Asianet Suvarna News Asianet Suvarna News

ಇನ್ನೂ 4 ದಿನ ಮಳೆ: ಹಲವು ಜಿಲ್ಲೆಗಳಿಗೆ ಯಲ್ಲೋ ಅಲರ್ಟ್‌

  •  ರಾಜ್ಯದ ಉತ್ತರ ಒಳನಾಡಿನ ಬಹುತೇಕ ಪ್ರದೇಶಗಳಲ್ಲಿ ಮಂಗಳವಾರ ಗುಡುಗು ಸಹಿತ ಜೋರು ಮಳೆ
  • ಏ.16ರವರೆಗೆ ನಾಡಿನಾದ್ಯಂತ ಮಳೆ ಮುಂದುವರಿಕೆ
  •  ಹಲವು ಜಿಲ್ಲೆಗಳಿಗೆ ‘ಯಲ್ಲೋ ಅಲರ್ಟ್‌’ ಎಚ್ಚರಿಕೆ
4 Days heavy Monsoon Rain Alerts to many Districts Of Karnataka snr
Author
Bengaluru, First Published Jul 8, 2021, 7:21 AM IST

ಬೆಂಗಳೂರು (ಜು.08):  ರಾಜ್ಯದ ಉತ್ತರ ಒಳನಾಡಿನ ಬಹುತೇಕ ಪ್ರದೇಶಗಳಲ್ಲಿ ಮಂಗಳವಾರ ಗುಡುಗು ಸಹಿತ ಜೋರು ಮಳೆ ಸುರಿದಿದೆ. ಏ.16ರವರೆಗೆ ನಾಡಿನಾದ್ಯಂತ ಮಳೆ ಮುಂದುವರಿಯಲಿದ್ದು, ಹಲವು ಜಿಲ್ಲೆಗಳಿಗೆ ‘ಯಲ್ಲೋ ಅಲರ್ಟ್‌’ ಎಚ್ಚರಿಕೆ ನೀಡಲಾಗಿದೆ.

ಉತ್ತರ ಒಳನಾಡಿನ ಭಾಗದಲ್ಲಿ ಭೂಮಿ ಮೇಲ್ಮೈನಲ್ಲಿ ಸುಳಿಗಾಳಿ ತೀವ್ರಗೊಂಡ ಪರಿಣಾಮ ಉತ್ತರ ಒಳನಾಡಿನ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಗುಡುಗು ಸಹಿತ ಧಾರಾಕಾರ ಮಳೆ ಆಗಿದೆ. ಬಿಸಿಲಿನಿಂದ ಬಸವಳಿದಿದ್ದ ಜನರಿಗೆ ಹೊಸ ವರ್ಷದ ಮೊದಲ ಮಳೆ ತಂಪೆರೆದಿದೆ.

ಪಶ್ಚಿಮ ಕರಾವಳಿಯುದಕ್ಕೂ ಜುಲೈ 8 ರಿಂದ ಮಳೆ; ಆದರೂ ಆತಂಕ ತಗ್ಗಿಲ್ಲ! ...

ಕಲಬುರಗಿ, ಬೆಳಗಾವಿ, ಧಾರವಾಡ, ಬಾಗಲಕೋಟೆ ಜಿಲ್ಲೆಗಳಲ್ಲಿ ಗುಡುಗು ಸಹಿತ ಜೋರು ಮಳೆಯಾಗಿದೆ. ವಿಜಯಪುರ, ಬೀದರ್‌, ಹಾವೇರಿ, ಗದಗ ಕಡೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಮಳೆ ಬಂದಿದೆ. ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಚಿಕ್ಕಮಗಳೂರಿನ ಒಂದೆರಡು ಕಡೆಗಳಲ್ಲಿ ಕೆಲ ಕಾಲ ಮಳೆ ಬಿರುಸಾಗಿತ್ತು. ಉಳಿದಂತೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಭಾಗದ ಕೆಲವು ಪ್ರದೇಶಗಳಲ್ಲಿ ಅಲ್ಲಲ್ಲಿ ತುಂತುರು ಮಳೆ ಸುರಿದಿದೆ. ಮಳೆಯಿಂದ ರಾಜ್ಯದಲ್ಲಿ ಏರುಗತಿಯಲ್ಲಿದ್ದ ತಾಪಮಾನದ ಪ್ರಮಾಣ ಕುಸಿದಿದೆ.

ಮಂಗಳವಾರ ಕಲಬುರಗಿ, ಧಾರವಾಡ ಜಿಲ್ಲೆಯ ಕಲಘಟಗಿ, ಬೆಳಗಾವಿಯ ನಿಪ್ಪಾಣಿಯಲ್ಲಿ ತಲಾ 3 ಸೆಂ.ಮೀ., ಉತ್ತರ ಕನ್ನಡದ ಕಿರವತ್ತಿ, ಧಾರವಾಡದ ಕುಂದಗೋಳ, ಕಲಬುರಗಿ ಸೇಡಂ, ಚಿಕ್ಕಮಗಳೂರಿನ ಶಂಗೇರಿ ತಲಾ 2 ಸೆಂ.ಮೀ. ಮಳೆ ಆಗಿದೆ. ರಾಯಚೂರಿನಲ್ಲಿ (37.4 ಡಿಗ್ರಿ ಸೆಲ್ಸಿಯಸ್‌) ರಾಜ್ಯದ ಗರಿಷ್ಠ ತಾಪಮಾನ ಹಾಗೂ ಧಾರವಾಡದಲ್ಲಿ (18.9ಡಿ.ಸೆ.) ಕನಿಷ್ಠ ತಾಪಮಾನ ದಾಖಲಾಗಿದೆ.

ಮಳೆಗಾಲದಲ್ಲಿ ಕಾಡುವ ಜ್ವರದಿಂದ ಮಕ್ಕಳ ರಕ್ಷಣೆ ಮಾಡುವುದು ಹೇಗೆ.? ಡಾಕ್ಟ್ರು ಹೀಗಂತಾರೆ ...

ಇಂದು, ನಾಳೆ ಯಲ್ಲೋ ಅಲರ್ಟ್‌

ಹೆಚ್ಚು ಮಳೆ ಬೀಳುವ ಸಂಭವ ಇರುವ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳು ಮತ್ತು ದಕ್ಷಿಣ ಒಳನಾಡಿನ ಶಿವಮೊಗ್ಗ, ಮೈಸೂರು, ಕೊಡಗು, ಹಾಸನ, ಚಿಕ್ಕಮಗಳೂರು, ಬಳ್ಳಾರಿ, ಚಾಮರಾಜನಗರಕ್ಕೆ ಏ.15 ಮತ್ತು 16ರಂದು ಎರಡು ದಿನ ಹಾಗೂ ಕೊಪ್ಪಳ ಮತ್ತು ಗದಗ ಜಿಲ್ಲೆ ಹೊರತುಪಡಿಸಿ ಉತ್ತರ ಒಳನಾಡಿನ ಎಲ್ಲ ಜಿಲ್ಲೆಗಳಿಗೆ ಏ.15ರಂದು ಮಾತ್ರ ‘ಯೆಲ್ಲೋ ಅಲರ್ಟ್‌’ ಘೋಷಿಸಲಾಗಿದೆ. ಏ.17 ಮತ್ತು 18ರಂದು ರಾಜ್ಯದ ಕೆಲವೆಡೆ ಮಾತ್ರ ತುಂತುರು ಮಳೆ ಬೀಳುವ ಸಾಧ್ಯತೆ ಇದೆ.

Follow Us:
Download App:
  • android
  • ios