿದ್ದ ಅಶೋಕ ಲೈಲ್ಯಾಂಡ್ (Ashok Leyland) ಗಾಡಿ ಡಿಕ್ಕಿಯಾಗಿವೆ.  

ಮೃತ ನಾಲ್ವರು ಅಶೋಕ ಲೈಲ್ಯಾಂಡ್ ವಾಹನದಲ್ಲಿದ್ದರು. ಮೃತರಲ್ಲಿ ಓರ್ವ ಮಹಿಳೆ, ಮೂವರು ಪುರುಷರಿದ್ದಾರೆ. ಅದರಲ್ಲಿ ಓರ್ವನ ಗುರುತು ಪತ್ತೆಯಾಗಿದ್ದು,  ತುರುವೇಕೆರೆ (Turuvekere) ಮೂಲದ ದರ್ಶನ್ ಎಂದು ಗುರುತಿಸಲಾಗಿದೆ. ಉಳಿದವರ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ.  

KH 51 - AH 6979 ನಂಬರ್ ಬಸ್ ,  KA 06- KB 1555 ನಂಬರ್ ಮ್ಯಾಕ್ಸಿ ಕ್ಯಾಬ್ ಸಂಖ್ಯೆಯ ವಾಹನಗಳು ಅಪಘಾತಕ್ಕೆ ಈಡಾಗಿವೆ. 

ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿ ಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರಿದಿದೆ.

ಬೆಂಗಳೂರಲ್ಲಿ ಹೆಚ್ಚುತ್ತಿವೆ ಅಪಘಾತ 

 ನಗರದಲ್ಲಿ ಸುರಿದ ಧಾರಾಕಾರ ಮಳೆಗೆ ಪ್ರಮುಖ ರಸ್ತೆಗಳು, ಅಂಡರ್‌ ಪಾಸ್‌ಗಳು ಸಂಪೂರ್ಣ ಜಲಾವೃತವಾಗಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಜನಜೀವನ ಅಸ್ತವ್ಯಸ್ತವಾಗುತ್ತಿದೆ.

ಬೆಂಗಳೂರಿನಲ್ಲಿ ಭಾರೀ ಮಳೆ, ಮುಳುಗಿದ ರಸ್ತೆ, ಕಾರು, ಬೈಕುಗಳು ಜಖಂ, ಕೊಟ್ಟಿಗೆ ನೀರುಪಾಲು

ಶಿವಾನಂದ ಸರ್ಕಲ್‌, ಕೆ.ಆರ್‌. ಮಾರುಕಟ್ಟೆ, ಕೆ.ಆರ್‌. ಸರ್ಕಲ್‌, ಇನ್‌ಫೆಂಟ್ರಿ ರಸ್ತೆ, ಶಿವಾಜಿ ನಗರ, ಮೈಸೂರು ರಸ್ತೆ, ನಾಯಂಡಹಳ್ಳಿ ಜಂಕ್ಷನ್‌, ಓಕಳೀಪುರಂ ರಸ್ತೆ ಅಂಡರ್‌ಪಾಸ್‌, ಸುಜಾತ, ರಾಜಭನದ ರಸ್ತೆ, ಲಿಂಗರಾಜಪುರಂ ಅಂಡರ್‌ ಪಾಸ್‌ ಸೇರಿದಂತೆ ನಗರದ ಪ್ರಮುಖ ರಸ್ತೆಗಳು ಕೆರೆಯಂತಾಗಿದ್ದವು.  ಮಾಗಡಿ ರಸ್ತೆಯ ಸುಂಕದಕಟ್ಟೆ ಬಳಿ ರಸ್ತೆಯುದ್ದಕ್ಕೂ ಗುಂಡಿಗಳು ಬಿದ್ದಿವೆ. ಇದರಿಂದ ವಾಹನ ಸವಾರರು ಪರದಾಡಬೇಕಾದ ಸ್ಥಿತಿ ಇದೆ. ಬೆಂಗಳೂರಿನ ರಸ್ತೆಗಳಲ್ಲಿ ಸಂಚಾರ ಮಾಡುವುದೇ ಅತ್ಯಂತ ದುಸ್ಥರವಾಗಿದೆ. ಆದರೆ ಈ ಬಗ್ಗೆ ಮಾತ್ರ ಕ್ರಮ ಕೈಗೊಳ್ಳಬೆಕಾಗಿರುವವರು ಕ್ಯಾರೆ ಎನ್ನುತ್ತಿಲ್ಲ. ನಿತ್ಯವೂ ಸವಾರರ ಪರದಾಟ ಮಾತ್ರ ತಪ್ಪುತ್ತಿಲ್ಲ.

Latest Videos
Follow Us:
Download App:
  • android
  • ios