ಬೆಂಗಳೂರು [ಫೆ.09]: ಕಳೆದ ಹದಿನೈದು ವರ್ಷಗಳಿಂದ ನಗರದಲ್ಲಿ ಹೈಟೆಕ್‌ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ರಾಜಾಜಿನಗರದ ಕುಮಾರ್‌ ಅಲಿಯಾಸ್‌ ಅಂಕಲ್‌ ಕುಮಾರ್‌, ಬಿಟಿಎಂ ಲೇಔಟ್‌ನ ಭರತ್‌ ಕುಮಾರ್‌, ಈಜಿಪುರದ ರಘು ಹಾಗೂ ಕೋಡಿ ಚಿಕ್ಕಹಳ್ಳಿ ಪ್ರಜ್ವಲ್‌ ಬಂಧಿತರು. 

ಮತ್ತೊಬ್ಬನ ಜೊತೆ ಪ್ರೇಯಸಿ ಎಂಗೇಜ್ಡ್ : ಡೆತ್ ನೋಟ್ ಬರೆದಿಟ್ಟು ಪ್ರಿಯಕರ ಸೂಸೈಡ್

ಹೊರ ರಾಜ್ಯಗಳಿಂದ ಯುವತಿಯರನ್ನು ಉದ್ಯೋಗ ಕೊಡಿಸುವ ನೆಪದಲ್ಲಿ ಕರೆತಂದು ವೇಶ್ಯಾವಾಟಿಕೆ ಕೂಪಕ್ಕೆ ತಳ್ಳುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಇಂಟರ್‌ನೆಟ್‌ನಲ್ಲಿ ವೇಶ್ಯಾವಾಟಿಕೆ ಬಗ್ಗೆ ಯುವತಿಯರ ಭಾವಚಿತ್ರ ಹಾಕಿ ಗಿರಾಕಿಗಳನ್ನು ಆರೋಪಿಗಳು ಸಂಪರ್ಕಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.