Asianet Suvarna News Asianet Suvarna News

ಶಿವನ ವಿಗ್ರಹದ ಮೇಲೆ ಅಸಭ್ಯ ರೀತಿಯಲ್ಲಿ ಟಿಕ್‌ ಟಾಕ್‌..!

ಹಿಂದೂ ರುದ್ರಭೂಮಿಯ ಶಿವನ ವಿಗ್ರಹದ ಪೀಠದ ಮೇಲೆ ಅಸಭ್ಯರೀತಿಯಲ್ಲಿ ಟಿಕ್‌ ಟಾಕ್‌ ಮಾಡಿ ಧಾರ್ಮಿಕ ಭಾವನೆ ಗಳಿಗೆ ಧಕ್ಕೆಯುಂಟು ಮಾಡಿದ ಆರೋಪದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

4 arrested for hurting religious sentiments by odd tiktok video on god shiva
Author
Bangalore, First Published Jun 14, 2020, 7:39 AM IST

ಬಂಟ್ವಾಳ(ಜೂ.14): ಹಿಂದೂ ರುದ್ರಭೂಮಿಯ ಶಿವನ ವಿಗ್ರಹದ ಪೀಠದ ಮೇಲೆ ಶೂ ಧರಿಸಿ ಓಡಾಟ ನಡೆಸಿ, ಅಸಭ್ಯರೀತಿಯಲ್ಲಿ ಟಿಕ್‌ ಟಾಕ್‌ ಮಾಡಿ ಧಾರ್ಮಿಕ ಭಾವನೆ ಗಳಿಗೆ ಧಕ್ಕೆಯುಂಟು ಮಾಡಿದ ಆರೋಪದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಸಜೀಪ ನಿವಾಸಿಗಳಾದ ಮಸೂದ್‌, ಅಜೀಮ್, ಅಬ್ದುಲ್‌ ಲತೀಪ್‌ ಹಾಗೂ ಅರ್ಪಾಜ್‌ ಬಂಧಿತ ಆರೋಪಿಗಳು. ಲಾಕ್‌ ಡೌನ್‌ನ ಈ ಅವಧಿಯಲ್ಲಿ ನಾಲ್ವರು ಆರೋಪಿಗಳು ಸಜೀಪದ ಕಂಚಿನಡ್ಕ ಪದವು ರುದ್ರ ಭೂಮಿಯೊಳಗೆ ಅಕ್ರಮವಾಗಿ ಪ್ರವೇಶ ಮಾಡಿ ಅಲ್ಲಿರುವ ಶಿವನ ವಿಗ್ರಹ ಪೀಠದ ಮೇಲೆ ಶೂಧರಿಸಿ ಕುಳಿತು ಕೊಂಡು ಓಡಾಟ ನಡೆಸಿದ್ದಾರೆ. ಈ ವಿಡಿಯೋ ಟಿಕ್‌ ಟಾಕ್‌ ಮೂಲಕ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಉಡುಪಿಯಲ್ಲಿ ‘ಮಹಾ’ ಕೊರೋನಾ ಕೇಕೆ: 80ನೇ ದಿನಕ್ಕೆ ಕೊರೋನಾ 1006 ನಾಟೌಟ್‌!

ಇದರ ಜೊತೆ ವಿಗ್ರಹ ದ ಸಮೀಪ ಬಿಯರ್‌ ಬಾಟಲಿ, ಗಾಂಜಾ ಸೇವನೆ ಮಾಡಿದ ಬಗ್ಗೆ ಸಾಕ್ಷ್ಯಗಳು ದೊರೆತಿವೆ. ಇದು ಹಿಂದು ಧಾರ್ಮಿಕ ಶ್ರದ್ಧಾ ಕೇಂದ್ರ ಕ್ಕೆ ಧಕ್ಕೆಯಾಗಿದೆ ಎಂದು ರುದ್ರಭೂಮಿ ಅಧ್ಯಕ್ಷ ಠಾಣೆ ಗೆ ದೂರು ನೀಡಿದ್ದರು.

ಕರ್ನಾಟಕದಲ್ಲಿ ಶನಿವಾರ ತ್ರಿಶತಕ ಬಾರಿಸಿದ ಕೊರೋನಾ: ಇಲ್ಲಿದೆ ಜಿಲ್ಲಾವಾರು ಮಾಹಿತಿ

ಈ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಡಿ.ವೈ.ಎಸ್‌.ಪಿ. ವೆಲಂಟೈನ್‌ ಡಿ.ಸೋಜ ಅವರ ನಿರ್ದೇಶನ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ ಅವರ ನೇತೃತ್ವದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣಾ ಎಸ್‌.ಐ .ಪ್ರಸನ್ನ ಅವರ ತಂಡ ಆರೋಪಿಗಳ ಬಂಧನದ ಕಾರ್ಯಚರಣೆ ನಡೆಸಿದ್ದು, ದೂರು ನೀಡಿದ ಕೆಲವೇ ಗಂಟೆಗಳಲ್ಲಿ ಪ್ರಸನ್ನ ಅವರ ತಂಡ ನಾಲ್ವರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

Follow Us:
Download App:
  • android
  • ios