Asianet Suvarna News Asianet Suvarna News

ಕೆಂಪೇಗೌಡ ಪ್ರಶಸ್ತಿಗೆ 380ಕ್ಕೂ ಅಧಿಕ ಅರ್ಜಿ

ಬೆಂಗಳೂರಿನ ವ್ಯಾಪ್ತಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಬಿಬಿಎಂಪಿ ನೀಡುವ ಕೆಂಪೇಗೌಡ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಜೂ.20 ಕಡೆ ದಿನವಾಗಿತ್ತು. 

380 applications for Kempegowda award of BBMP
Author
Bengaluru, First Published Jun 22, 2019, 8:43 AM IST

 ಬೆಂಗಳೂರು (ಜು.22): ಬಿಬಿಎಂಪಿ ವತಿಯಿಂದ ಕೊಡಮಾಡುವ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ಅಂತಿಮ ದಿನ ದಿನಾಂಕ ಜೂ.20ಕ್ಕೆ ಮುಕ್ತಾಯಗೊಂಡಿದ್ದು, ಪ್ರಶಸ್ತಿಗಾಗಿ 380ಕ್ಕೂ ಹೆಚ್ಚು ಅರ್ಜಿ ಬಂದಿವೆ.

ಕೆಂಪೇಗೌಡ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಲು ಜೂ.20ರ ವರೆಗೆ ಅವಕಾಶ ಕಲ್ಪಿಸಲಾಗಿತ್ತು. ವಿವಿಧ ಕ್ಷೇತ್ರಗಳಲ್ಲಿ ತಾವು ಸಲ್ಲಿಸಿರುವ ಸೇವೆ ಮತ್ತು ಸಾಧನೆಯನ್ನಾಧರಿಸಿ ತಮಗೆ ಪ್ರಶಸ್ತಿ ನೀಡುವಂತೆ ಕೋರಿ 380 ರಿಂದ 400 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಮೇಯರ್‌ ಕಚೇರಿಯಲ್ಲಿ ಅರ್ಜಿ ಪರಿಶೀಲಿಸಲಾಗುತ್ತಿದ್ದು, ತಜ್ಞರ ಸಮಿತಿ ರಚನೆ ನಂತರ ಸಮಿತಿಗೆ ಅದನ್ನು ಸಲ್ಲಿಸಲಾಗುತ್ತದೆ.

ಸಮಿತಿ, ಅರ್ಜಿಗಳ ಪರಿಶೀಲಿಸಿ ಅರ್ಹರನ್ನು ಆಯ್ಕೆ ಮಾಡುತ್ತದೆ. ಅವರು ಆಯ್ಕೆ ಮಾಡುವವರ ಹೆಸರುಗಳನ್ನು ಮೇಯರ್‌ ಅಧ್ಯಕ್ಷತೆಯ ಸಾಧಕರ ಆಯ್ಕೆ ಸಮಿತಿ ಮತ್ತೊಮ್ಮೆ ಪರಿಶೀಲಿಸಿ ಹೆಸರು ಅಂತಿಮಗೊಳಿಸಲಾಗುತ್ತದೆ.

ಪ್ರಶಸ್ತಿ ಸಂಖ್ಯೆಯಲ್ಲಿ ಇಳಿಕೆ

ಒಂದು ವಾರದಲ್ಲಿ ತಜ್ಞರ ಸಮಿತಿ:

ಕಳೆದ ವರ್ಷ 530ಕ್ಕೂ ಹೆಚ್ಚು ಜನರಿಗೆ ಪ್ರಶಸ್ತಿ ನೀಡಿ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪಕ್ಕೆ ಕಾರಣವಾಗಿತ್ತು. ಹೀಗಾಗಿ ಈ ಬಾರಿ ಪ್ರಶಸ್ತಿ ವಿತರಿಸಲು ಮಾನದಂಡ ವಿಧಿಸಬೇಕು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಮೇಯರ್‌ ಮತ್ತು ಆಯುಕ್ತರಿಗೆ ಸೂಚಿಸಿದ್ದರು. ಹೀಗಾಗಿ ಈ ಬಾರಿ ಪ್ರಶಸ್ತಿ ಪುರಸ್ಕೃತರ ಸಂಖ್ಯೆಯನ್ನು 100ಕ್ಕೆ ಕಡಿತಗೊಳಿಸಲಾಗುತ್ತಿದೆ. ಅಲ್ಲದೆ, ಪ್ರಶಸ್ತಿಗೆ ಅರ್ಹ ಸಾಧಕರನ್ನು ಆಯ್ಕೆ ಮಾಡಲು ಮೂವರು ತಜ್ಞರ ಸಮಿತಿಯನ್ನು ನೇಮಿಸಲು ಬಿಬಿಎಂಪಿ ಮುಂದಾಗಿದೆ. ಇನ್ನೊಂದು ವಾರದಲ್ಲಿ ಮೇಯರ್‌ ಅಧ್ಯಕ್ಷತೆಯ ಸಮಿತಿ ಸಭೆ ನಡೆಸಿ, ತಜ್ಞರ ಸಮಿತಿ ರಚಿಸಲಿದೆ.

ಸುವರ್ಣ ನ್ಯೂಸ್ ಕನ್ನಡ ಪ್ರಭದ ಐವರಿಗೆ ಪ್ರಶಸ್ತಿಯ ಗರಿ

Follow Us:
Download App:
  • android
  • ios