Asianet Suvarna News Asianet Suvarna News

ಪೊಲೀಸ್ ಚೆಕಿಂಗ್ ವೇಳೆ ಸಿಕ್ಕಿಬಿದ್ದ ಕಳ್ಳರು : ನಾಲ್ಕನೆ ಬಾರಿ ಅರೆಸ್ಟ್

  •  ಮೂರು ಬಾರಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದವರು ನಾಲ್ಕನೇ ಬಾರಿಗೆ ಅಂದರ್ 
  • ಬೆಂಗಳೂರಿನ ಹನುಮಂತನಗರ ಠಾಣೆ ಪೊಲೀಸರಿಂದು ವೆಹಿಕಲ್ ಚೆಕಿಂಗ್ ಮಾಡುವ ವೇಳೆ  ಲಾಕ್
  • ಚಾಕು ಹಾಗೂ ಡ್ಯಾಗರ್ ತೋರಿಸಿ ಮೊಬೈಲ್ ಹಾಗೂ ಬೈಕ್ ಕಸಿಯುತ್ತಿದ್ದ ಕಳ್ಳರು,
4 Arrested For Theft Case in Bangalore snr
Author
Bengaluru, First Published May 31, 2021, 3:25 PM IST

ಬೆಂಗಳೂರು (ಮೇ.31):  ಪೊಲೀಸ್ ಚೆಕಿಂಗ್ ವೇಳೆ  ಕಳ್ಳರು ಸಿಕ್ಕಿ ಬಿದ್ದಿದ್ದಾರೆ.  ಮೂರು ಬಾರಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದವರು ನಾಲ್ಕನೇ ಬಾರಿಗೆ ಅಂದರ್ ಆಗಿದ್ದಾರೆ.

ಬೆಂಗಳೂರಿನ ಹನುಮಂತನಗರ ಠಾಣೆ ಪೊಲೀಸರಿಂದು ವೆಹಿಕಲ್ ಚೆಕಿಂಗ್ ಮಾಡುವ ವೇಳೆ ಕುಖ್ಯಾತ ಕಳ್ಳರು ಲಾಕ್ ಆಗಿದ್ದಾರೆ.  ಮೊಹಮ್ಮದ್ ಯೂಸುಫ್(19), ಮೊಹಮ್ಮದ್ ತೌಸಿಫ್(19), ಶ್ರೀನಿವಾಸ್(22) ಹಾಗೂ ಸೈಯ್ಯದ್ ಸಾಹೇಬ(22) ಬಂಧಿತರು.

ಚಾಕು ಹಾಗೂ ಡ್ಯಾಗರ್ ತೋರಿಸಿ ಮೊಬೈಲ್ ಹಾಗೂ ಬೈಕ್ ಕಸಿಯುತ್ತಿದ್ದ ಕಳ್ಳರು,  ಕಳೆದ ಮೇ 25 ರಂದು ಬೆಳಗಿನ ಜಾವ ಹನುಮಂತನಗರದಲ್ಲಿ ಶಬರೀಶ್ ಎಂಬುವವರಿಗೆ ಚಾಕು ತೋರಿಸಿ ಬೈಕ್ ಕಸಿದಿದ್ದರು. ಇಂದು ಕಳ್ಳರು ಸಿಕ್ಕಿಬಿದ್ದಿದ್ದಾರೆ.

ಟೂಲ್‌ಕಿಟ್ ಜಟಾಪಟಿ: ಟ್ವಿಟರ್ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಹೇಳಿಕೆಗೆ ದೆಹಲಿ ಪೊಲೀಸರ ತಿರುಗೇಟು! ..

 ಮೈಸೂರಿನಲ್ಲಿ 1 ಸುಲಿಗೆ ಪ್ರಕರಣ, ಬ್ಯಾಟರಾಯನಪುರದ 1 ಕಳವು ಪ್ರಕರಣ, ಹನುಮಂತನಗರ ಠಾಣೆ ವ್ಯಾಪ್ತಿಯ ಒಂದು ಕಳವು   ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದರು. 

ಕಳೆದ 26 ರಂದು ಹನುಮಂತನಗರ ಪೊಲೀಸರು ವಾಹನ ತಪಾಸಣೆ ವೇಳೆ ಮಾರುತಿ 800 ಆಲ್ಟೋ ಕಾರಿನಲ್ಲಿ ರಸ್ತೆಗೆ ಬಂದಿದ್ದರು. ಪೊಲೀಸರು ವೆಹಿಕಲ್ ಚೆಕ್ಕಿಂಗ್ ಮಾಡಲಿಕ್ಕೆ ಬಂದಾಗ ಕಾರನ್ನ ರಸ್ತೆಯಲ್ಲಿ ಬಿಟ್ಟು ಓಡಿಹೋಗಿದ್ದರು.  ಆರೋಪಿಗಳನ್ನ ಬೆನ್ನತ್ತಿ ಹಿಡಿದಾಗ ಸುಲಿಗೆ ಹಾಗೂ ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ.  ಬಂಧಿತರಿಂದ 5.30 ಲಕ್ಷ ಬೆಲೆಬಾಳುವ 1 ಮಾರುತಿ ಆಲ್ಟೊ ಕಾರು ಹಾಗೂ 2 ಬೈಕ್ ವಶಕ್ಕೆ ಪಡೆಯಲಾಗಿದೆ. 

Follow Us:
Download App:
  • android
  • ios